ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟರು ಇಲ್ಲಿಯವರೆಗೆ ಜನರನ್ನು ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್ ಅವರ ಪತ್ನಿ ಹಾಗೂ ಮಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ದರ್ಶನ್ ಅವರ ಹೆಂಡತಿ ಹಾಗೂ ಅವರ ಮಗನ ಬಗ್ಗೆ ಕೆಲವು ವಿಶೇಷ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕನ್ನಡ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ದಿ ಬಾಸ್ ಎಂದೆ ಖ್ಯಾತಿ ಪಡೆದಿದ್ದಾರೆ. ಅವರು ವಿಜಯಲಕ್ಷ್ಮಿ ಎಂಬುವವರನ್ನು ಮೆ 19, 2003ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಒಬ್ಬ ಮಗನಿದ್ದಾನೆ ಅವನ ಹೆಸರು ವಿನೀಶ್. ದರ್ಶನ್ ಅವರ ಕುಟುಂಬದವರೊಂದಿಗಿನ ಫೋಟೋಗಳನ್ನು ಹಾಗೂ ವಿಜಯಲಕ್ಷ್ಮಿ ಅವರು ತಮ್ಮ ಮಗನೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ದರ್ಶನ್ ಅವರ ಮಗ ವಿನೀಶ್ ಅಕ್ಟೋಬರ್ 30, 2008 ರಲ್ಲಿ ಜನಿಸಿದ್ದಾನೆ. ಅವನು ಕರಾಟೆ ಕಿಂಗ್ ಕರಾಟೆ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾನೆ. ವಿನೀಶ್ ದರ್ಶನ್ ಅವರ ಯಜಮಾನ, ಐರಾವತ ಸಿನಿಮಾಗಳಲ್ಲಿ ನಟಿಸಿದ್ದಾನೆ.
ದರ್ಶನ್ ಅವರು ಒಂದು ಬರ್ತಡೆ ಪಾರ್ಟಿಯಲ್ಲಿ ಪರಿಚಯವಾದ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾದರು. ವಿಜಯಲಕ್ಷ್ಮಿ ಅವರು ತಮ್ಮದೆ ಆದ ಒಂದು ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಮೈ ಫ್ರೆಶ್ ಬಾಸ್ಕೆಟ್ ಎಂಬ ಹೊಸ ಆನ್ಲೈನ್ ಆಪ್ ಒಂದನ್ನು ಪ್ರಾರಂಭಿಸಿ ರೈತರಿಗೆ ನೆರವಾಗಿದ್ದಾರೆ. ಈ ಆಪ್ ಮೂಲಕ ರೈತರು ತಾವು ಬೆಳೆದ ಬೆಳೆಯನ್ನು ಗ್ರಾಹಕರಿಗೆ ನೇರವಾಗಿ ಕೊಡುತ್ತಿದ್ದಾರೆ ಹಾಗೆಯೇ ಗ್ರಾಹಕರು ನೇರವಾಗಿ ರೈತರು ಬೆಳೆದ ತರಕಾರಿ, ಹಣ್ಣುಗಳು ಖರೀದಿಸುತ್ತಿದ್ದಾರೆ. ಹೀಗೆ ರೈತರ ನೆರವಿಗೆ ಧಾವಿಸಿದ ವಿಜಯಲಕ್ಷ್ಮಿ ಅವರ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ ಅವರಿಗೆ ಉದಯೋನ್ಮುಖ ಉದ್ಯಮಿ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲಾಸಿ ಪಾಳ್ಯ, ಧರ್ಮ, ದಾಸ್, ದತ್ತ, ಕುರುಕ್ಷೇತ್ರ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಲಾಕ್ ಡೌನ್ ಸಮಯದಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಕೊರೋನ ಸಂದಿಗ್ಧ ಸ್ಥಿತಿಯಲ್ಲಿ ಅನೇಕ ರೋಗಿಗಳಿಗೆ ಸಹಾಯ ಮಾಡಿದ್ದಾರೆ ಅಲ್ಲದೆ ಕೊರೋನ ಫಂಡ್ ಗೆ ಧನ ಸಹಾಯ ಮಾಡಿದ್ದಾರೆ. ದರ್ಶನ್ ಅವರು ಲಾಕ್ ಡೌನ್ ಸಮಯದಲ್ಲಿ ಮೈಸೂರಿನಲ್ಲಿರುವ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ವಿಜಯಲಕ್ಷ್ಮಿ ಅವರು ತಮ್ಮ ಮಗನೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಅವರು ತಮ್ಮ ಕುಟುಂಬದವರೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.