ಡಿಸ್ಕೋ ಶಾಂತಿ ಸಿನಿ ಜರ್ನಿ ಹೇಗಿತ್ತು, ಅವರು ಸಿನಿಮಾದಿಂದ ದೂರವಾದದ್ದೇಕೆ ಹಾಗೂ ಅವರ ಕುಟುಂಬದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ತಾರೆ ಡಿಸ್ಕೋ ಶಾಂತಿ. ಇವರು ಹೆಚ್ಚು ಡಿಸ್ಕೋ ಡಾನ್ಸ್ ಮಾಡುತ್ತಿರುವುದರಿಂದ ಇವರಿಗೆ ಡಿಸ್ಕೋ ಶಾಂತಿ ಎಂಬ ಹೆಸರು ಬಂತು. ಇವರು ಹುಟ್ಟಿದ್ದು ತಮಿಳುನಾಡಿನಲ್ಲಿ ಆಗಸ್ಟ್ 28, 1966ರಂದು, ಇವರ ತಂದೆ ಸಿ.ಎಲ್ ಆನಂದ್. ಇವರು 1985 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮೊದಲಿಗೆ ಹೊಟ್ಟೆಪಾಡಿಗಾಗಿ ನಟಿಸಿದ ಇವರು ಎರಡು ಚಿತ್ರಗಳಲ್ಲಿ ನಟಿಯಾಗಿ ನಟಿಸಿದರು ಅದು ಅಷ್ಟೊಂದು ಅದೃಷ್ಟ ತಂದುಕೊಡಲಿಲ್ಲ ನಂತರ ವಿಧಿಯಿಲ್ಲದೆ ಬಂದ ಐಟಂ ಡ್ಯಾನ್ಸ್ ಪಾತ್ರವನ್ನು ಮಾಡಬೇಕಾಯಿತು. ಇವರ ಪ್ರತಿಭೆಯ ಫಲವಾಗಿ 1985-1996 ರವರೆಗೆ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಾರೆ. ಇವರು ಕನ್ನಡ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕುಣಿದು ಜನರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಅಂಬರೀಷ್ ಅವರ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. ಶ್ರೀಹರಿ ಎಂಬ ತೆಲುಗು ನಟನೊಂದಿಗೆ ಕುಟುಂಬದವರ ಒಪ್ಪಿಗೆಯ ಮೇರೆಗೆ ಒಂದು ಜ್ಯೋತಿಷ್ಯದ ದೋಷದ ಕಾರಣ ಗುಟ್ಟಾಗಿ ಪ್ರೇಮ ವಿವಾಹ ಆಗುತ್ತಾರೆ. 1996 ರಲ್ಲಿ ಮತ್ತೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿಗೆ ಜನ್ಮ ನೀಡುತ್ತಾರೆ. ಮಗಳ ಹೆಸರು ಅಕ್ಷರ ಆದರೆ ಅವಳು ಹೆಚ್ಚು ದಿನ ಬದುಕುವುದಿಲ್ಲ. ಮಗಳ ನೆನಪಿಗೆ ಅಕ್ಷರ ಫೌಂಡೇಶನ್ ಶುರುಮಾಡುತ್ತಾರೆ. ಇದರ ಮೂಲಕ ಅನೇಕ ಹಳ್ಳಿಗಳಿಗೆ ನೀರು ಹಾಗೂ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಈ ದಂಪತಿಗಳು 4 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. 2013 ರಲ್ಲಿ ಆರೋಗ್ಯ ಸಮಸ್ಯೆಯಿಂದ ಶ್ರೀಹರಿ ಅವರು ಇಹಲೋಕ ತೈಜಿಸಿದರು ಶಾಂತಿ ಅವರು ನಂತರ ಒಂಟಿ ಜೀವನ ನಡೆಸುತ್ತಿದ್ದಾರೆ.