ನಮ್ಮ ಸುತ್ತಮುತ್ತ ನಡೆಯುವ ಕೆಲವೊಂದು ವಿಷಯ, ಘಟನೆಗೆ ಕಾರಣವಿರುತ್ತದೆ ಅದರ ಬಗ್ಗೆ ತಿಳಿದುಕೊಳ್ಳಬೇಕು. ಶ್ರವಣಬೆಳಗೋಳದ ಗೊಮ್ಮಟೇಶ್ವರ ಮೂರ್ತಿಯನ್ನು ಯಾರು ಸ್ಥಾಪಿಸಿದರು ಅದರ ಸಂಪೂರ್ಣ ಕಥೆಯನ್ನು ಹಾಗೂ ಸತ್ತ ನಂತರ ಮಡಕೆಗೆ ನೀರು ತುಂಬಿಸಿ ರಂಧ್ರ ಮಾಡಿ ಒಡೆಯುತ್ತಾರೆ ಇದಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಜಿನಮಾತೆ ಮರುದೇವಿ ಮತ್ತು ಮನುನಾಭಿರಾಜನಿಗೆ ವೃಷಭನಾಥ ಹುಟ್ಟುತ್ತಾನೆ. ವೃಷಭನಾಥ ಪ್ರೌಢಾವಸ್ಥೆಗೆ ಬಂದಾಗ ರಾಜ್ಯಭಾರ ಮಾಡುತ್ತಾ ವೈಭೋಗದಿಂದ ಜೀವನ ನಡೆಸುತ್ತಾರೆ ಇವರಿಗೆ ಸುನಂದಾ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು ಮತ್ತು ಮೂರು ಜನ ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇರುತ್ತಾರೆ.

ಭರತ ಮತ್ತು ಬಾಹುಬಲಿ ಎಂಬುದು ಅವರ ಮಕ್ಕಳ ಹೆಸರು. ವರ್ಷ ಕಳೆದಂತೆ ವೃಷಭನಾಥ ಅವರ ಮನಸ್ಸು ವೈರಾಗ್ಯದ ಕಡೆ ಹೋಗುತ್ತದೆ. ತಮ್ಮ ಮಕ್ಕಳಿಗೆ ರಾಜ್ಯವನ್ನು ಹಂಚಿ ಕಾಡಿಗೆ ಹೋಗುತ್ತಾರೆ. ಭರತನಿಗೆ ಪುಣ್ಯ ಫಲದಿಂದ ಚಕ್ರರಥವು ವರವಾಗಿ ಬರುತ್ತದೆ ಇದರಿಂದ ರಾಜ್ಯವನ್ನು ಗೆಲ್ಲುತ್ತಾನೆ. ವಾಪಸ್ ಬರುವಾಗ ಚಕ್ರರಥ ಭರತನ ರಾಜ್ಯದ ಒಳಗೆ ಪ್ರವೇಶ ಮಾಡುವುದಿಲ್ಲ. ಪುರೋಹಿತರನ್ನು ಕೇಳಿದಾಗ ಅವರು ನಿನ್ನ ತಮ್ಮಂದಿರನ್ನು ನೀನು ಗೆದ್ದಿಲ್ಲ ಹಾಗಾಗಿ ಚಕ್ರರಥ ರಾಜ್ಯದ ಒಳಗೆ ಪ್ರವೇಶ ಮಾಡಲಿಲ್ಲ ಎನ್ನುತ್ತಾರೆ.

ಬಾಹುಬಲಿಯನ್ನು ಬಿಟ್ಟು ಉಳಿದ ತಮ್ಮಂದಿರು ತಮ್ಮ ರಾಜ್ಯವನ್ನು ಭರತನಿಗೆ ಒಪ್ಪಿಸುತ್ತಾರೆ. ಭರತ ಹಾಗೂ ಬಾಹುಬಲಿ ಯುದ್ಧ ಮಾಡಲು ನಿರ್ಧರಿಸುತ್ತಾರೆ ಅವರದು ವಜ್ರ ದೇಹ ಏನು ಆಗುವುದಿಲ್ಲ ಆದರೆ ಸೈನಿಕರು ಬಲಿಯಾಗುವುದು ಬೇಡವೆಂದು ಅವರಿಬ್ಬರೇ ಯುದ್ದ ಮಾಡುವಂತೆ ಮಂತ್ರಿಗಳು ಹೇಳುತ್ತಾರೆ. ಆಗ ಇವರಿಬ್ಬರ ನಡುವೆ ದೃಷ್ಟಿ ಯುದ್ಧ, ಮಲ್ಲ ಯುದ್ಧ ನಡೆಯುತ್ತದೆ ಬಾಹುಬಲಿ ಗೆಲ್ಲುತ್ತಾನೆ ಆ ಸಮಯದಲ್ಲಿ ಬಾಹುಬಲಿಗೆ ವೈರಾಗ್ಯ ಭಾವನೆ ಬಂದು ಆಸ್ತಿಗಾಗಿ ಅಣ್ಣನನ್ನು ಕೊಲ್ಲದೆ ಶಾಂತನಾಗುತ್ತಾನೆ.

ಭರತ ತನ್ನ ಚಕ್ರರಥವನ್ನು ಬಾಹುಬಲಿಯ ಮೇಲೆ ಬಿಟ್ಟಾಗ ಚಕ್ರರಥ ಅವನ ಪ್ರದಕ್ಷಿಣೆ ಹಾಕಿ ಸುಮ್ಮನೆ ನಿಲ್ಲುತ್ತದೆ ಬಾಹುಬಲಿ ಗೆಲ್ಲುತ್ತಾನೆ ಆದರೆ ಅವನು ರಾಜ್ಯವನ್ನು ತೊರೆದು ವೃಷಭನಾಥನ ಬಳಿ ದೀಕ್ಷೆ ಪಡೆದು ದಿಗಂಬರನಾಗಿ ತಪ್ಪಸ್ಸಿಗೆ ನಿಲ್ಲುತ್ತಾನೆ ನಂತರ ಜ್ಞಾನೋದಯ ಆಗುತ್ತದೆ.

