ಯಾರ ಜೀವನದಲ್ಲಿ ಅಕಸ್ಮಾತ್ ಆಗಿ ಏನು ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ವಿಧಿಯಾಟ ನಡೆಸಿದಂತೆ ನಾವು ನಮ್ಮ ಜೀವನವನ್ನು ನಡೆಸುತ್ತೇವೆ. ತಮಿಳುನಾಡಿನ ಒಂದು ಹಳ್ಳಿಯಲ್ಲಿ ನಡೆದ ಒಂದು ಘಟನೆಯನ್ನು ಈ ಲೇಖನದಲ್ಲಿ ನೋಡೋಣ.
ತಮಿಳುನಾಡು ರಾಜ್ಯದ ಒಂದು ಹಳ್ಳಿಯಲ್ಲಿ ಸರ್ವಣ್ಣ ಎಂಬುವವರು ವಾಸಮಾಡುತ್ತಿದ್ದಾರೆ. ಸರ್ವಣ್ಣ ಅವರಿಗೆ ಮೂವರು ಮಕ್ಕಳಿದ್ದಾರೆ ಅವರು ತಮ್ಮ ಹಳ್ಳಿಯಲ್ಲಿ ಒಂದು ಸಣ್ಣ ದಿನಸಿ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ದಿನಸಿ ಅಂಗಡಿಯಲ್ಲಿ ಸರ್ವಣ್ಣ ಅವರು ಒಬ್ಬರೇ ಇರುತ್ತಿದ್ದರು. ಒಂದು ದಿನ ಏಳು ವರ್ಷದ ಹುಡುಗನೊಬ್ಬ ಸರ್ವಣ್ಣ ಅವರ ದಿನಸಿ ಅಂಗಡಿಗೆ ಬಂದನು. ನೋಡಲು ಅವನು ಭಿಕ್ಷುಕನಂತೆ ಇದ್ದನು ಅವನು ಸರ್ವಣ್ಣ ಅವರ ದಿನಸಿ ಅಂಗಡಿಯನ್ನು ಮೇಲೆಕೆಳಗೆ ನೋಡುತ್ತಿದ್ದ ಇದನ್ನು ಗಮನಿಸಿದ ಸರ್ವಣ್ಣ ಅವರು ನೀನು ಯಾರು, ನಿನಗೆ ಏನು ಬೇಕು ಎಂದು ಕೇಳಿದರು. ಹುಡುಗನು ಏನು ಮಾತನಾಡಲಿಲ್ಲ ಆಗ ಸರ್ವಣ್ಣ ಹತ್ತು ರೂಪಾಯಿ ಕೊಡಲು ಮುಂದಾದಾಗ ಹುಡುಗ ನನಗೆ ಹಣ ಬೇಡ, ಹೊಟ್ಟೆತುಂಬಾ ಹಸಿಯುತ್ತಿದೆ ತಿನ್ನಲು ಏನಾದರೂ ಕೊಡಿ ಎಂದನು ಸರ್ವಣ್ಣನಿಗೆ ಅಯ್ಯೋ ಪಾಪ ಎನಿಸಿತು ಅಂಗಡಿಯಲ್ಲಿರುವ ಎರಡು ಬಿಸ್ಕೆಟ್ ಪ್ಯಾಕೆಟ್ ಗಳನ್ನು ಕೊಟ್ಟರು. ಹುಡುಗ ಗಬಗಬ 2 ಪ್ಯಾಕೆಟ್ ಬಿಸ್ಕೆಟ್ ತಿನ್ನತೊಡಗಿದನು ಇದನ್ನು ನೋಡಿದ ಸರ್ವಣ್ಣ ಇನ್ನೂ ಒಂದು ಬಿಸ್ಕೆಟ್ ಪ್ಯಾಕೆಟ್ ಮತ್ತು ನೀರಿನ ಬಾಟಲ್ ಕೊಟ್ಟರು.
