ಧೀರುಬಾಯಿ ಅಂಬಾನಿ ಇವರು ಕಂಡು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಆದರು. ಇವರ ಜೀವನ ಮೊದಲು ಹೇಗಿತ್ತು ಅನ್ನೋದು ಎಷ್ಟೋ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರ ಜೀವನದ ಬಗ್ಗೆ ಇಂದು ನಾವಿಲ್ಲಿ ತಿಳಿದುಕೊಳ್ಳೋಣ.

ಧೀರುಬಾಯಿ ಅಂಬಾನಿ ಇವರ ನಿಜವಾದ ಹೆಸರು ಧೀರಜ್ ಲಾಲ್ ಹೀರಾಚಂದ್ ಅಂಬಾನಿ. ಇವರು ಡಿಸಂಬರ್ 28, 1932ರಲ್ಲಿ ಗುಜರಾತ್ ನ ಚೋರವಾರ್ಡ್ ಎಂಬಲ್ಲಿ ಜನಿಸಿದರು. ತಂದೆ ಹೀರಾಚಂದ್ ಗೋವರ್ಧನ ಭಾಯ್ ಅಂಬಾನಿ. ಇವರು ಸ್ಕೂಲ್ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದರು. ಇವರ ತಾಯಿ ಗ್ರಹಿಣಿ ಆಗಿದ್ದರು. ಧೀರೂಬಾಯಿ ಅಂಬಾನಿ ಅವರು ವಾರಾಂತ್ಯದ ದಿನಗಳಲ್ಲಿ ಪಕೋಡ ಮಾರಾಟ ಮಾಡುತ್ತಿದ್ದರು. ಇವರು ಹೈಸ್ಕೂಲಿನಲ್ಲಿ ಇರುವಾಗಲೇ ಒದನ್ನು ಬಿಟ್ಟರು. ಹಲವು ವರ್ಷ ಪಕೋಡ ಮಾರಾಟ ಮಾಡುತ್ತಲೇ ತನ್ನ 16 ನೆ ವಯಸ್ಸಿನಲ್ಲಿ ಯಮನ್ ನ ಅಡೆನ್ ಗೆ ಹೋದರು. ಅಲ್ಲಿ ಕೆಲವು ದಿನ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದರು ಆಗ ಅವರ ಸಂಬಳ ಕೇವಲ 300 ರೂಪಾಯಿಗಳು ಇತ್ತು. ದಿನವೆಲ್ಲ ಈ ಕೆಲಸ ಮಾಡಿಯು ಕೂಡ ಧೀರೂಬಾಯಿ ಅಂಬಾನಿ ಅವರು ನಂತರ ಹಲವು ಪಾರ್ಟ್ ಟೈಂ ಕೆಲಸಗಳನ್ನು ಸಹ ಮಾಡುತ್ತ ಇದ್ದರು. ಹಾಗಾಗಿ ಇವರ ಸಹೋದ್ಯೋಗಿಗಳಿಗಿಂತ ಇವರ ಬಳಿ ಹೆಚ್ಚು ಹಣ ಇರುತ್ತಿತ್ತು. ಇವರ ಶ್ರದ್ಧೆ ಮತ್ತು ಪರಿಶ್ರಮದ ಫಲವಾಗಿ ಅದೇ ಕಂಪನಿಯಲ್ಲಿ ಅವರುಗೆ ಮ್ಯಾನೇಜರ್ ಹುದ್ದೆ ಲಭಿಸಿತು. ಆದರೆ ಇವರ ತಲೆಯಲ್ಲಿ ಮೊದಲಿಂದಲೂ ಶ್ರೀಮಂತ ಆಗಬೇಕು ಅಂದರೆ ಏನಾದರೂ ಬ್ಯುಸಿನೆಸ್ ಮಾಡಲೇಬೇಕು ಅನ್ನುವ ಆಲೋಚನೆ ಇತ್ತು.

ಹಾಗಾಗಿ ಕೆಲವು ದಿನಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿ ನಂತರ 1962 ರಲ್ಲಿ ಮತ್ತೆ ಭಾರತಕ್ಕೆ ಮರಳಿದರು. ಕೇವಲ 15,000 ರೂಪಾಯಿ ಬಂಡವಾಳದ ಜೊತೆಗೆ ಚಂಪಕ್ ಲಾಲ್ ಧಮಾಣಿ ಎಂಬುವರ ಜೊತೆಗೆ ಪಾರ್ಟ್ನರ್ ಶಿಪ್ ನಲ್ಲಿ ಭಾರತದಲ್ಲಿ Reliance Commercia Carporetion ಅನ್ನು ಸ್ಥಾಪಿಸಿದರು. ಈ ಕಂಪನಿಯ ಪ್ರಮುಖ ಕಾರ್ಯ ಮಸಾಲೆ ಪದಾರ್ಥಗಳನ್ನು ಹೊರದೇಶಗಳಿಗೆ ರವಾನೆ ಮಾಡುವುದು ಮತ್ತು ಪೋಲಿಸ್ಟರ್ ನೂಲುಗಳನ್ನು ತರಿಸಿಕೊಳ್ಳುವುದೂ ಆಗಿತ್ತು. ಮೊದ ಮೊದಲು ಇವರ ಸಹಾಯಕ್ಕೆ ಕೇವಲ ಇಬ್ಬರು ಅಸ್ಸಿಸ್ಟಂಟ್ ಇದ್ದರು. ಇವರ ಮೊದಲ ಅಫಿಸ್ ೩೫೦ ಸ್ಕ್ km ಅಲ್ಲಿ ಮೂರು ಕುರ್ಚಿ ಮತ್ತು ಒಂದು ಟೇಬಲ್ ಹಾಗೂ ಒಂದು ಟೆಲಿಫೋನ್ ಜೊತೆ ಆರಂಭಿಸಿದ್ದರು. ಇವರ ಪರಿಶ್ರಮದಿಂದಾಗಿ ಕೇವಲ ಕೆಲವೇ ವರ್ಷಗಳಲ್ಲಿ ಕಂಪನಿಯ ಟರ್ನ್ ಓವರ್ 10 ಲಕ್ಷಕ್ಕೂ ಹೆಚ್ಚು ಆಯಿತು.

1965ರಲ್ಲಿ ಚಂಪಕ್ ಲಾಲ್ ಧಮಾನಿ ಮತ್ತು ಧೀರುಬಾಯಿ ಅಂಬಾನಿ ಇಬ್ಬರೂ ಪಾರ್ಟ್ನರ್ ಶಿಪ್ ನಿಂದ ದೂರ ಆದರು. ಎಕೆಎಂದರೆ ಇವರ ಆಲೋಚನೆ ಮತ್ತು ಬ್ಯುಸಿನೆಸ್ ಮಾಡುವ ಯೋಚನೆ ಬೇರೆ ಬೇರೆಯೇ ಆಗಿತ್ತು. ಧೀರುಬಾಯಿ ರಿಸ್ಕ್ ಟೇಕರ್ ಆಗಿದ್ದರು. ಬ್ಯುಸಿನೆಸ್ ನಲ್ಲಿ ಹೆಚ್ಚು ಬಂಡವಾಳವನ್ನ ಹೂಡಬೇಕಾದರೆ ರಿಸ್ಕ್ ತೆಗೆದುಕೊಳ್ಳಲೇಬೇಕು ಎನ್ನುತ್ತಾ ಇದ್ದರು. ಇದು ಚಂಪಕ್ ಲಾಲ್ ಧಮಾನಿ ಅವರಿಗೆ ಹಿಡಿಸುತ್ತ ಇರಲಿಲ್ಲ ಹಾಗೂ ಅವರ ಅಲೋಚನೆಗಳಿಗೆ ವಿರುದ್ಧವೂ ಆಗಿ ಇರುತ್ತಾ ಇತ್ತು. ಇದೆ ಕಾರಣದಿಂದ ಅವರು ಇಬ್ಬರೂ ಪಾರ್ಟ್ನರ್ ಶಿಪ್ ನಿಂದ ದೂರ ಆದರು. ಇದಾದ ನಂತರ ಧೀರುಬಾಯಿ ಅಂಬಾನಿ ಒಬ್ಬರೇ ಬ್ಯುಸಿನೆಸ್ ನಡೆಸಲು ಆರಂಭಿಸಿದರು. ಹಾಗೂ ಕೇವಲ ಕೆಲವೇ ಸಮಯದಲ್ಲಿ ಟೆಲಿಕಾಂ, ಎನರ್ಜಿ, ಪೆಟ್ರೋಲಿಯಂ, ಎಲೆಕ್ಟ್ರಿಸಿಟಿ ಹೀಗೆ ಇನ್ನೂ ಹಲವು ಕ್ಷೇತ್ರಗಳಿಗೆ ಕಾಲಿಟ್ಟರು. ಇವರ ಕಂಪನಿಯಲ್ಲಿ ಬಹಳಷ್ಟು ಜನರು ಕೆಲಸವನ್ನ ಪಡೆದಿದ್ದಾರೆ ಹಾಗೂ ಇಂದುಗೂ ಕೂಡಾ ಇವರ ಕಂಪನಿ ಟಾಪ್ ಸ್ಥಾನದಲ್ಲಿಯೇ ಇದೆ. ಧೀರುಬಾಯಿ ಅಂಬಾನಿ ಅವರು ಜುಲೈ 6, 2002 ರಲ್ಲಿ ನಿಧನರಾದರು. ಧೀರುಬಾಯಿ ಅಂಬಾನಿ ಅವರು ಯಾವುದೇ ಡಿಗ್ರಿ ಇಲ್ಲದೇ ಕುಟುಂಬದ ಯಾವ ಸಹಾಯವೂ ಇಲ್ಲದೆಯೇ ಟಾಪ್ ಕಂಪನಿಯ ಓನರ್ ಆಗಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿಯು ಸೇರಿ ಸಾಧನೆಗೆ ಯಾವ ಮಿತಿಯೂ ಇಲ್ಲ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ…

Leave a Reply

Your email address will not be published. Required fields are marked *