Dhansus rasi Horoscope September 2023: 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಶೇಷತೆಯನ್ನು ಹೊಂದಿರುತ್ತಾರೆ. ರಾಶಿಗಳಲ್ಲಿ ಧನಸ್ಸು ರಾಶಿಯು ಮುಖ್ಯವಾದ ರಾಶಿಯಾಗಿದ್ದು, ಧನಸ್ಸು ರಾಶಿಯವರ ಸೆಪ್ಟೆಂಬರ್ ತಿಂಗಳಿನ ಗೋಚಾರ ಫಲ ಮಾಸ ಭವಿಷ್ಯ ಹೇಗಿದೆ ಎಂಬುದನ್ನು ನೋಡುವುದರೊಂದಿಗೆ ಗುರುಬಲ ಇರುವುದರಿಂದ ಯಾವೆಲ್ಲಾ ಲಾಭಗಳು ದೊರೆಯಲಿದೆ ಉಳಿದ ಗ್ರಹಗಳ ಸಂಚಾರದಿಂದ ಏನೆಲ್ಲಾ ಬದಲಾವಣೆಗಳು ಧನಸ್ಸು ರಾಶಿಯವರ ಜೀವನದಲ್ಲಿ ಕಂಡು ಬರಲಿದೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಧನಸ್ಸು ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಗುರುಬಲ ಉತ್ತಮವಾಗಿದೆ, ಗುರು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತಾನೆ. ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಶನಿಯಿಂದಲೂ ಯಾವುದೆ ಸಮಸ್ಯೆ ಬರುವುದಿಲ್ಲ. ಲಾಭ ಸ್ಥಾನದಲ್ಲಿ ಕೇತು ಇರುವುದರಿಂದ ಧನಸ್ಸು ರಾಶಿಯವರಿಗೆ ಕೇತು ಲಾಭವನ್ನು ಕೊಡುತ್ತಾನೆ. ರಾಹು ಗುರು ಜೊತೆ ಇರುವುದರಿಂದ ದೋಷ ಪರಿಹಾರವಾಗುತ್ತದೆ. ಕುಜ ಈ ರಾಶಿಯವರಿಗೆ ದಶಮ ಸ್ಥಾನದಲ್ಲಿ ಇರುವುದರಿಂದ ಈ ತಿಂಗಳು ಜವಾಬ್ದಾರಿ ಹೆಚ್ಚಾಗುತ್ತದೆ, ಕೆಲಸ ಹೆಚ್ಚಾಗುತ್ತದೆ ಇದರಿಂದ ಮಾನಸಿಕವಾಗಿ ಆಯಾಸ ಕಂಡುಬರುತ್ತದೆ. ಕೆಲಸ ಹೆಚ್ಚಾಗುತ್ತದೆ ಆದರೆ ಸಂಪಾದನೆ ಹೆಚ್ಚಾಗುವುದಿಲ್ಲ ಜೊತೆಗೆ ಉದ್ಯೋಗದಲ್ಲಿ ಕಿರಿ ಕಿರಿ ಕಂಡುಬರುತ್ತದೆ. ಧನಸ್ಸು ರಾಶಿಯವರು ಸುಲಭವಾಗಿ ಯಾರನ್ನು ನಂಬಬಾರದು. ಯಾವುದೆ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹತ್ತು ಸರಿ ಯೋಚಿಸಿ ಮುಂದುವರಿಯುವುದು ಸೂಕ್ತ.

ಧನಸ್ಸು ರಾಶಿಯವರು ವ್ಯಾಪಾರ, ಪಾರ್ಟ್ನರ್ ಶಿಪ್ ಬಿಸಿನೆಸ್ ನಡೆಸುತ್ತಿದ್ದರೆ ಅವರಿಗೆ ತೊಂದರೆ ಇರುವುದಿಲ್ಲ. ಹೊಸದಾಗಿ ಬಿಸಿನೆಸ್ ಪ್ರಾರಂಭ ಮಾಡುತ್ತಿದ್ದರೆ ಅಥವಾ ಬಿಸಿನೆಸ್ ನಲ್ಲಿ ಅಭಿವೃದ್ದಿ ಮಾಡುವುದಿದ್ದರೆ ಸಪ್ಟೆಂಬರ್ ತಿಂಗಳು ಧನಸ್ಸು ರಾಶಿಯವರಿಗೆ ಉತ್ತಮವಾಗಿದೆ. ಉದ್ಯೋಗ ಬದಲಾವಣೆ ಮಾಡುವವರು ಈ ತಿಂಗಳಿನಲ್ಲಿ ಮಾಡಬಹುದು. ಸೆಪ್ಟೆಂಬರ್ ತಿಂಗಳಿನಲ್ಲಿ ಧನಸ್ಸು ರಾಶಿಯವರಿಗೆ ವಿವಾಹ, ಮನೆಗೆ ಸಂಬಂಧಿಸಿದ ಶುಭಕಾರ್ಯಗಳು ನಡೆಯಲಿವೆ. ಧನಸ್ಸು ರಾಶಿಯವರಿಗೆ ಈ ತಿಂಗಳಿನಲ್ಲಿ ಸೂರ್ಯ ಗ್ರಹದ ಬದಲಾವಣೆಯಿಂದ ಎಲ್ಲಾ ರೀತಿಯಲ್ಲಿ ಬಲ ದೊರೆಯುತ್ತದೆ. ಧನಸ್ಸು ರಾಶಿಯ ರಾಜಕೀಯ ಮುಖಂಡರಿಗೆ ಸಪ್ಟೆಂಬರ್ ತಿಂಗಳು ಉತ್ತಮವಾಗಿದೆ, ಹಣ, ಅಧಿಕಾರ ವೃದ್ಧಿಯಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಇದ್ದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ದೂರವಾಗುತ್ತದೆ.