ಬಿಸ್ಕೆಟ್ ಹಾಗೂ ನೀರನ್ನು ಕುಡಿದು ಹುಡುಗ ನಿಮ್ಮಿಂದ ಬಹಳ ಉಪಕಾರವಾಯಿತು ನಾನಿನ್ನು ಹೋಗುತ್ತೇನೆ ಎಂದು ಹೇಳಿದನು ಆಗ ಸರ್ವಣ್ಣ ನಿನ್ನ ಹೆಸರೇನು ಎಂದು ಕೇಳಿದರು. ಆ ಹುಡುಗ ನನ್ನ ಹೆಸರು ಬಾಬು ಎಂದು ಹೇಳಿದನು. ನಂತರ ಸರ್ವಣ್ಣ ಅವರು ನೀನು ಏಕೆ ಭಿಕ್ಷೆ ಬೇಡುತ್ತಿರುವೆ, ನಿನಗೆ ಅಪ್ಪ ಅಮ್ಮ ಇಲ್ಲವೇ ಎಂದು ಕೇಳಿದರು ಆಗ ಆ ಹುಡುಗ ನನಗೆ ಅಮ್ಮ ಇಲ್ಲ ಇಷ್ಟು ವರ್ಷ ನನ್ನಪ್ಪ ನನ್ನನ್ನು ಸಾಕುತ್ತಿದ್ದರು, ಒಂದು ವಾರದ ಹಿಂದೆ ನನ್ನ ಅಪ್ಪ ಕೂಡ ಸತ್ತು ಹೋದರು ಹೀಗಾಗಿ ನಾನು ಅನಾಥನಾಗಿದ್ದೇನೆ. ಊಟ ಮಾಡಲು ನನ್ನ ಬಳಿ ಹಣವಿಲ್ಲ ಆದ್ದರಿಂದ ಅವರಿವರ ಬಳಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದೇನೆ ಎಂದು ಹೇಳಿದನು ಇದನ್ನು ಕೇಳಿದ ಸರ್ವಣ್ಣ ಅವರಿಗೆ ಬೇಸರವಾಗಿ ಈಗ ನೀನು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳುತ್ತಾರೆ. ಆಗ ಹುಡುಗ ಅಣ್ಣ ನನಗೆ ಯಾರು ಸಂಬಂಧಿಕರು ಇಲ್ಲ ಎಲ್ಲಾದರೂ ಕೆಲಸ ಮಾಡಿ ಜೀವನ ಮಾಡುತ್ತೇನೆ ಎಂದು ಹೇಳಿದನು. ಸರ್ವಣ್ಣ ಇಷ್ಟು ಸಣ್ಣ ವಯಸ್ಸಿನಲ್ಲಿ ಎಲ್ಲಿಗೆ ಹೋಗಿ ಕೆಲಸ ಮಾಡುತ್ತೀಯಾ ನನ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ನನ್ನ ಜೊತೆ ಇರುತ್ತೀಯಾ ಎಂದು ಕೇಳುತ್ತಾರೆ. ಹುಡುಗ ಆಯ್ತು ಅಣ್ಣ ಇಲ್ಲೇ ಇರುತ್ತೇನೆಂದು ಅಂಗಡಿಯಲ್ಲಿ ಇರತೊಡಗಿದನು.
ಬಾಬುನನ್ನು ಸರ್ವಣ್ಣ ಅವರ ಮನೆಗೆ ಕರೆದುಕೊಂಡು ಹೋಗಿ ಹೆಂಡತಿ ಮತ್ತು ಮಕ್ಕಳಿಗೆ ಇವನ ಹೆಸರು ಬಾಬು ಇವನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇನ್ನು ಮುಂದೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಮನೆಯಲ್ಲಿ ಇರುತ್ತಾನೆ ಎಂದು ಹೇಳುತ್ತಾರೆ. ಬಾಬುವಿನ ಬಳಿ ಹಾಕಿಕೊಳ್ಳಲು