ಲಂಕೇಶ್ ಪತ್ರಿಕೆಯ ಓನರ್ ಆಗಿರುವ ಇಂದ್ರಜಿತ್ ಲಂಕೇಶ್ ಅವರು ಸಿನಿಮಾ ನಟಿ ದೀಪಿಕಾ ಪಡುಕೋಣೆ ಅವರ ಬಗ್ಗೆ ಹಾಗೂ ಡ್ರಗ್ಸ್ ದಂಧೆ ಬಗ್ಗೆ ಕೆಲವು ಮಾತುಗಳನ್ನು ಹೇಳಿಕೊಂಡಿದ್ದಾರೆ, ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ದೀಪಿಕಾ ಪಡುಕೋಣೆ ಅವರು ಐಶ್ವರ್ಯ ಸಿನಿಮಾ ಮಾಡುವಾಗ ಆ ಸಮಯದಲ್ಲಿ ಅವರು ಶಿಸ್ತಿನಿಂದ ಇದ್ದರು. ಪಡುಕೋಣೆ ಪಡುಕೋಣ ಆದಾಗ ಅವರು ಬದಲಾದರು. ಬಾಂಬೆಗೆ ಹೋದ ನಂತರ ಅವಳ ಫ್ರೆಂಡ್ಸ್ ಸರ್ಕಲ್ ಅಥವಾ ವಾತಾವರಣ ಅದರಿಂದ ಹೀಗಾಯಿತಾ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತದೆ ಎಂದು ಇಂದ್ರಜಿತ್ ಹೇಳಿದ್ದಾರೆ. ಅವರು ಪಡುಕೋಣೆ ಆಗಿದ್ದಾಗ ಅವರ ತಂದೆಯ ಶಿಸ್ತು, ತಂದೆಯ ಬಗ್ಗೆ ಗೌರವ ಭಾವನೆ ಇತ್ತು. ಒಮ್ಮೆ ಇಂದ್ರಜಿತ್ ಲಂಕೇಶ್ ಅವರ ತಂದೆ ಕರ್ನಾಟಕದಿಂದ ಹೋಗಿ ವರ್ಲ್ಡ್ ಕಪ್ ಗೆದ್ದಾಗ ಎಚ್ಇಎಲ್ ಏರ್ಪೋರ್ಟ್ ನಿಂದ ಎಮ್ ಜಿ ರೋಡ್ ವರೆಗೆ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದರು, ಕನ್ನಡಿಗರನ್ನು ಅಪ್ಪಿಕೊಂಡರು, ನಮ್ಮವರು ಎಂದು ಖುಷಿಪಟ್ಟರು ಎಂದು ದೀಪಿಕಾ ಅವರ ತಂದೆಯನ್ನು ಇಂದ್ರಜಿತ್ ಲಂಕೇಶ್ ಅವರು ನೆನೆಸಿಕೊಂಡರು.

ದೀಪಿಕಾ ಅವರನ್ನು ಐಶ್ವರ್ಯ ಮೂಲಕ ಪರಿಚಯ ಮಾಡುವಾಗ ಹೆಮ್ಮೆ ಆಗಿತ್ತು. ನಮ್ಮ ಕನ್ನಡತಿ ಫಿಲ್ಮ್ ಇಂಡಸ್ಟ್ರಿಯಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿದ್ದಾಳೆ ಎಂಬ ಖುಷಿಯಿತ್ತು. ಆದರೆ ಡ್ರಗ್ಸ್ ವಿಷಯವಾಗಿ ಬಹಳ ನೋವಾಗಿದೆ. ಇಂದ್ರಜಿತ್ ಅವರು ಸಿನಿಮಾ ನಟರು ಬ್ರಿಡ್ಜ್ ಆಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ, ಇದೊಂದು ಡ್ರಗ್ಸ್ ವಾರ್ ಎಂದು ಹೇಳಿದ್ದಾರೆ. ಪಾಕಿಸ್ತಾನದಿಂದ ಡ್ರಗ್ಸ್ ಬರುತ್ತಿದ್ದು ಇಲ್ಲಿಯ ಬ್ರಾಂಡ್ ಅಂಬಾಸಿಡರ್ ಮೂಲಕ ಸೇವನೆ ಮಾಡಿಕೊಂಡು ಈಗಿನ ಯುವಕರು, ವಿದ್ಯಾರ್ಥಿಗಳಿಗೆ ಪ್ರೇರಿತರಾಗಿದ್ದಾರೆ. ಕೆಲವು ನಟರಿಗೆ ಡ್ರಗ್ಸ್ ಎಲ್ಲಿಂದ ಬರುತ್ತಿದೆ ಎನ್ನುವುದು ಗೊತ್ತಿದೆ, ಕೆಲವರು ಗೊತ್ತಿಲ್ಲದೆ ತೆಗೆದುಕೊಳ್ಳುತ್ತಿದ್ದಾರೆ. ತನಿಖೆ ನಡೆಯುತ್ತಿದೆ ಸಾಕ್ಷಿ ಸಿಕ್ಕಿಲ್ಲ. ಕೇವಲ ನಟ, ನಟಿಯರಷ್ಟೇ ಅಲ್ಲದೇ ರಾಜಕಾರಣಿಗಳ ಮಕ್ಕಳು ಇದ್ದಾರೆ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಎಂದು ಇಂದ್ರಜಿತ್ ಲಂಕೇಶ್ ಅವರು ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!