ಈ ಕಥೆಯನ್ನು ನೇಮಿಚಂದ್ರ ಸಿದ್ದಾರ್ಥ ಮುನಿ ಮಹಾರಾಜರು ಗಂಗರ ರಾಜ ಚಾವುಂಡರಾಯ, ಅವರ ತಾಯಿ ಕಾಳಲಾದೇವಿ, ಅವರ ಪರಿವಾರಕ್ಕೆ ಹೇಳುತ್ತಾರೆ. ಅಂದು ಕಾಳಲಾದೇವಿ ಅವರು ರಾತ್ರಿ ಕನಸಿನಲ್ಲಿ ಬಾಹುಬಲಿಯ ಮೂರ್ತಿಯನ್ನು ನೋಡುತ್ತಾರೆ. ಚಾವುಂಡರಾಯ ತಾಯಿಯ ಆಸೆಯಂತೆ ಶ್ರವಣಬೆಳಗೋಳದ ವಿಂದ್ಯಾಗಿರಿ ಬೆಟ್ಟದ ಮೇಲೆ 12 ವರ್ಷಗಳ ಕಾಲ ಅರಿಷ್ಟ ನೇಮಿ ಎಂಬ ಶಿಲ್ಪಿಯಿಂದ 57 ಅಡಿ ಎತ್ತರದ ಬಾಹುಬಲಿ ಗೊಮ್ಮಟೇಶ್ವರ ಮೂರ್ತಿಯನ್ನು ಏಕಶಿಲೆಯಲ್ಲಿ ಕೆತ್ತಿಸುತ್ತಾರೆ. ಶ್ರವಣಬೆಳಗೋಳವನ್ನು ದಕ್ಷಿಣ ಜೈನ ಕಾಶಿ ಎಂದು ಕರೆಯುತ್ತಾರೆ.

ಹಿಂದೂ ಧರ್ಮದಲ್ಲಿ ಮನುಷ್ಯ ಸತ್ತ ನಂತರ ಅಂತ್ಯಕ್ರಿಯೆ ಮಾಡುವಾಗ ಚಿತೆಯ ಮೇಲೆ ಅಥವಾ ಮಣ್ಣಿನಲ್ಲಿ ಮೃತದೇಹವನ್ನು ಹೂತು ನೀರು ತುಂಬಿದ ಮಡಕೆಯನ್ನು ಹೊತ್ತು ಮೂರು ರೌಂಡ್ ಸುತ್ತಿ ಒಂದೊಂದು ಸುತ್ತಿಗೆ ಒಂದೊಂದು ರಂಧ್ರ ಮಾಡಿ ಮಡಕೆಯನ್ನು ಒಡೆಯುತ್ತಾರೆ.

ಭಗವದ್ಗೀತೆಯಲ್ಲಿ ಒಂದು ಮಾತಿದೆ ಹುಟ್ಟಿದ ಮನುಷ್ಯನಿಗೆ ಮರಣ ತಪ್ಪುವುದಿಲ್ಲ ಎಂದು. ಮಡಕೆ ನಮ್ಮ ಶರೀರದ ಸಂಕೇತ ಅದರಲ್ಲಿರುವ ನೀರು ನಮ್ಮ ಆತ್ಮದ ಸಂಕೇತ ಮಡಕೆಗೆ ಮಾಡಿದ ರಂಧ್ರದ ಮೂಲಕ ನೀರು ಹೊರ ಹೋದಂತೆ ಮನುಷ್ಯನ ಆತ್ಮ ಹೊರ ಹೋಗುತ್ತದೆ ಎಂಬ ಸಂಕೇತವೆ ಮಡಕೆಗೆ ರಂಧ್ರ ಮಾಡಿ ಒಡೆಯುವುದು. ನಂತರ ಶರೀರವನ್ನು ಸುಡುವುದು ಆತ್ಮಕ್ಕೆ ಇನ್ನು ಈ ಶರೀರದಿಂದ ಹೋಗು ಎನ್ನುವುದರ ಸಂಕೇತ. ಅಂತ್ಯಕ್ರಿಯೆ ನಂತರ ಮನೆಯನ್ನು ಶುಭ್ರವಾಗಿ ತೊಳೆದು ತಲೆಸ್ನಾನ ಮಾಡಬೇಕು ಏಕೆಂದರೆ ಆಧ್ಯಾತ್ಮದ ಪ್ರಕಾರ ಅತ್ಮಗಳಿಂದ ನಮ್ಮನ್ನು ಬಿಡಿಸಿಕೊಳ್ಳಲು. ವೈಜ್ಞಾನಿಕವಾಗಿ ಸತ್ತ ನಂತರ ದೇಹ ಕೊಳೆಯಲು ಆರಂಭವಾಗುತ್ತದೆ ಮೃತ ದೇಹದಲ್ಲಿರುವ ಬ್ಯಾಕ್ಟೀರಿಯಾದಿಂದ ರಕ್ಷಿಸಲು ಅಂತ್ಯಕ್ರಿಯೆ ಮಾಡಿದ ನಂತರ ತಲೆ ಸ್ನಾನ ಮಾಡುವ ಸಂಪ್ರದಾಯ ಇಟ್ಟಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!