ಬಟ್ಟೆಗಳಿರಲಿಲ್ಲ ಆಗ ಸರ್ವಣ್ಣ ತನ್ನ ಮೂರನೇ ಮಗನ ಬಟ್ಟೆಯನ್ನು ಕೊಡುತ್ತಾರೆ. ಬಾಬು ಸರ್ವಣ್ಣನ ಅಂಗಡಿಯಲ್ಲಿ ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಂದು ತಿಂಗಳ ನಂತರ ಸರ್ವಣ್ಣ ಬಾಬುನಿಗೆ ಸಂಬಳ ಕೊಡುತ್ತಾರೆ ಆಗ ಬಾಬು ನನಗೆ ನೀವು ಸಂಬಳ ಕೊಡುವುದು ಬೇಡ ಮೂರು ಹೊತ್ತು ಊಟ ಹಾಕುತ್ತಿದ್ದೀರಾ ಅಷ್ಟೇ ಸಾಕು ಎನ್ನುತ್ತಾನೆ. ಸುಮಾರು 15 ವರ್ಷಗಳ ಕಾಲ ಸರ್ವಣ್ಣನ ಅಂಗಡಿಯಲ್ಲಿ ಬಾಬು ಕೆಲಸಮಾಡುತ್ತಿದ್ದನು. ಏಳು ವರ್ಷದ ಹುಡುಗ ಬಾಬು ಈಗ ವಯಸ್ಸಿಗೆ ಬಂದ ಯುವಕನಾಗಿದ್ದಾನೆ. ಸರ್ವಣ್ಣ ಬಾಬುನಿಗೆ ಕೊಡುವ ಸಂಬಳದ ಹಣವನ್ನು ಪ್ರತ್ಯೇಕವಾಗಿ ಇಡುತ್ತಿದ್ದರು. ಒಂದು ದಿನ ಸರ್ವಣ್ಣನ ಬಳಿ ನಾನು ಚೆನ್ನೈಗೆ ಹೋಗಿ ಸಿಟಿ ಸುತ್ತಿಕೊಂಡು ಬರುತ್ತೇನೆ ನನ್ನನ್ನು ಕಳುಹಿಸಿಕೊಡಿ ಎನ್ನುತ್ತಾನೆ ಮೊದಲು ಸರ್ವಣ್ಣ ಬೇಡ ಎನ್ನುತ್ತಾರೆ ಆದರೆ ಬಾಬು ಹಠ ಮಾಡಿ ಸ್ವಲ್ಪ ಹಣವನ್ನು ತೆಗೆದುಕೊಂಡು ಹೋಗುತ್ತಾನೆ.
ಬಾಬು ಚೆನ್ನೈಗೆ ಹೋಗಿ ಒಂದು ವಾರ ಕಳೆಯಿತು, ಒಂದು ತಿಂಗಳಾಯಿತು ಬಾಬು ಬರುವುದಿಲ್ಲ, ಕಾಲ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು. ಎರಡು ತಿಂಗಳಾದರೂ ಬಾಬು ಬರಲಿಲ್ಲ ಆಗ ಸರ್ವಣ್ಣ ಒಂದು ವಾರ ಅಂಗಡಿಗೆ ರಜೆ ಹಾಕಿ ಚೆನ್ನೈಗೆ ಹೋಗುತ್ತಾರೆ ಅಲ್ಲಿ ಹುಡುಕಿದರೆ ಬಾಬು ಸಿಗಲಿಲ್ಲ, ವಾಪಸ್ ಸರ್ವಣ್ಣ ಹಳ್ಳಿಗೆ ಹೋದರು. ಸರ್ವಣ್ಣನ ಅಂಗಡಿಯೆದುರು ಇನ್ನೊಬ್ಬರ ಅಂಗಡಿಯಿತ್ತು ಅವರು ಸರ್ವಣ್ಣನ ಹತ್ತಿರ ನನ್ನ ಅಂಗಡಿಯನ್ನು ನೀನೆ ಖರೀದಿಸು ಎಂದು ಹೇಳಿದರು ಮೊದಲು ಸರ್ವಣ್ಣ ಒಪ್ಪಲಿಲ್ಲ ನಂತರ ಸರ್ವಣ್ಣನ ಸ್ನೇಹಿತ ನಾರಾಯಣ ಕರೆ ಮಾಡಿ ನನ್ನ ತಮ್ಮ ಪಾತ್ರೆ ಮತ್ತು ಫರ್ನಿಚರ್ ತಯಾರಿಸುತ್ತಾನೆ ನಿನಗೆ ಬೇಕಾದರೆ ಕಡಿಮೆ ರೇಟಿನಲ್ಲಿ ಕೊಡುತ್ತಾನೆ ಎಂದು ಹೇಳಿದನು ಆಗ ಸರ್ವಣ್ಣ ಅವರಿಗೆ ಎದುರಿಗಿನ ಅಂಗಡಿ ಖಾಲಿಯಾಗಿರುವುದರಿಂದ ಅಲ್ಲಿ ಪಾತ್ರೆ ಅಂಗಡಿಯನ್ನು ಪ್ರಾರಂಭಿಸಬಹುದು ಎಂದು ಅನಿಸಿತು. ವ್ಯಾಪಾರ ಮಾಡಲು ಅವನ ಬಳಿ ಹಣ ಇರಲಿಲ್ಲ ಬಾಬುವಿಗೆ ಕೊಡಬೇಕಾದ ಸಂಬಳದ ಹಣವನ್ನು ಬಂಡವಾಳವನ್ನಾಗಿ ಹಾಕಿದರು. ಹೊಸದಾಗಿ ಪ್ರಾರಂಭಿಸಿದ ವ್ಯಾಪಾರ ಯಶಸ್ವಿಯಾಯಿತು. ವ್ಯಾಪಾರದಿಂದ ಹೆಚ್ಚು ಲಾಭ ಗಳಿಸಿದನು ಜೊತೆಗೆ ತನ್ನ ಅಂಗಡಿಯನ್ನು ವಿಸ್ತರಿಸಿದನು. ಬೇರೆ ಬೇರೆ ಊರಿನಲ್ಲಿ ಅಂಗಡಿಗಳನ್ನು ಹಾಕಿದನು. ಅವನು ಶ್ರೀಮಂತನಾದ ಆದರೆ ಸರ್ವಣ್ಣ ತನ್ನ ದಿನಸಿ ಅಂಗಡಿಯಲ್ಲಿ ಬಾಬುವಿಗಾಗಿ ಕಾಯುತ್ತಾ ಕುಳಿತಿರುತ್ತಿದ್ದ.
ಹತ್ತು ವರ್ಷದ ನಂತರ ಸರ್ವಣ್ಣಅವರ ಅಂಗಡಿಗೆ ಬಾಬು ಬರುತ್ತಾನೆ ಅಣ್ಣ ಹೇಗಿದ್ದೀರಾ ಎಂದು ಕೇಳುತ್ತಾನೆ. ಸರ್ವಣ್ಣ ಅವನನ್ನು ಅಪ್ಪಿಕೊಂಡು ನನ್ನನ್ನು ಬಿಟ್ಟು ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾರೆ. ಆಗ ಬಾಬು ನಾನು ಚೆನ್ನೈಗೆ ಹೋದಾಗ ಒಂದು ಹುಡುಗಿಯ ಮಾನ ಕಾಪಾಡಲು ಹೋಗಿ ಒಬ್ಬ ಹುಡುಗನನ್ನು ಕೊಲೆ ಮಾಡಿಬಿಟ್ಟೆ ಅದಕ್ಕಾಗಿ ಜೈಲಿನಲ್ಲಿದ್ದೆ ಇವತ್ತು ಬಿಡುಗಡೆಯಾದೆ ನಿಮ್ಮನ್ನು ನೋಡಬೇಕು ಎಂದು ಅನಿಸಿತು ಅದಕ್ಕೆ ಬಂದೆ ನಾನಿನ್ನು ಹೊರಡುತ್ತೇನೆ ನನ್ನಂತ ಕೊಲೆಗಾರರು ನಿಮ್ಮ ಜೊತೆ ಇರಬಾರದು ಎಂದು ಹೊರಡುತ್ತಾನೆ. ಆಗ ಸರ್ವಣ್ಣ ನೀನು ಒಳ್ಳೆಯ ಹುಡುಗ ನೀನು ಎಲ್ಲಿಗೂ ಹೋಗಬೇಡ ನನ್ನ ಜೊತೆ ಇರು, ಹಿಂದೆ ತಿರುಗಿ ನೋಡು ಎಂದು ಹೇಳಿದರು ಆಗ ಬಾಬು ಹಿಂದೆ ತಿರುಗಿ ನೋಡಿದರೆ ಅಲ್ಲಿ ಬಾಬು ಫರ್ನಿಚರ್ಸ್ ಎಂಬ ಹೆಸರಿನ ದೊಡ್ಡ ಅಂಗಡಿಯಿತ್ತು. ಅಂಗಡಿಯಲ್ಲಿ ಹೋಗಿ ವ್ಯಾಪಾರ ಮಾಡು ಎಂದು ಸರ್ವಣ್ಣ ಬಾಬುವಿಗೆ ಹೇಳುತ್ತಾನೆ. ಬಾಬು ಮತ್ತು ಸರ್ವಣ್ಣ ಅಂಗಡಿಗಳನ್ನು ನೋಡಿಕೊಂಡು ಸುಖದಿಂದ ಜೀವನ ನಡೆಸುತ್ತಿದ್ದಾರೆ.