ನಮ್ಮ ದೇಶದಲ್ಲಿ ಎಷ್ಟೋ ಜನರಿಗೆ ಅವರದೇ ಆದಂತಹ ಮನೆ ಇರುವುದಿಲ್ಲ ಆರ್ಥಿಕವಾಗಿ ಅವ್ರು ತುಂಬಾ ಹಿಂದುಳಿದ ಕಾರಣ ಅವರಿಗೆ ಮನೆ ಕೊಟ್ಟು ಕೊಳ್ಳುವ ಶಕ್ತಿ ಇರುವುದಿಲ್ಲ ಅಂತವರಿಗೆ ನಾವಿಂದು ಮನೆ ಕಟ್ಟಿಕೊಳ್ಳಲು ಸಹಾಯವಾಗುವಂತಹ ವಸತಿ ಯೋಜನೆಯ ಬಗ್ಗೆ ತಿಳಿಸಿಕೊಡುತ್ತೇವೆ.ಇವತ್ತು ನಾವು ನಿಮಗೆ ತಿಳಿಸುತ್ತಿರುವ ಮಾಹಿತಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಬರುವಂತಹ ದೇವರಾಜ ಅರಸು ವಸತಿ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಈ ದೇವರಾಜ್ ಅರಸು ವಸತಿ ಯೋಜನೆಯ ಲಾಭವನ್ನು ಪಡೆಯಲು ಗ್ರಾಮೀಣ ಭಾಗದ ಜನರು ಮತ್ತು ನಗರ ಪ್ರದೇಶದ ಜನರು ಅರ್ಜಿಯನ್ನು ಸಲ್ಲಿಸಬಹುದು. ಈ ದೇವರಾಜ ಅರಸು ವಸತಿ ನಿಲಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ ನಿಮಗೆ ಒಂದು ಲಕ್ಷದ ಎಪ್ಪತ್ತೈದು ಸಾವಿರ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ ನೀವು ನಗರಪ್ರದೇಶದವರಾಗಿದ್ದರೆ ಎರಡು ಲಕ್ಷ ರೂಪಾಯಿ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ. ಹಾಗಾದರೆ ನೀವು ನಿಮ್ಮ ಬಳಿ ಖಾಲಿ ಜಾಗ ಇದ್ದರೆ ಈ ದೇವರಾಜ ಅರಸು ವಸತಿ ನಿಲಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಅದರಿಂದ ಸಬ್ಸಿಡಿ ಹಣವನ್ನು ಪಡೆದು ನೀವು ಸುಂದರವಾದ ಮನೆಯನ್ನು ನಿರ್ಮಿಸಿಕೊಳ್ಳಬಹುದು.

ಹಾಗಾದರೆ ಈ ದೇವರಾಜ ಅರಸು ವಸತಿ ಯೋಜನೆಗೆ ಯಾರು ಯಾರು ಅರ್ಜಿಯನ್ನು ಸಲ್ಲಿಸಬಹುದು ಮತ್ತುಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಈ ವಸತಿ ಯೋಜನೆಯಲ್ಲಿ ಹಣ ನಿಮಗೆ ಯಾವ ರೂಪದಲ್ಲಿ ಸಿಗುತ್ತದೆ ಎಲ್ಲ ಮಾಹಿತಿಗಳನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲಿಗೆ ದೇವರಾಜ ಅರಸು ವಸತಿ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಕೆಲವು ಜನರಿಗೆ ಅವರದೇ ಆದ ಮನೆ ಇರುವುದಿಲ್ಲ ಅಂಗಡಿ ಪಕ್ಕದಲ್ಲಿ ರಸ್ತೆಬದಿಗಳಲ್ಲಿ ಮಲಗಿಕೊಂಡು ಜೀವನವನ್ನು ಸಾಗಿಸುತ್ತಿರುತ್ತಾರೆ ಅಂತವರು ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಜೊತೆಗೆ ಅಂಗವಿಕಲರು ಕುಷ್ಟ ರೋಗ ಬಂದು ಗುಣಮುಖರಾಗಿರುವವರು ಎಚ್ಐವಿ ಸೋಂಕಿತರು ಮಂಗಳಮುಖಿಯರು ಲೈಂಗಿಕ ಕಾರ್ಯಕರ್ತೆಯರು ದೇವದಾಸಿಯರು ವಿಧವೆಯರು ಜೀತದಿಂದ ಮುಕ್ತರಾದವರು ಸಫಾಯಿ ಕರ್ಮಚಾರಿಗಳು ದೌರ್ಜನ್ಯಕ್ಕೊಳಗಾಗಿರುವವರು ಮತೀಯ ಗಲಭೆ ಹಾಗೂ ಚಳುವಳಿಗಳಿಂದ ಹಾನಿಗೊಳಗಾದವರು ಅಲೆಮಾರಿಗಳು ಹಾಗೂ ವಿಶೇಷ ವೃತ್ತಿಪರ ಗುಂಪುಗಳ ಫಲಾನುಭವಿಗಳು ಈ ಒಂದು ದೇವರಾಜ್ ಅರಸು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿಯಾಗಿ ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಯಾವ ಯಾವ ಕೆಟಗರಿ ಯವರಿಗೆ ಎಷ್ಟು ಸಬ್ಸಿಡಿ ಉಚಿತವಾಗಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಈ ಯೋಜನೆಗೆ ಗ್ರಾಮೀಣ ಪ್ರದೇಶದಿಂದ ಮತ್ತು ನಗರಪ್ರದೇಶದಿಂದ ಅರ್ಜಿಯನ್ನು ಸಲ್ಲಿಸಬಹುದು.

