ಮುಖದಲ್ಲಿ ಡಿಂಪಲ್ ಬೀಳಲು ಕಾರಣವೇನು, ಟ್ಯಾಟೂ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಇದಕ್ಕೆ ಕಾರಣವೇನು, ಕೆಜಿಎಫ್ 2 ಸಿನಿಮಾ ಮಾಡಿದ ಹೊಸ ದಾಖಲೆ ಏನು ಈ ರೀತಿಯ ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೆಲವರ ಮುಖದಲ್ಲಿ ಡಿಂಪಲ್ ಇರುತ್ತದೆ ಇದರಿಂದ ಅವರು ಮುದ್ದಾಗಿ ಕಾಣುತ್ತಾರೆ. ಡಿಂಪಲ್ ಬೀಳುವವರ ಮುಖದಲ್ಲಿ ಮಸಲ್ಸ್ ಬೆಳವಣಿಗೆಯಾಗಿರುವುದಿಲ್ಲ ಮಸಲ್ಸ್ ನಡುವಿನ ಗ್ಯಾಪ್ ಅನ್ನು ಡಿಂಪಲ್ ಎಂದು ಕರೆಯುತ್ತಾರೆ. ಯೂರಿನ್ ನಲ್ಲಿ ಯುರೋ ಕ್ರೋಮ್ ಎಂಬ ಪಿಗ್ಮೆಂಟ್ ಇರುತ್ತದೆ ನಾವು ಹೆಚ್ಚು ನೀರು ಕುಡಿದರೆ ಪಿಗ್ಮೆಂಟ್ ಲೈಟ್ ಕಲರ್ ನಲ್ಲಿ ಇರುತ್ತದೆ, ನೀರನ್ನು ಕಡಿಮೆ ಕುಡಿದರೆ ಪಿಗ್ಮೆಂಟ್ ಡಾರ್ಕ್ ಕಲರ್ ನಲ್ಲಿ ಇರುತ್ತದೆ ಇದರಿಂದ ಯೂರಿನ್ ಯೆಲ್ಲೋ ಕಲರ್ ಇರುತ್ತದೆ.
ಆಲ್ಕೋಹಾಲ್ ಕಂಪನಿಯ ಆಡ್ಸ್ ಕಿಂಗ್ ಫಿಶರ್ ಪ್ರೀಮಿಯಂ ಕ್ಯಾಲೆಂಡರ್, ಇಂಪೀರಿಯಲ್ ಬ್ಲೂ ಸೂಪರ್ ಹಿಟ್ ಸಿರೀಸ್ ಮುಂತಾದವುಗಳನ್ನು ನೋಡುತ್ತೇವೆ. ಇವುಗಳು ಮ್ಯೂಸಿಕ್ ಸಿರೀಸ್, ಸೋಡಾನಂತಹ ಬೇರೆ ಬ್ರಾಂಡ್ ಗಳನ್ನು ಪ್ರಮೋಟ್ ಮಾಡುತ್ತವೆ ಏಕೆಂದರೆ ನಮ್ಮ ದೇಶದಲ್ಲಿ ಆಲ್ಕೋಹಾಲ್ ಆಡ್ಸ್ ಗಳನ್ನು ನಿಷೇಧಿಸಲಾಗಿದೆ ಇದರಿಂದ ಈ ಕಂಪನಿಗಳು ತಮ್ಮ ಬ್ರ್ಯಾಂಡ್ ಮರೆಯಬಾರದೆಂದು ಈ ರೀತಿ ಆಡ್ ಮಾಡುತ್ತವೆ. ಇದರಿಂದ ಟಿವಿಯಲ್ಲಿ ಆಲ್ಕೋಹಾಲ್ ಆಡ್ಸ್ ಗಳು ಪ್ರಸಾರವಾಗುವುದಿಲ್ಲ. ಕೊರೋನಾವೈರಸ್ ಬಂದಿರುವ ಕಾರಣ ಥಿಯೇಟರ್ ಗಳನ್ನು ಮುಚ್ಚಲಾಗಿತ್ತು.
ಥಿಯೇಟರ್ ನಲ್ಲಿ ಸಿನಿಮಾ ನೋಡಲು ಅಸಾಧ್ಯವಾಗಿತ್ತು ಆದರೆ ಅಮೆರಿಕದಲ್ಲಿ ಅಡ್ವಾನ್ಸ್ಡ್ ಮಿನಿ ಥಿಯೇಟರ್ ಕ್ಯಾಪನ್ನು ಕಂಡುಹಿಡಿದಿದ್ದಾರೆ. ಈ ಕ್ಯಾಪ್ ನಲ್ಲಿ ಪ್ರೊಜೆಕ್ಟರ್ ಅನ್ನು ಇನ್ಸ್ಟಾಲ್ ಮಾಡಲಾಗಿದೆ ಇದರಿಂದ ಮೊಬೈಲ್ ನ ಹಾಟ್ ಸ್ಪಾಟ್ ಮೂಲಕ ಕನೆಕ್ಟ್ ಮಾಡಿಕೊಂಡು ಫೋನ್ ನಲ್ಲಿ ಸಿನಿಮಾ ಪ್ಲೇ ಮಾಡಿದರೆ ಅದರ ಡಿಸ್ಪ್ಲೆ ಪ್ರೊಜೆಕ್ಟರ್ ಮೂಲಕ ಕಣ್ಣಿನ ಮುಂದೆ ಕಾಣಿಸುತ್ತದೆ ಇದು ಥಿಯೇಟರ್ ನಲ್ಲಿ ಸಿನಿಮಾ ನೋಡಿದ ಅನುಭವವನ್ನು ಕೊಡುತ್ತದೆ.
ಜೇಮ್ಸ್ ರಾಂಡಿ ಎಂಬ ವ್ಯಕ್ತಿ ಜೇಮ್ಸ್ ರಾಂಡಿ ಎಂಬ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ಒಂದು ಚಾಲೆಂಜ್ ನೀಡಿದ್ದಾರೆ. ಪ್ರೇತಾತ್ಮ, ಆತ್ಮವನ್ನು ನಿರೂಪಿಸಿದರೆ ಅವರಿಗೆ ಒನ್ ಮಿಲಿಯನ್ ಡಾಲರ್ ಸಿಗುತ್ತದೆ ಆದರೆ ಈಗ ಫ್ರೈಜ್ ಬೆಲೆ ಹತ್ತು ಲಕ್ಷ ಡಾಲರ್ ಆಗಿದೆ ಆದರೆ ಇಲ್ಲಿಯವರೆಗೂ ಯಾರಿಗೂ ನಿರೂಪಿಸಲು ಸಾಧ್ಯವಾಗಲಿಲ್ಲ. ಎಕ್ಸರೆ ಮಾಡಿ ಯಾವ ವಸ್ತುವಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬಹುದು ಆದರೆ ಡೈಮಂಡ್ ಅನ್ನು ಎಕ್ಸರೆ ಮಾಡಿದರೆ ಏನೂ ಕಾಣಿಸುವುದಿಲ್ಲ. ಏಕೆಂದರೆ ಡೈಮಂಡ್ ಎಕ್ಸರೆ ರಿಫ್ಲೆಕ್ಟ್ ಮಾಡುತ್ತದೆ ಇದರಿಂದ ಏನೂ ಕಾಣಿಸುವುದಿಲ್ಲ. ಲೇಸ್ ಪೊಟಾಟೋ ಚಿಪ್ಸ್ ನಲ್ಲಿ 204 ಫ್ಲೇವರ್ ಗಳಿವೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ ಈ ಟೀಸರ್ ಗೆ ಕೇವಲ ಎರಡು ದಿನದಲ್ಲಿ 100 ಮಿಲಿಯನ್ ವ್ಯೂವ್ಸ್ ಬಂದಿದೆ, 8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಈ ಟೀಸರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದೆ. ಟ್ಯಾಟೂ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಎಂಬ ನಿಯಮವಿದೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಬಳಸುವ ಸೂಜಿಯಿಂದ, ಇಂಕ್ ನಿಂದ ಹೆಪಟೈಟಿಸ್ ಎ, ಎಚ್ಐವಿ ವೈರಸ್ ಗಳು ರಕ್ತದಿಂದ ಟ್ರಾನ್ಸಫರ್ ಆಗಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅನೇಕ ದೇಶಗಳು ಟ್ಯಾಟೂ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಎಂಬ ನಿಯಮವನ್ನು ಇಟ್ಟಿದೆ. ಇತ್ತೀಚಿನ ದಿನಗಳಲ್ಲಿ ಈ ವಿಷಯದಲ್ಲಿ ಕೆಲವು ಬದಲಾವಣೆಗಳಾಗಿವೆ ಇದರಿಂದ ಟ್ಯಾಟೂ ಹಾಕಿಸಿಕೊಂಡವರು, 6 ತಿಂಗಳ ನಂತರ ಬ್ಲಡ್ ಚೆಕಪ್ ಮಾಡಿ ರಕ್ತದಾನ ಮಾಡಬಹುದು. ಕ್ರಿಕೆಟ್ ಅಥವಾ ಇತರೆ ಆಟಗಳನ್ನು ಆಡುವಾಗ ಟಾಸ್ ಹಾಕಲು ಕಾಯಿನ್ ಸಿಗದೆ ಇದ್ದರೆ ಮೊಬೈಲ್ ನಲ್ಲಿ ಗೂಗಲ್ ಸರ್ಚ್ ನಲ್ಲಿ ಫ್ಲಿಪ್ ದ ಕಾಯಿನ್ ಎಂದು ಟೈಪ್ ಮಾಡಿದರೆ 1 ಕಾಯಿನ್ ಡಿಸ್ಪ್ಲೆ ಆಗುತ್ತದೆ ಅದರ ಮೇಲೆ ಟ್ಯಾಪ್ ಮಾಡಿದರೆ ಹೆಡ್ಡ ಅಥವಾ ಟೇಲ್ ಕಾಣಿಸುತ್ತದೆ.