ಆರೋಗ್ಯ ನಮಗೆ ಬಹಳ ಮುಖ್ಯವಾದುದು. ಅಂತಹದರಲ್ಲಿ ಆಹಾರ ಸೇವನೆ ಬಹಳ ಮುಖ್ಯ ಪಾತ್ರವಹಿಸಿತ್ತದೆ. ಅದರಲ್ಲೂ ಬಿಪಿ, ಮಧುಮೇಹ ಮುಂತಾದ ಸಮಸ್ಯೆ ಇದ್ದಲ್ಲಿ ಆಹಾರದಲ್ಲಿ ಬದಲಾವಣೆ ತುಂಬಾ ಅಗತ್ಯ. ಇಷ್ಟ ಇಲ್ಲದೆ ಹೋದರು ಆಹಾರದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಇಂತಹದರಲ್ಲಿ ಮಧುಮೇಹ ಇದ್ದವರಿಗೆ ಕೆಲವೊಂದು ಆಹಾರ ಪದ್ಧತಿಯ ಬಗೆಗೆ ಹೇಳಲಾಗಿದೆ. ಅದೇನೆಂದು ನಾವು ತಿಳಿಯೋಣ.
ಮಧುಮೇಹ ಇರುವವರು ಇನ್ಸುಲಿನ್, ಮಾತ್ರೆ ತೆಗೆದುಕೊಳ್ಳುತ್ತಾರೆ. ಏನೇನೋ ಮನೆ ಔಷಧಿಗಳ ಪ್ರಯೋಗ ಕೂಡ ಮಾಡುತ್ತಾರೆ ಆದರೂ ಹತೋಟಿಗೆ ಸಿಗುವುದಿಲ್ಲ. ಇವೆಲ್ಲ ಮಾಡದೆ ಹೇಳುವುದಿಲ್ಲ. ಆದರೆ ಇವುಗಳ ಒಟ್ಟಿಗೆ ಕೆಲವು ಆಹಾರ ಬದಲಾವಣೆಗಳು ಅಗತ್ಯ. ವ್ಯಾಯಮ ಅಗತ್ಯ ತುಂಬಾ ಇದೆ. ಮಧುಮೇಹದ ಪ್ರಮಾಣ ಹೆಚ್ಚಾದರೆ ಬಹುಅಂಗಾಗ ತೊಂದರೆಗಳು ಪ್ರಾರಂಭವಾಗುತ್ತದೆ. ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ಎರಡು ವೈದ್ಯರು ಡಾಕ್ಟರ್ ಗಗನ ಹಾಗೂ ಡಾಕ್ಟರ್ ಜೀನು ಆಂಟೋನಿ ಅವರು ಸೇರಿ ಮಧುಮೇಹಕ್ಕೆ ಒಳ್ಳೆಯ ಸಲಾಡ್ ಹೇಳಿದ್ದಾರೆ. ಇದರಿಂದ ಮಧುಮೇಹ ಒಂದೆ ಅಲ್ಲದೆ ಮೊಷನ್ ಸರಿಯಾಗಿ ಆಗುತ್ತದೆ. ನಾರಿನಾಂಶ ಇದ್ದು ಉತ್ತಮ ಆರೋಗ್ಯಕರ ಆಹಾರವಾಗಿದೆ. ಈ ಸಲಾಡ್ ಅನ್ನು, ಬೆಳಿಗ್ಗೆ, ಮಧ್ಯಾನ ಅಥವಾ ಸಂಜೆ ಯಾವುದಾರೂ ಎರಡು ಹೊತ್ತು ಊಟಕ್ಕಿಂತ ಅರ್ಧ ಗಂಟೆ ಮೊದಲು ತೆಗೆದುಕೊಳ್ಳಬೇಕು. ಇದರಿಂದ ಊಟ ಹತೋಟಿಗೆ ಬರುತ್ತದೆ.
ಹಾಗಾದರೆ ಈ ಸಲಾಡ್ ಮಾಡುವುದು ಹೇಗೆ ನೋಡೊಣ. ಇದರ ಹೆಸರು ಅಮೃತ ಸಲಾಡ್ ಎಂದು. ಇದಕ್ಕೆ ಬೇಕಾದ ಸಾಮಾಗ್ರಿಗಳು, ಮೆಂತೆಸೊಪ್ಪು, ತೆಂಗಿನ ತುರಿ, ಆಲಿವ್ ಎಣ್ಣೆ, ನವಿಲು ಕೋಸು, ಸೌತೆಕಾಯಿ, ಚಕ್ಕೆ ಪುಡಿ, ಕಾಳು ಮೆಣಸಿನ ಪುಡಿ, ಗೋಡಂಬಿ.
ಮಾಡುವ ವಿಧಾನ- ಒಂದು ಬೌಲ್ ಸೌತೆಕಾಯಿ, ಒಂದು ಬೌಲ್ ನವಿಲುಕೊಸು, ಸ್ವಲ್ಪ ಪ್ರಮಾಣದಲ್ಲಿ ಮೆಂತೆ ಸೊಪ್ಪು, ಗೊಡಂಬಿ ಒಂದು ಕಪ್ ನಲ್ಲಿ ಹಾಕಿ, ಅದರ ಮೇಲೆ ಕಾಳು ಮೆಣಸಿನ ಪುಡಿ ಉದುರಿಸಿಕೊಳ್ಳಬೇಕು. ಉಪ್ಪಿನ ಬದಲು ಚೆಕ್ಕೆಯ ಪುಡಿ ಉದುರಿಸಿಕೊಳ್ಳಬೇಕು. ನಂತರ ತೆಂಗಿನ ತುರಿ ಹಾಕಿ ಕಲಸಿಕೊಂಡು ನಂತರದಲ್ಲಿ ಆಲಿವ್ ಆಯಿಲ್ ಹಾಕಿ ಕಲಸಿಕೊಳ್ಳಬೇಕು. ಆಲಿವ್ ಆಯಿಲ್ ರುಚಿ ತಗ್ಗಿಸಲು ನಿಂಬೆ ರಸ ಕೂಡಾ ಬಳಸಬಹುದು.
ಈ ಅಮೃತ ಸಲಾಡ್ ಹೆಚ್ಚಿನದಾಗಿ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಆಹಾರದಲ್ಲಿ ಹತೋಟಿಯನ್ನು ಸಾಧಿಸಲು ಉತ್ತಮ ಉಪಾಯ. ರುಚಿಯಾಗಿಯೂ ಇರುತ್ತದೆ. ಜೊತೆಗೆ ಆಹಾರಗಳನ್ನು ಕಡಿಮೆ ಸೇವಿಸುವುದಕ್ಕೆ ಸಹಾಯ ಮಾಡುತ್ತದೆ.