ನೀವು ಗ್ರಾಮೀಣ ಪ್ರದೇಶದಿಂದ ಅರ್ಜಿ ಸಲ್ಲಿಸಿದ ಸಾಮಾನ್ಯ ವರ್ಗದವರಾಗಿದ್ದರೆ ನಿಮಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ. ಒಂದು ವೇಳೆ ನೀವು ಎಸ್ಸಿ-ಎಸ್ಟಿ ಜನಾಂಗಕ್ಕೆ ಸೇರಿದವರಾಗಿದ್ದರೆ ನಿಮಗೆ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ. ಇನ್ನು ನೀವು ನಗರಪ್ರದೇಶದವರಾಗಿದ್ದು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ, ಸಾಮಾನ್ಯ ವರ್ಗದವರಾಗಿದ್ದರೆ ಒಂದು ಲಕ್ಷದ ಇಪ್ಪತ್ತು ಸಾವಿರ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ ನೀವು ಎಸ್ಸಿ ಎಸ್ಟಿ ಜನಾಂಗದವರಾಗಿದ್ದರೆ ಎರಡು ಲಕ್ಷ ರೂಪಾಯಿ ಸಬ್ಸಿಡಿ ಹಣ ಉಚಿತವಾಗಿ ಸಿಗುತ್ತದೆ. ಈ ರೀತಿಯಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಸಾಮಾನ್ಯ ವರ್ಗದವರಿಗೆ ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ ಸಬ್ಸಿಡಿ ಹಣ ಸಿಗುತ್ತದೆ.

ನೀವು ನಗರ ಅಥವಾ ಗ್ರಾಮೀಣ ಪ್ರದೇಶದಿಂದ ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದುಕೊಂಡಿದ್ದರೆ ಯಾವ ಯಾವ ಅರ್ಹತೆಗಳು ಇರಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಈ ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮನೆ ಇರಬಾರದು ಆದರೆ ಅವರು ತಮ್ಮದೇ ಆದ ಜಾಗವನ್ನು ಹೊಂದಿರಬೇಕು.

ಇನ್ನು ನೀವು ಗ್ರಾಮೀಣ ಪ್ರದೇಶದಿಂದ ಅಜ್ಜಿಯನ್ನ ಸಲ್ಲಿಸುತ್ತಿದ್ದರೆ ನೀವು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿರಬೇಕು ಮತ್ತು ನಿಮ್ಮ ಕುಟುಂಬದ ವಾರ್ಷಿಕ ವರಮಾನ ಮೂವತ್ತೆರಡು ಸಾವಿರದ ಒಳಗೆ ಇರಬೇಕು. ಇನ್ನು ನೀವು ನಗರಪ್ರದೇಶದಿಂದ ಅರ್ಜಿ ಸಲ್ಲಿಸುವವರಾಗಿದ್ದರೆ ನೀವು ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿರಬೇಕು ಮತ್ತು ನಿಮ್ಮ ಕುಟುಂಬದ ವಾರ್ಷಿಕ ವರಮಾನ ಎಂಬತ್ತೆಳು ಸಾವಿರದ ಆರುನೂರು ರೂಪಾಯಿಯ ಒಳಗೆ ಇರಬೇಕಾಗುತ್ತದೆ. ಇದರ ಜೊತೆಗೆ ನೀವು ಈಗಾಗಲೇ ಬೇರೆ ಯಾವುದೇ ಇಲಾಖೆ ಅಥವಾ ಯೋಜನೆಯಿಂದ ವಸತಿ ಸೌಲಭ್ಯವನ್ನು ಪಡೆದಿರಬಾರದು ಅಂಥವರು ಈ ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ದೇವರಾಜ ಅರಸು ವಸತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಿದ ಮೇಲೆ ನಿಮಗೆ ಅನುದಾನ ಸಿಗುತ್ತದೆ ಅನುದಾನದಿಂದ ನಾವೇ ಸ್ವತಃ ಮನೆಯನ್ನು ಕಟ್ಟಿಸಿ ಕೊಳ್ಳುತ್ತೇವೆ ಎನ್ನುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಇನ್ನು ಫಲಾನುಭವಿಗಳು ನೀವೇ ಎಜೆನ್ಸಿಯ ಮೂಲಕ ಕಟ್ಟಿಕೊಡಿ ಎಂದು ಹೇಳಿದರು ಎಜೆನ್ಸಿಯ ಮೂಲಕ ಮನೆಯನ್ನು ಕಟ್ಟಿ ಕೊಡಲಾಗುತ್ತದೆ. ಇನ್ನು ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಬಿಡುಗಡೆ ಮಾಡಿದ ಹಣದ ಮಾಹಿತಿ ಎಸ್ಎಂಎಸ್ ಮೂಲಕ ಫಲಾನುಭವಿಗಳ ಮೊಬೈಲ್ಗೆ ಬರುತ್ತದೆ.

