ಹೆಣ್ಣುಮಕ್ಕಳಿಗೆ ರಾತ್ರಿ ಹೊತ್ತು ಅನಾನುಕೂಲ ಆಗುವಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಆಗ ನಮ್ಮೆಲ್ಲರಲ್ಲೂ ಕಾಡುವಂತಹ ಪ್ರಶ್ನೆ ಪೊಲೀಸರು ಏನು ಮಾಡುತ್ತಿದ್ದಾರೆ? ಎಂದು. ಇಂತಹದ್ದೆ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಂತಹ ಒಬ್ಬ ಮಹಿಳಾ ಡಿಸಿಪಿ ರಾತ್ರಿಹೊತ್ತು ಒಬ್ಬ ಸಾಮಾನ್ಯ ಮಹಿಳೆಯಂತೆ ಎಲ್ಲ ಸ್ಥಳಗಳನ್ನು ಸುತ್ತುತ್ತಾರೆ. ಆ ರಾತ್ರಿ ಆಕೆಗೆ ಆಗುವ ಅನುಭವ ಬಹಳ ಭಯಾನಕ ಹಾಗೂ ವಿಚಿತ್ರವಾಗಿರುತ್ತದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೇರಳ ರಾಜ್ಯದ ಕ್ಯಾಲಿಕಟ್ ನಲ್ಲಿ ಡಿಸಿಪಿ ಆಗಿ ಕೆಲಸ ಮಾಡುತ್ತಿರುವ ಮೇರಿ ಜೋಸೆಫ್ ರಾತ್ರಿ ಹೊತ್ತಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಏನು ಎಂಬುದನ್ನು ತಿಳಿಯಲು ಒಂದು ಉಪಾಯ ಮಾಡಿ ಅದರ ಪ್ರಕಾರ ಯಾರಿಗೂ ತಿಳಿಯದಂತೆ ಡಿಸಿಪಿ ಮೇರಿ ಜೋಸೆಫ್ ಹಾಗೂ ಇನ್ನಿಬ್ಬರು ಮಹಿಳಾ ಪೇದೆಗಳು ಸಾಮಾನ್ಯ ಮಹಿಳೆಯರಂತೆ ಬಟ್ಟೆ ಧರಿಸಿ ಕ್ಯಾಲಿಕಟ್ ನಗರದ ಹಲವು ಬೀದಿಗಳಲ್ಲಿ ಮಧ್ಯರಾತ್ರಿಯಲ್ಲಿ ಸುತ್ತಾಡುತ್ತಾರೆ. ಒಂದು ಬಸ್ ಸ್ಟ್ಯಾಂಡ್ ಬಳಿ ನಿಂತ ಮೇರಿ ಜೋಸೆಫ್ ಅವರಿಗೆ ಅಲ್ಲಿ ಯಾವುದೇ ಮಹಿಳೆಯರು ಕಾಣಿಸಲಿಲ್ಲ ಅಲ್ಲಿ ಇದ್ದವರು ಬರೀ ಪುರುಷರಾಗಿದ್ದರು. ಹಗಲಿನಲ್ಲಿ ಬಹಳಷ್ಟು ವಾಹನಗಳ ಸಂಚಾರದಿಂದ ಕೂಡಿರುವ ರಸ್ತೆ ಅದು ರಾತ್ರಿ ಸಮಯದಲ್ಲಿ ಖಾಲಿ ಖಾಲಿ. ಮೇರಿ ಜೋಸೆಫ್ ಆ ಕಾಲಿ ರಸ್ತೆಯಲ್ಲಿ ನಿಂತಿರುವಾಗ ಮೇರಿ ಜೋಸೆಫ್ ಅವರನ್ನು ಒಂದಿಷ್ಟು ಜನ ಪುರುಷರು ಇವರನ್ನು ಕೆಟ್ಟದಾಗಿ ನೋಡುತ್ತಾರೆ. ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಎದುರು ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಮೂವರು ಯುವಕರು ಬಹಳ ಕೆಟ್ಟ ಭಾಷೆಯಲ್ಲಿ ಮಾತನಾಡುತ್ತ ಅಸಭ್ಯವಾಗಿ ವರ್ತಿಸುತ್ತಾರೆ. ಮೇರಿ ಜೋಸೆಫ್ ಗೆ ಆ ಕ್ಷಣದಲ್ಲಿ ಆ ಯುವಕರ ಮೇಲೆ ಬಹಳಷ್ಟು ಕೋಪ ಬಂದರೂ ಅಲ್ಲಿಂದ ಮುಂದೆ ಸಾಗಿ ಇನ್ನೊಂದು ಬಸ್ಟ್ಯಾಂಡಿನಲ್ಲಿ ಬಂದು ನಿಲ್ಲುತ್ತಾರೆ. ಆಗ ಅಲ್ಲೇ ಇದ್ದ ಕೆಲವು ಗಂಡಸರು ಮೇರಿ ಜೋಸೆಫ್ ಹಾಗೂ ಇಬ್ಬರು ಮಹಿಳಾ ಪೊಲೀಸ್ ಪೇದೆಗಳ ಮೇಲೆ ಮತ್ತೆ ಕೆಟ್ಟ ಶಬ್ದಗಳನ್ನು ಬಳಕೆ ಮಾಡುತ್ತಾರೆ.
