ಮಾನವ ತನ್ನ ಆರಂಭದ ದಿನಗಳಲ್ಲಿ ದಟ್ಟವಾದ ಅರಣ್ಯಗಳಲ್ಲಿ ಬದುಕುತ್ತಿದ್ದ. ಮರ ಗಿಡಗಳಲ್ಲಿ ಸಿಗುವಂತ ಹಣ್ಣು ಹಂಪಲುಗಳನ್ನು ತಿಂದು ಸುಖಜೀವನ ನಡೆಸುತ್ತಿದ್ದ. ಆಗಿನ ಕಾಲದಲ್ಲಿ ಅರಣ್ಯಗಳಲ್ಲಿ ಮರಗಿಡಗಳನ್ನು ಮನುಷ್ಯ ಗೊಬ್ಬರ ನೀರು ಹಾಕಿ ಬೆಳೆಸುತ್ತಿರಲಿಲ್ಲ ನೈಸರ್ಗಿಕವಾಗಿ ತಾವೇ ಬೆಳೆಯುತ್ತಿದ್ದವು. ನಂತರ ವ್ಯವಸಾಯಕ್ಕೆ ಇಳಿದ ಮಾನವ ತನಗೆ ಬೇಕಾದ ದವಸ ಧಾನ್ಯಗಳನ್ನು ಬೆಳೆದು ತನಗೆ ಅವಶ್ಯವಿರುವಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡುತ್ತಿದ್ದ. ಆಗಲೇ ಮನುಷ್ಯನಿಗೆ ಹಣದ ಅತಿಯಾಸೆ ಹುಟ್ಟಿಕೊಂಡಿದ್ದು ಹೆಚ್ಚು ಬೆಳೆ ಬೆಳೆದರೆ ಹೆಚ್ಚು ಹಣ ಗಳಿಸಬಹುದು ಎಂಬ ದುರಾಸೆ ಹುಟ್ಟಿಕೊಂಡು ಕೆಮಿಕಲ್ ಗೊಬ್ಬರ ಔಷಧಿಗಳನ್ನು ಬಳಸಲು ಆರಂಭಿಸಿದ. ಹಾಗೆ ನಾನಾ ರೀತಿಯ ರೋಗ ರುಜಿನಗಳನ್ನು ಸಹ ಆಹ್ವಾನಿಸಿದ. ಆದರೆ ಇಲ್ಲಿ ಒಬ್ಬರು ಯಾವುದೇ ರೀತಿಯ ಕೆಮಿಕಲ್ ಗೊಬ್ಬರಗಳನ್ನು ಬಳಸದೆ ಸಹಜವಾಗಿ ನೈಸರ್ಗಿಕವಾಗಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತ ರೀತಿಯಲ್ಲಿ ಜೀವನ ನಡೆಸುತ್ತಾ ಇದ್ದಾರೆ . ಅವರು ಯಾರು ಹೇಗೆ ತಮ್ಮ ಜೀವನದಲ್ಲಿ ಮುಂದೆ ಬಂದಿದ್ದಾರೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದಾವಣಗೆರೆ ಜಿಲ್ಲೆಯ ಮಲ್ಲನಾಯಕನಹಳ್ಳಿಯ ಇವರ ಹೆಸರು ರಾಘವ. ಎಂಬಿಏ ಓದಿದ ಇವರಿಗೆ ಒಳ್ಳೆಯ ಕೆಲಸ ಸಿಕ್ಕಿತು ಆದರೆ ಆ ಕೆಲಸಕ್ಕೆ ಅಂತ ವ್ಯವಸಾಯ ಮಾಡುವುದು ನೂರು ಪಟ್ಟು ಉತ್ತಮ ಎಂದು ಭಾವಿಸಿದ ರಾಘವ ಮನೆಗೆ ಬಂದು ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದರು ಆದರೆ ಇದಕ್ಕೆ ಅವರ ಪೋಷಕರು ಒಪ್ಪಲಿಲ್ಲ. ಪಟ್ಟುಬಿಡದೆ ತಂದೆಗೆ ಇದ್ದ ಜಮೀನನ್ನು ಬಳಸಿಕೊಂಡು ನೈಸರ್ಗಿಕವಾಗಿ ವ್ಯವಸಾಯ ಮಾಡಲು ಆರಂಭಿಸಿದರು. ಗುಡ್ಡ ಬೆಟ್ಟ ಕಾಡು ಪ್ರದೇಶಗಳಲ್ಲಿ ಬೆಳೆಯುವ ಗಿಡ ಮರಗಳಿಗೆ ನೀರು-ಗೊಬ್ಬರವನ್ನ ಯಾರಾದ್ರೂ ಹಾಕುತ್ತಾರ? ಇಲ್ಲ ತಾನೇ…. ಸಹಜವಾಗಿ ನೈಸರ್ಗಿಕವಾಗಿ ಸಿಗುವಂತ ಹಣ್ಣು-ಹಂಪಲುಗಳು ಎಷ್ಟ ರುಚಿಕರ ಹಾಗೂ ಆರೋಗ್ಯಕರ ಆಗಿರುತ್ತವೆ… ಇದನ್ನೇ ಆಧಾರವಾಗಿಟ್ಟುಕೊಂಡು ರಾಘವ್ ಅವರು ತನ್ನ 21 ಎಕರೆ ಜಮೀನಿನಲ್ಲಿ ನೈಸರ್ಗಿಕವಾಗಿ ಅಲ್ಲಿ ರುಚಿಕರ ಹಣ್ಣು ಹಂಪಲುಗಳನ್ನು ಬೆಳೆಯಲು ತೀರ್ಮಾನಿಸಿದರು. ಮೊದಲು ಮಣ್ಣನ್ನು ಫಲವತ್ತತೆ ಯನ್ನಾಗಿ ಮಾಡಿ ಹತ್ತು ಹಲವಾರು ರೀತಿಯ ಬೀಜಗಳನ್ನು ತಾವೇ ಶೇಖರಿಸಿಕೊಂಡು ಹಾಕಿದರು ಮಾವು , ಪಪ್ಪಾಯ, ದಾಳಿಂಬೆ, ಸಪೋಟ, ಬಾಳೆಹಣ್ಣು, ಹೀರೆಕಾಯಿ, ಸೀತಾಫಲ, ನೇರಳೆ ಹಣ್ಣು ಹೀಗೆ ಹಲವಾರು ಹಣ್ಣಿನ ಗಿಡ ಮರದ ಬೀಜಗಳನ್ನು ತಮ್ಮ ಜಮೀನಿನಲ್ಲಿ ಹಾಕಿದರು. ಅಷ್ಟೇ ಅಲ್ಲದೇ ಯಾವುದೇ ಗೊಬ್ಬರಗಳನ್ನು ಹಾಕದೆ ಕಳೆಯನ್ನು ಸಹ ತೆಗೆಯದೆ ಅವಷ್ಟಕ್ಕೆ ಅವನ್ನು ಬೆಳೆಯಲು ಸಹಜವಾದ ನೈಸರ್ಗಿಕವಾದ ವಾತಾವರಣವನ್ನು ರಾಘವ್ ಅವರು ಸೃಷ್ಟಿಸಿದರು. ಈ ಗಿಡ-ಮರಗಳು ಈಗ ಬೆಳೆದುನಿಂತು ರುಚಿಕರವಾದ ಹಾಗೂ ಆರೋಗ್ಯಕರವಾದ ಹಣ್ಣುಹಂಪಲುಗಳನ್ನು ನೀಡುತ್ತಿವೆ. ಮಾರುಕಟ್ಟೆಯಲ್ಲಿ ಎಲ್ಲೆ ಹುಡುಕಿದರು ರಾಘವ ಅವರು ಬೆಳೆದಂತಹ ಹಣ್ಣಿನ ರುಚಿ ಬೇರೆ ಎಲ್ಲೂ ಸಿಗುವುದಿಲ್ಲ.
ಇವರು ಭತ್ತ ಬೆಳೆಯುವ ವಿಧಾನವನ್ನು ಕೇಳಿದರೆ ಆಶ್ಚರ್ಯವಾಗುವುದು ಖಚಿತ. ನಾಟಿ ಮಾಡದೇ ಕಳೆ ಕೀಳದೆ ಗೊಬ್ಬರ ಸಹ ಹಾಕದೆ ಬರಿಕೈಯಲ್ಲಿ ಬಿದ್ದಿದ್ದ ಭತ್ತ ಆರು ಅಡಿ ಬೆಳೆದು ನಿಂತಿದೆ. ಭತ್ತದ ತೆನೆಯಲ್ಲಿನ ಬತ್ತವನ್ನು ನೋಡಿ ಸುತ್ತಮುತ್ತಲಿನ ರೈತರು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ನಮಗೂ ಸ್ವಲ್ಪ ಭತ್ತದ ಬೀಜವನ್ನು ಕೊಡಿ ಎಂದು ರಾಘವ್ ಅವರ ಬಳಿ ಕೇಳುತ್ತಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಮಣ್ಣಿನಿಂದ ಕಟ್ಟಿರುವ ರಾಘವ ಅವರು ಮನೆಯಲ್ಲಿ ನೋ ಟಿವಿ ನೋ ಫ್ರಿಡ್ಜ್ ಎಂಬ ಪಾಲಿಸಿಯನ್ನು ಅನುಸರಿಸುತ್ತಿದ್ದಾರೆ. ಹೀಗೆ ಸಹಜ ಕೃಷಿಯಿಂದ ರೋಗಗಳನ್ನು ದೂರವಿರಿಸಿ ತಮ್ಮ ಕುಟುಂಬದವರ ಜೊತೆ ಹಾಯಾಗಿ ಪ್ರಕೃತಿಯ ಮಡಿಲಿನಲ್ಲಿ ಜೀವನ ನಡೆಸುತ್ತಾ ಸಹಜ ಕೃಷಿಯ ಮಾದರಿಯಾಗಿ ನಿಂತಿದ್ದಾರೆ ರಾಘವ್ ಅವರು.