ಈ ಯೋಜನೆಗೆ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂದರೆ ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ವಾಸಿಸುವ ಜನರು ನಿಮ್ಮ ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿರುವ ದೇವರಾಜ್ ಅರಸು ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ ನೀವು ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳಿದಾಗ ಅವರು ನಿಮಗೆ ಒಂದು ಫಾರ್ಮ್ ಅನ್ನು ಕೊಡುತ್ತಾರೆ ನೀವು ಆ ಫಾರಂನಲ್ಲಿ ಕೇಳಿರುವ ಮಾಹಿತಿಯನ್ನು ತುಂಬಬೇಕು ನಂತರ ಅದರ ಜೊತೆ ನೀವು ಯಾವ ಯಾವ ದಾಖಲೆಗಳನ್ನು ಕೊಡಬೇಕಾಗುತ್ತದೆ ಎಂದರೆ, ನೀವು ಹೊಂದಿರುವ ಖಾಲಿ ಜಾಗಕ್ಕೆ ಸಂಬಂಧಿಸಿದ ದಾಖಲೆ, ಆಧಾರ್ ಕಾರ್ಡ್ ನಿಮ್ಮ ಬಳಿ ರೇಷನ್ ಕಾರ್ಡ್ ವೋಟರ್ ಕಾರ್ಡ್ ಇದ್ದರೆ ಅದರ ಪ್ರತಿಗಳನ್ನು ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಜೊತೆಗೆ ನಿಮ್ಮ ಪಾಸ್ಪೋರ್ಟ್ ಸೈಜ್ ಅಳತೆಯ ಫೋಟೋವನ್ನು ಕೊಡಬೇಕು ಇದಿಷ್ಟು ದಾಖಲೆಗಳೊಂದಿಗೆ ನೀವು ಅರ್ಜಿಯನ್ನು ದೇವರಾಜ್ ಅರಸು ಅಭಿವೃದ್ಧಿ ನಿಗಮದಲ್ಲಿ ಸಬ್ಮಿಟ್ ಮಾಡಬೇಕು.

ಈ ರೀತಿ ನೀವು ಸಬ್ಮಿಟ್ ಮಾಡಿದ ನಂತರ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ ಆಯ್ಕೆಯಾದ ಫಲಾನುಭವಿಗಳಿಗೆ ಸಬ್ಸಿಡಿ ಹಣ ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ ನಂತರ ನೀವು ನಿಮ್ಮ ಖಾಲಿ ಇರುವ ಜಾಗದಲ್ಲಿ ಸುಂದರವಾದ ಮನೆಯನ್ನು ಕಟ್ಟಿಕೊಳ್ಳಬಹುದು. ನೋಡಿದಿರಲ್ಲ ಸ್ನೇಹಿತರೇ ನೀವು ಕೂಡ ದೇವರಾಜ ಅರಸು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬಹುದು. ನೀವು ಮಾಹಿತಿಯ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಪರಿಚಿತರಿಗೂ ದೇವರಾಜ ಅರಸು ವಸತಿ ಯೋಜನೆಯ ಮಾಹಿತಿಯನ್ನು ತಿಳಿಸಿರಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *