ಆರೋಗ್ಯಕ್ಕೆ ಒಣ ಹಣ್ಣುಗಳು ಹೆಚ್ಚು ಸಹಕಾರಿ ಅವುಗಳಲ್ಲಿಈ ಖರ್ಜುರ ಕೂಡ ಒಂದಾಗಿದೆ, ಚಿಕನ್ ಮಟನ್ ಗಿಂತ ಎರಡು ಪಟ್ಟು ಪೋಷಕಾಂಶಗಳನ್ನು ಒದಗಿಸುವಂತ ಗುಣಗಳನ್ನು ಈ ಡ್ರೈ ಪುಟ್ಸ್ ಹೊಂದಿವೆ ಹಾಗಾಗಿ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಜಾಸ್ತಿ, ಆದ್ರೂ ಕೂಡ ಇದರ ಸೇವನೆಯನ್ನು ಬಹಳಷ್ಟು ಜನ ಮಾಡುತ್ತಲೇ ಇದ್ದಾರೆ. ಪ್ರತಿದಿನ ೪ ರಿಂದ ೫ ಕರ್ಜುರವನ್ನು ಸೇವನೆ ಮಾಡುವ ಅಭ್ಯಾಸ ನಿಮಗಿದ್ರೆ ಈ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಖರ್ಜುರದಲ್ಲಿ ಇರುವಂತ ಆರೋಗ್ಯಕಾರಿ ಗುಣಗಳೇನು ಅನ್ನೋದನ್ನ ತಿಳಿಯುವುದಾದರೆ ಮೊದಲನೆಯದಾಗಿ ಇದರಲ್ಲಿ ಪ್ರೊಟೀನ್ ಮೆಗ್ನಿಶಿಯಂ ಹೇರಳವಾಗಿದೆ, ಆದ್ದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸವನ್ನು ಮಾಡುತ್ತದೆ. ಇದರ ಸೇವನೆಯಿಂದ ದೇಹದ ಮೂಳೆಗಳು ಗಟ್ಟಿಯಾಗಿ ಬೆಳೆಯುತ್ತದೆ ಹಾಗೂ ಸ್ನಾಯುಗಳಿಗೆ ಬಲ ಪಡೆಯಬಹುದು. ಇನ್ನು ದೇಹದಲ್ಲಿ ರಕ್ತಹೀನತೆ ಸಮಸ್ಯೆ ಇದ್ರೆ, ಖರ್ಜುರ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಹೃದಯದ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ದೇಹದ ನಿಶ್ಯಕ್ತಿ ನಿವಾರಣೆ ಮಾಡುವುದು.
ದೈಹಿಕವಾಗಿ ಹಾಗೂ ಮನಸಿಕ ಒತ್ತಡಗಳು ನಿವಾರಣೆ ಮಾಡುವ ಖರ್ಜುರ ಮುಖದ ಕಾಂತಿಯನ್ನು ಹೆಚ್ಚಿಸಲು ಕೂಡ ಉಪಯೋಗಕಾರಿಯಾಗಿದೆ, ಇನ್ನು ಮೊಣಕಾಲು ಕೈಗಳ ಜಾಯಿಂಟ್ ಪೈನ್ ಸಮಸ್ಯೆಯನ್ನು ಕೂಡ ನಿವಾರಿಸಲು ಈ ಖರ್ಜುರ ಸಹಕಾರಿ. ಪ್ರತಿದಿನ ಸೇವನೆ ಮಾಡುವಂತ ಆಹಾರ ಬೇಗನೆ ಜೀರ್ಣವಾಗಲು ಪ್ರಯೋಜನಕಾರಿಯಾಗಿದೆ, ಹೀಗೆ ಹತ್ತಾರು ಉಪಯೋಗಗಳನ್ನು ಹೊಂದಿರುವಂತ ಈ ಒಣ ಹಣ್ಣು ದೇಹಕ್ಕೆ ಹೆಚ್ಚು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ.