ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುತ್ತಾರೆ. ಅದೇ ರೀತಿ ಕ್ರಿಕೆಟ್ ಹಾಗೂ ಬೇರೆ ಆಟಗಳಲ್ಲಿಯೂ ಕೂಡಾ ಆಟಗಾರರಿಗೆ ಅಭಿಮಾನಿಗಳು ಇದ್ದೇ ಇರುತ್ತಾರೆ. ಒಬ್ಬೊಬ್ಬ ಆಟಗಾರರು ಅಚ್ಚುಮೆಚ್ಚಾಗಿ ಇರುತ್ತಾರೆ. ಹಾಗೆಯೇ ತಮ್ಮ ನೆಚ್ಚಿನ ಆಟಗಾರ ಅಥವಾ ನಟ ನಟಿಯರ ಸಲುವಾಗಿ ಏನೇನೋ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವವರೂ ಇರುತ್ತಾರೆ. ಹಾಗೆಯೇ ಇಲ್ಲಿ ಒಬ್ಬ ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯವರ ಮೇಲಿರುವರ ಅಭಿಮಾನಕ್ಕೆ ಅವರ ಅಭಿಮಾನಿ ಒಬ್ಬರು ತಮ್ಮ ಮನೆಗೆ ಪೂರ್ತಿ ಹಳದಿ ಬಣ್ಣ ಹೊಡೆಸಿದ್ದಾರೆ. ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೋಡೋಣ.
ಕಡಲೂರು ಜಿಲ್ಲೆಯ ತಿಟ್ಟಕುಡಿ ಬಳಿಯ ಅರಂಗೂರ್ ಗ್ರಾಮದ ದುಬೈನಲ್ಲಿ ಕೆಲಸ ಮಾಡುತ್ತಿರುವ ಆರ್. ಗೋಪಿಕೃಷ್ಣನ್ ಅವರು 2008ರಿಂದ ಧೋನಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್ ಪಂದ್ಯಗಳನ್ನು ಆಡುತ್ತಿರುವ ದುಬೈನ ಕ್ರೀಡಾಂಗಣದ ಸಮೀಪದಲ್ಲಿಯೇ ಇವರು ಕೆಲಸ ಮಾಡುತ್ತಿದ್ದರು. ಕೊರೊನಾ ಕಾರಣದಿಂದ ಪಂದ್ಯಗಳನ್ನು ನೋಡಲು ಪ್ರೇಕ್ಷಕರಿಗೆ ಅನುಮತಿ ಇಲ್ಲದ ಸಲುವಾಗಿ ಈ ಬಾರಿ ಪಂದ್ಯ ನೋಡಲು ಹೋಗಿಲ್ಲ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಗೋಪಿಕೃಷ್ಣನ್ ಅವರು, ಕೊರೊನಾ ಸಮಯದಲ್ಲಿ ತಮಿಳುನಾಡಿನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಇದೇ ವೇಳೆ ತಮ್ಮ ಮನೆಗೆ ಬಣ್ಣ ಹೊಡೆಸುವ ಕೆಲಸವನ್ನು ಸಹ ಇಟ್ಟುಕೊಂಡಿದ್ದರು. ಕಾಕತಾಳೀಯ ಎನ್ನುವಂತೆ ಅದೇ ಸಮಯದಲ್ಲಿ ಐಪಿಎಲ್ ಕೂಡಾ ಆರಂಭವಾಗಿತ್ತು. ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಉತ್ತಮ ಪ್ರದರ್ಶನ ನೀಡದೇ ಟೀಕೆಗೆ ಒಳಾಗುತ್ತಿದ್ದರು. ಹೀಗಾಗಿ ಅವರ ಮೇಲಿನ ಅಭಿಮಾನ ತೋರಿಸಲು 1.5 ಲಕ್ಷ ಖರ್ಚು ಮಾಡಿ ಧೋನಿಯವರ ಚಿತ್ರ ಮತ್ತು ಸಿಎಸ್‍ಕೆ ಲೋಗೋ ಸಮೇತ ಮನೆಗೆ ಹಳದಿ ಬಣ್ಣ ಹೊಡೆಸಿದ್ದಾರೆ.
ಇದರ ಕುರಿತಾಗಿ ಗೋಪಿ ಅವರು ಮಾತನಾಡಿ, ಈ ಬಾರಿ ನನ್ನ ಮೆಚ್ಚಿನ ತಂಡಕ್ಕೆ ಮೈದಾನದಲ್ಲಿ ಹೋಗಿ ಚೀಯರ್ ಮಾಡಲು ಆಗುತ್ತಿಲ್ಲ ಎಂದು ಬೇಸರವಾಗುತ್ತಿದೆ. ಆದರೆ ಮನೆಗೆ ಈ ರೀತಿ ಪೈಂಟ್ ಮಾಡಿಸಿದ್ದು ಖುಷಿಕೊಟ್ಟಿದೆ. ನಮ್ಮ ಅಪ್ಪ-ಅಮ್ಮ ಮತ್ತು ಮನೆಯವರೆಲ್ಲರೂ ಕ್ರಿಕೆಟ್ ಪ್ರೇಮಿಗಳಾಗಿದ್ದು, ನಾನು ಈ ರೀತಿಯ ಬಣ್ಣ ಹೊಡೆಸುತ್ತೇನೆ ಎಂದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡರು ಎಂದು ಹೇಳಿದ್ದಾರೆ. ಜೊತೆಗೆ ಧೋನಿ ಬಗ್ಗೆ ಈಗ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿ, ಈಗ ನಡೆಯುತ್ತಿರುವ ಐಪಿಎಲ್‍ನಲ್ಲಿ ಧೋನಿ ಉತ್ತಮ ಪ್ರದರ್ಶನ ತೋರುತ್ತಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಈ ಋಣತ್ಮಾಕ ವಿಚಾರಗಳನ್ನು ಹೊಡೆದೊಡಿಸಲೆಂದೇ ನಾನು ಮನೆಗೆ ಈ ರೀತಿ ಪೈಂಟ್ ಮಾಡಿಸಿದ್ದೇನೆ. ಧೋನಿ ಅವರು ಒಂದು ಕಾಲದಲ್ಲಿ ಬೆಸ್ಟ್ ಫಿನಿಶರ್ ಎಂಬುದನ್ನು ಮರೆತ ಜನರು ಈಗ ಧೋನಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಗೋಪಿಕೃಷ್ಣನ್ ಅವರು ಮೊದಲು ಪೈಂಟ್ ಮಾಡಿಸಲು ತೀರ್ಮಾನ ಮಾಡಿದಾಗ ಅವರಿಗೆ ಸರಿಯಾದ ರೀತಿಯಲ್ಲಿ ಧೋನಿ ಅವರ ಪೇಂಟ್ ಮಾಡಲು ಪೈಂಟರ್ ಸಿಗದೆ ಧೋನಿ ಚಿತ್ರವನ್ನು ಬಿಡಿಸುವ ಸಲುವಾಗಿ ಸಾಕಷ್ಟು ಪೈಂಟರ್ ಗಳನ್ನೂ ಹುಡುಕಿದ್ದಾರೆ. ನಂತರ ಅವರು ತಮ್ಮ ಎಲ್ಲ ಸ್ನೇಹಿತರಿಗೂ ತಿಳಿಸಿ ಬಳಿಕ ತಿಟ್ಟಕುಡಿ ಜಿಲ್ಲೆಯಲ್ಲೇ ಪೈಂಟರ್ ಸಿಕ್ಕಿದ್ದು, ಆನ್‍ಲೈನ್‍ನಲ್ಲಿ ಧೋನಿ ಮತ್ತು ಸಿಎಸ್‍ಕೆ ತಂಡದ ಲೋಗೋವನ್ನು ಡೌನ್‍ಲೋಡ್ ಮಾಡಿಕೊಟ್ಟು ಪೇಟಿಂಗ್ ಮಾಡಿಸಿದ್ದಾರೆ. ಗೋಪಿ ಅವರು ತಮ್ಮ ಮನೆಗೆ ಹೋಮ್ ಆಫ್ ಧೋನಿ ಫ್ಯಾನ್ ಎಂದು ಹೆಸರನ್ನು ಇಟ್ಟಿದ್ದಾರೆ. ಜೊತೆಗೆ ಮನೆಯ ಮುಂದೆ ಧೋನಿ ಚಿತ್ರವನ್ನು ಕೂಡಾ ಬಿಡಿಸಲಾಗಿದೆ. ಗೋಪಿಕೃಷ್ಣನ್ ಅವರ ಅಭಿಮಾನಕ್ಕೆ ಮೆಚ್ಚಿಕೊಂಡು ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮಿಳುನಾಡಿನ ಅರಂಗೂರ್‍ನಲ್ಲಿರುವ ಸೂಪರ್ ಫ್ಯಾನ್ ಗೋಪಿ ಕೃಷ್ಣನ್ ಮತ್ತು ಅವರ ಕುಟುಂಬವು ತಮ್ಮ ನಿವಾಸವನ್ನು ಧೋನಿ ಫ್ಯಾನ ಮನೆ ಎಂದು ಹೆಸರಿಟ್ಟಿದ್ದಾರೆ. ನಮ್ಮ ಹೃದಯವನ್ನು ತುಂಬುವ ಸೂಪರ್ ಡೂಪರ್ ಗೌರವ ಎಂದು ಬರೆದುಕೊಂಡಿದ್ದಾರೆ.