ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬ ಎಲ್ಲರೂ ಕೂಡ ಇದನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ ಈ ದಿನದಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ ಸಂಕ್ರಾಂತಿ ಹಬ್ಬವನ್ನು ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆದು ಆಚರಿಸಲಾಗುತ್ತದೆ. ನಮ್ಮದೇ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ತಮಿಳುನಾಡಿನಲ್ಲಿ ಪೊಂಗಲ್ ಉತ್ತರಭಾರತದಲ್ಲಿ ಲೋರಿ ಎಂದು ಹೇಗೆ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆದು ಈ ಹಬ್ಬವನ್ನು ಆಚರಿಸಲಾಗುತ್ತದೆ ಈ ವರ್ಷ ಕರೋನಾದ ನಡುವೆಯೂ ಜನರು ಸಡಗರದಿಂದ ಹಬ್ಬವನ್ನು ಆಚರಿಸಿದ್ದಾರೆ. ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ ರೈತರು ಬೆಳೆದ ಬೆಳೆಗಳು ಬೆಳೆದು ನಿಂತಿರುತ್ತವೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಚಿತ್ರರಂಗದ ತಾರೆಯರು ತಮ್ಮ ಮನೆಗಳಲ್ಲಿ ಸಡಗರದಿಂದ ಹಬ್ಬವನ್ನು ಆಚರಿಸಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯಲ್ಲಿ ಈ ವರ್ಷ ಯಾವ ರೀತಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ ