ಫೆಬ್ರುವರಿ 14 ರಂದು ಪ್ರೀತಿಸುತ್ತಿರುವ ಜೋಡಿಗಳಿಗೆ ಸಂಭ್ರಮದ ದಿನ. ಇದೇ ದಿನ ಮದುವೆಯಾದರೆ ವಿಶೇಷವಾಗಿರುತ್ತದೆ. ಬಹಳಷ್ಟು ಜನರು ಫೆಬ್ರುವರಿ 14ರಂದು ಮದುವೆಯಾಗಲು ಇಷ್ಟಪಡುತ್ತಾರೆ. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಹಾಗೂ ಅಮರ್ತ್ಯ ಹೆಗಡೆ ಅವರ ಮದುವೆ ಇದೇ ಫೆಬ್ರುವರಿ 14ರಂದು ನಡೆಯಲಿದೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಪ್ರೀತಿಯ ಮೊಮ್ಮಗನಾದ ಅಮರ್ತ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರ ಮದುವೆ ಇದೆ ಫೆಬ್ರುವರಿ 14ರಂದು ವಿಜೃಂಭಣೆಯಿಂದ ನಡೆಯಲಿದ್ದು, ಮದುವೆಗಾಗಿ ಅರಿಶಿನ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮಗಳು ಜೋರಾಗಿ ನಡೆದಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಐಶ್ವರ್ಯಾ ಅವರ ನಿವಾಸದಲ್ಲಿ ಅರಿಶಿನ ಶಾಸ್ತ್ರ ನಡೆದಿದೆ. ಕೆಫೆ ಕಾಫಿ ಡೆ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್ ಹೆಗಡೆ ಅವರ ಪುತ್ರ ಅಮರ್ತ್ಯ ಹೆಗಡೆ ಅವರೊಂದಿಗೆ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಮದುವೆಯಾಗಲಿದ್ದಾರೆ. ಈಗಾಗಲೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಡಿಕೆ ಶಿವಕುಮಾರ್, ಐಶ್ವರ್ಯಾ, ಅಮರ್ತ್ಯ ಹೆಗಡೆ ಅವರು ತಮ್ಮ ಡ್ಯಾನ್ಸ್ ಮೂಲಕ ಜನರನ್ನು ರಂಜಿಸಿದರು. ಸಂಗೀತ ಕಾರ್ಯಕ್ರಮಕ್ಕೆ ಬಾಲಿವುಡ್ ಸಿಂಗರ್ ಪ್ರಕೃತಿ ಹಾಗೂ ಸುಕೃತಿ ಅವರು ಬಂದಿದ್ದರು. ಸಂಗೀತ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಹಾಗೂ ಅಮರ್ತ್ಯ ಹೆಗಡೆ ಅವರ ಸಂಬಂಧಿಕರು, ಆಪ್ತರು ಬಂದು ಜೋಡಿಗೆ ಶುಭಕೋರಿದ್ದಾರೆ. ಐಶ್ವರ್ಯ ಅವರಿಗೆ ತಮ್ಮ ಮದುವೆ ಹೀಗೆ ಆಗಬೇಕೆಂಬ ಕನಸು ಇತ್ತಂತೆ ಅದರಂತೆ ಡಿಕೆ ಶಿವಕುಮಾರ್ ಅವರು ನೆರವೇರಿಸಲಿದ್ದಾರೆ.
ಐಶ್ವರ್ಯಾ ಹಾಗೂ ಅಮರ್ತ್ಯ ಅವರ ಮದುವೆಗೆ ಸೋನಿಯಾ ಗಾಂಧಿ, ಮುಖೇಶ್ ಅಂಬಾನಿ ಮೊದಲಾದ ಗಣ್ಯರು ಆಗಮಿಸುವ ನಿರೀಕ್ಷೆಯಿದೆ. ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ಅಮರ್ತ್ಯ ಹೆಗಡೆಯವರು ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೆ ಕಂಪನಿ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರೆಯಾದ ಐಶ್ವರ್ಯಾ ಅವರು ಡಿಕೆ ಶಿವಕುಮಾರ್ ಅವರು ಸ್ಥಾಪಿಸಿದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಮರ್ತ್ಯ ಹಾಗೂ ಐಶ್ವರ್ಯಾ ಅವರ ಮದುವೆ ವ್ಯಾಲೆಂಟೈನ್ಸ್ ಡೆ ವಿಶೇಷದ ದಿನದಂದು ನಡೆಯಲಿದ್ದು ಮಹತ್ವದ್ದಾಗಿದೆ. ಪ್ರತಿಷ್ಠಿತ ಹೋಟೆಲ್ ನಲ್ಲಿ ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದೆ. ಕೊರೋನ ವೈರಸ್ ಕಾರಣದಿಂದ ಮದುವೆಗೆ 800 ಜನ, ಆರತಕ್ಷತೆಗೆ 1,400 ಜನ ಭಾಗವಹಿಸಲು ಅವಕಾಶ ನೀಡಲಾಗಿದೆ. ಮುದ್ದಾಗಿ ಕಾಣುವ ಈ ಜೋಡಿ ಸಪ್ತಪದಿ ತುಳಿದು ಜೀವನವನ್ನು ಸಂತೋಷದಿಂದ ನಡೆಸಲಿ ಎಂದು ಆಶಿಸೋಣ.