ಈ ರೀತಿಯಾಗಿ ಮಧ್ಯರಾತ್ರಿಯಲ್ಲಿ ನಗರದ ಕೆಲವು ಬೀದಿಗಳಲ್ಲಿ ಸಂಚಾರ ನಡೆಸಿ ತಪಾಸಣೆ ನಡೆಸಿದ ಡಿಸಿಪಿ ಮೇರಿ ಜೋಸೆಫ್ ಅವರಿಗೆ ಇದೊಂದು ಕೆಟ್ಟ ಅನುಭವವಾಗಿತ್ತು. ರಾತ್ರಿಹೊತ್ತು ಮಹಿಳೆಯರು ಕಾಣಿಸಿಕೊಂಡಾಗ ಅವ್ಯಾಚ್ಯ ಶಬ್ದಗಳನ್ನು ಬಳಕೆಮಾಡಿ ಕೆಟ್ಟದಾಗಿ ನೋಡುತ್ತಾರೆಯೇ ಹೊರತು ಒಬ್ಬ ಹೆಣ್ಣು ಯಾತಕ್ಕಾಗಿ ಅಷ್ಟೊತ್ತಿನಲ್ಲಿ ಇರುತ್ತಾಳೆ ಯಾರು ಅವಳು ಅವಳಿಗೆ ಏನಾದರೂ ಸಮಸ್ಯೆ ಆಗಿದೆಯಾ ಎಂದು ಒಬ್ಬರು ಕೇಳುವುದಿಲ್ಲ. ಆದರೆ ಒಂದು ಪ್ರದೇಶದಲ್ಲಿ ಡಿಸಿಪಿ ಮೇರಿ ಜೋಸೆಫ್ ನಿಂತಿರುವಾಗ ಅಲ್ಲಿಗೆ ಬಂದ ಪೆಟ್ರೋಲ್ ಪೊಲೀಸರು ನೀನು ಯಾರು ಏನಾದ್ರೂ ಸಹಾಯ ಬೇಕಂತ ಕೇಳಿದ್ದರು. ಆದರೆ ಆ ಪೊಲೀಸ್ ಸಹ ಡಿಸಿಪಿ ಮೇರಿ ಜೋಸೆಫ್ ಅವರನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಹೀಗೆ ನೇರವಾಗಿ ಒಬ್ಬಂಟಿ ಮಹಿಳೆಗೆ ರಾತ್ರಿ ಸಮಯದಲ್ಲಿ ಇಂತಹ ಕೆಟ್ಟ ಅನುಭವವಾಗುವುದು, ಎಂತಹ ಪ್ರದೇಶಗಳು ರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದನ್ನು ಕಣ್ಣಾರೆ ಗಮನಿಸಿದ ಡಿಸಿಪಿ ಮೇರಿ ಜೋಸೆಫ್ ಮರುದಿನವೇ ಆ ಪ್ರದೇಶಗಳಿಗೆ ಪೊಲೀಸರನ್ನು ನೇಮಿಸಿದರು ಹಾಗೂ ಏರಿಯಾಗಳಲ್ಲಿ ಬೀದಿದೀಪಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ಎಲ್ಲಾ ಪೊಲೀಸ್ ಆಫೀಸರ್ ಗಳು ಸಹ ಪ್ರಾಮಾಣಿಕತೆ ಹಾಗೂ ನಿಷ್ಟೆಯಿಂದ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದರೆ ಎಷ್ಟು ಚೆನ್ನ ಅಲ್ಲವೇ?