ಆಸ್ಪತ್ರೆಯಲ್ಲಿ ವ್ಯೆದ್ಯರು ಮತ್ತು ನರ್ಸ್ ಗಳು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಬಿಳಿ ಬಣ್ಣದ ಬಟ್ಟೆಯಿಂದಲೇ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಆದರೆ ಆಪರೇಷನ್ ವೇಳೆಯಲ್ಲಿ ಮಾತ್ರ ವ್ಯೆದ್ಯರು ಹಸಿರು ಬಣ್ಣದ ಮತ್ತು ಕಡುನೀಲಿ ಬಣ್ಣದ ವಸ್ತ್ರಗಳನ್ನು ಧರಿಸುತ್ತಾರೆ. ಹಾಗೆಯೇ ಹಾಸಿಗೆ ಮತ್ತು ದಿಂಬುಗಳು ಸಹ ಹಸಿರು ಅಥವಾ ಕಡುನೀಲಿ ಬಣ್ಣದಲ್ಲಿ ಇರುತ್ತದೆ. ಆದರೆ ಇದೇ ಬಣ್ಣದ ಬಟ್ಟೆಯನ್ನು ಬಳಸಲು ಕಾರಣವೇನು? ಇದು ಹಲವಾರು ಮಂದಿಗೆ ಗೊತ್ತಿಲ್ಲ. ನಾವು ಇಲ್ಲಿ ಆಸ್ಪತ್ರೆಯಲ್ಲಿ ಹಸಿರು ಅಥವಾ ಕಡುನೀಲಿ ಬಣ್ಣದ ಬಟ್ಟೆಗಳನ್ನೇ ಏಕೆ ಬಳಸುತ್ತಾರೆ ಎಂದು ತಿಳಿಯೋಣ.
ವೈದ್ಯರುಗಳು ಹಸಿರು ಮತ್ತು ಕಡುನೀಲಿ ಬಣ್ಣದ ಬಟ್ಟೆಯನ್ನು ಬಳಸಲು ಮುಖ್ಯ ಕಾರಣವೇನೆಂದರೆ ಇವೆರಡೂ ಬಣ್ಣಗಳು ಕೆಂಪು ಬಣ್ಣಕ್ಕೆ ವಿರುದ್ಧವಾಗಿರುತ್ತದೆ. ಕೆಂಪುಬಣ್ಣ ಹಸಿರು ಮತ್ತು ಕಡುನೀಲಿ ಬಣ್ಣದ ಬಟ್ಟೆಯ ಮೇಲೆ ಬಿದ್ದರೆ ತುಂಬಾ ಬೇಗ ಕಣ್ಣಿಗೆ ಕಾಣುತ್ತದೆ. ಅಂದರೆ ವ್ಯೆದ್ಯರುಗಳು ಆಪರೇಷನ್ ಮಾಡುವಾಗ ರೋಗಿಯ ರಕ್ತ ಹಾಸಿಗೆ ಮೇಲೆ ಅಥವಾ ಬಟ್ಟೆಯ ಮೇಲೆ ಬಿದ್ದರೆ ಕಣ್ಣಿಗೆ ಬೇಗ ಕಾಣಿಸುತ್ತದೆ. ಇದು ಒಂದು ಕಾರಣ ಆದರೆ ಮತ್ತೊಂದು ಕಾರಣ ಇದೆ. ಆ ಮತ್ತೊಂದು ಕಾರಣವೇನೆಂದರೆ ನೀವು ಬೇರೇ ಬಣ್ಣಗಳನ್ನು ತುಂಬಾ ಹೊತ್ತು ನೋಡಿದಾಗ ಕಣ್ಣಿಗೆ ಆಯಾಸವಾಗುತ್ತದೆ. ಆದರೆ ಹಸಿರು ಮತ್ತು ಕಡುನೀಲಿ ಬಣ್ಣವನ್ನು ಹೆಚ್ಚು ಸಮಯ ನೋಡುವುದರಿಂದ ಕಣ್ಣಿಗೆ ಆಯಾಸವಾಗುವುದಿಲ್ಲ.
ಕಡುನೀಲಿ ಮತ್ತು ಹಸಿರು ಬಣ್ಣಕ್ಕಿಂತ ಬಿಳಿ ಬಣ್ಣದ ಬಟ್ಟೆಯ ಮೇಲೆ ಕೆಂಪುಬಣ್ಣ ಬೇಗ ಕಾಣುತ್ತದೆ ಎಂದು ಎಲ್ಲರಿಗೂ ಅನಿಸುವುದು ಸಹಜ.ಬಿಳಿ ಬಣ್ಣದ ಬಟ್ಟೆಯನ್ನು ಬಳಸದೇ ಇರಲು ಕಾರಣವಿದೆ. ಏಕೆಂದರೆ ಆಪರೇಶನ್ ಮಾಡುವಾಗ ಬಿಳಿ ಬಟ್ಟೆಗೆ ರಕ್ತ ತಾಗುತ್ತದೆ. ಆಗ ಬಿಳಿ ಬಣ್ಣದ ಬಟ್ಟೆಯು ರಕ್ತದ ಕಲೆಯಾಗುತ್ತದೆ.ಬಿಳಿ ಬಣ್ಣದ ಬಟ್ಟೆಗೆ ಯಾವುದೇ ರೀತಿಯ ಕಲೆಯಾದರೆ ಅದನ್ನು ಹೋಗಿಸುವುದು ಕಷ್ಟ.
ಅದರಲ್ಲೂ ರಕ್ತದ ಕಲೆ ಆದರೆ ಹೋಗಿಸಲು ತುಂಬಾ ಕಷ್ಟ.ಎಷ್ಟೇ ತೊಳೆದರೂ ಕೂಡ ಅದನ್ನು ಬೇರೆ ರೋಗಿಗಳಿಗೆ ಉಪಯೋಗಿಸಲು ಕೊಡಲು ಮುಜುಗರ ಆಗುತ್ತದೆ.ಆಪರೇಷನ್ ವೇಳೆಯಲ್ಲಿ ಲೈಟಿನ ಬೆಳಕಿಗೆ ಬಿಳಿಬಟ್ಟೆಯು ಪ್ರತಿಫಲಿಸುತ್ತದೆ. ಆದರೆ ಹಸಿರು ಮತ್ತು ಕಡುನೀಲಿ ಬಣ್ಣದ ಬಟ್ಟೆಗಳಿಗೆ ಬೆಳಕು ಪ್ರತಿಫಲಿಸುವುದಿಲ್ಲ.ಈ ಎಲ್ಲಾ ರೀತಿಯ ಕಾರಣಗಳಿಂದ ವೈದ್ಯರು ಹಸಿರು ಮತ್ತು ಕಡುನೀಲಿ ಬಣ್ಣದ ವಸ್ತ್ರಗಳನ್ನು ಬಳಸುತ್ತಾರೆ.ಹಾಗೆ ರೋಗಿಗಳಿಗೆ ಅವೆರಡೂ ಬಣ್ಣದ ವಸ್ತ್ರಗಳನ್ನು ಹಾಸಲು ಕೊಡುತ್ತಾರೆ. ನಿಮಗೆ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.