ಧನಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಧನಿಯಾ ಎಲ್ಲರಿಗೂ ಗೊತ್ತಿರಲೇ ಬೇಕಾದ ಒಂದು ಸಾಂಬಾರು ಪದಾರ್ಥ ಯಾಕಂದ್ರೆ ಧನಿಯಾ ಇಲ್ಲದೆ ಯಾವ ಮಸಾಲೆಯೂ ರುಚಿಸುವುದಿಲ್ಲ ಪ್ರತಿನಿತ್ಯ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಧನಿಯಾ ಪುಡಿಯ ಪಾತ್ರ ಅದರ ರುಚಿ ಇದ್ದೆ ಇರುತ್ತದೆ ಆದ್ದರಿಂದ ಧಾನಿಯಾಕ್ಕೆ ಅದರದ್ದೇ ಆದ ಮಹತ್ವವೂ ಇದೆ. ಧನಿಯಾ ರುಚಿ ಇಲ್ಲದ ಸಾರು ಅದೊಂದು ಸಾರೇ ಅಲ್ಲ ಎನ್ನುವ ಮಾತಿದೆ ಹಾಗೆ ಧನಿಯಾ ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯೂ ಹೌದು ಇನ್ನು ಧನಿಯಾ ಬರಿಯ ಸಾಂಬಾರು ಪದಾರ್ಥ ಮಾತ್ರವಲ್ಲದೆ ಪೋಟಾಸ್ಸಿಯುಮ್ ಕ್ಯಾಲ್ಸಿಯಮ್ ವಿಟಮಿನ್ ಸಿ ಗಳಂತಹ ಪೋಷಕಾಂಶಗಳನ್ನು ತುಂಬಿಕೊಂಡಿದ್ದು ಮೇಗ್ನಿಶಿಯಮ್ ಅಂಶ ಹೆರಳವಾಗಿದ್ದು ಮತ್ತು ಈ ಎಲಾ ಸತ್ವಗಳು ಮಾನವನ ದೇಹದಲ್ಲಿನ ರೋಗಗಳನ್ನು ದೂರ ಮಾಡಲು ಸಹಾಯ ಮಾಡುತ್ತವೆ.
ಇನ್ನು ಧನಿಯಾದ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ ಮೂರು ಚಮಚ ಧನಿಯಾವನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಅದು ಅರ್ಧ ಗ್ಲಾಸ್ ಆಗುವ ವರೆಗೂ ಕುದಿಸಿ ನಂತರ ಅದನ್ನು ಸೋರಿಸಿ ಈ ನೀರನ್ನು ಪ್ರತಿನಿತ್ಯ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಧನಿಯಾದಲ್ಲಿರುವ ಕೆಲವು ಸತ್ವಗಳು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ ಸಂಶೋಧನೆಯ ಪ್ರಾಕಾರ ಯಾವ ವ್ಯಕ್ತಿಯ ದೇಹದಲ್ಲಿ ಕೊಬ್ಬಿನಂಶ ಹೆರಳವಾಗಿರುವುದೋ ಅವರು ಧನಿಯಾದ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು
ಎರಡು ಗ್ಲಾಸ್ ನೀರಿನಲ್ಲಿ ಧನಿಯಾ ಬೀಜ ಜೀರಿಗೆ ಚಹಾದ ಪುಡಿ ಸಕ್ಕರೆ ಹಾಕಿ ಬೆರೆಸಿ ಅದನ್ನು ನಿಯಮಿತವಾಗಿ ಕುದಿಸಿ ಅದನ್ನು ಸೋರಿಸಿ ನಂತರ ಈ ನೀರನ್ನು ಕುಡಿಯುವುದರಿಂದ ಅಸಿಡಿಟಿಯಂತಹ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಸಹ ಶೀಘ್ರದಲ್ಲೇ ಗುಣಮುಖವಾಗುತ್ತದೆ ಹಾಗೂ ಪಚನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಧನಿಯಾದ ನೀರನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ಇರುವ ರೋಗಿಗಳ ದೇಹದಲ್ಲಿನ ಇನ್ಸುಲಿನ್ ಅಂಶ ಕ್ರಮೇಣ ನಿಯಂತ್ರಣದಲ್ಲಿರುವಂತೆ ಕಾಪಾಡುತ್ತದೆ.