ಈ ತಿಂಗಳಿನಲ್ಲಿ ಧನಸ್ಸು ರಾಶಿಯವರಿಗೆ ಕೆಟ್ಟ ಕೆಲಸ ಮಾಡಬೇಕು ಎಂದು ಮನಸ್ಸಿಗೆ ಅನಿಸುತ್ತದೆ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಯೋಗದ ವಿಷಯ ನೋಡುವುದಾದರೆ ಧನಸ್ಸು ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಪರಿವರ್ತನಾ ಯೋಗ ಇದೆ. ರವಿಗೆ ಬಲ ಇರುವುದರಿಂದ ಚಿನ್ನದ ವ್ಯಾಪಾರ, ಕೃಷಿ ವ್ಯಾಪಾರ, ಎಣ್ಣೆ ವ್ಯಾಪಾರ, ಔಷಧಿ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ದೊರೆಯಲಿದೆ. ರೈತರಿಗೆ ಉತ್ತಮ ಸಮಯ ಇದಾಗಿದೆ. ಧನಸ್ಸು ರಾಶಿಯ ರೋಗಿಗಳಿಗೆ ಸಪ್ಟೆಂಬರ್ ತಿಂಗಳಿನಲ್ಲಿ ರೋಗ ಗುಣವಾಗುತ್ತದೆ. ಸಾಮಾಜಿಕ ಮುಖಂಡರಿಗೆ ಒಳ್ಳೆಯದಾಗುತ್ತದೆ.

Dhansus rasi Horoscope September 2023

ಈ ರಾಶಿಯವರಿಗೆ ಮೂಲ ಕೆಲಸ ಕೈ ಹಿಡಿಯುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುವುದರಿಂದ ಬಂಧು ಮಿತ್ರರು ಮನೆಗೆ ಬರುವ ಮೂಲಕ ಸಂತೋಷ ಕಂಡುಬರುತ್ತದೆ. ಆರೋಗ್ಯ ವೃದ್ಧಿ, ಹಿರಿಯರ ಆಶೀರ್ವಾದ ಲಭಿಸುತ್ತದೆ. ಅದೃಷ್ಟ ಈ ತಿಂಗಳಲ್ಲಿ ಧನಸ್ಸು ರಾಶಿಯವರನ್ನು ಹುಡುಕಿಕೊಂಡು ಬರುತ್ತದೆ. ವಾಹನ ಚಾಲಕರಿಗೆ ಉತ್ತಮವಾಗಿದೆ ಈ ತಿಂಗಳು.

ಧನಸ್ಸು ರಾಶಿಯವರಿಗೆ ಸೊಂಬೇರಿತನ ಉಂಟಾಗುತ್ತದೆ, ದಿನದ ಅಂತ್ಯದಲ್ಲಿ ಆಯಾಸ ಕಂಡುಬರುತ್ತದೆ ಅದಕ್ಕೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ತಿರುಗಾಟ ಹೆಚ್ಚಿರುವುದರಿಂದ ಗಾಯಗಳಾಗುವ ಸಾಧ್ಯತೆ ಇದೆ, ದ್ವೇಷ, ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ಒಬ್ಬರ ಮೇಲೆ ಒಬ್ಬರು ಸಂದೇಹಪಡುತ್ತಾರೆ ಅದರ ಬಗ್ಗೆ ಎಚ್ಚರ ವಹಿಸಬೇಕು.

ಪ್ರತಿದಿನ ಧನಸ್ಸು ರಾಶಿಯವರು ಮನೆ ದೇವರಿಗೆ ಹೂವನ್ನು ಹಾಕಿ ಎರಡು ದೀಪವನ್ನು ಹಚ್ಚಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು ಇದರಿಂದ ಧನಸ್ಸು ರಾಶಿಯವರಿಗೆ ಒಳ್ಳೆಯದಾಗುತ್ತದೆ. ಒಟ್ಟಿನಲ್ಲಿ ಧನಸ್ಸು ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಚಿಂತೆಪಡುವ ಅವಶ್ಯಕತೆ ಇಲ್ಲ ಶುಭ ಫಲ ದೊರೆಯಲಿದೆ. ಈ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದಲ್ಲಿ ಅಥವಾ ಪರಿಚಯದವರಲ್ಲಿ ಧನಸ್ಸು ರಾಶಿಯವರಿದ್ದರೆ ಅವರಿಗೆ ತಿಳಿಸಿ, ಪ್ರಯೋಜನವನ್ನು ಪಡೆಯಿರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *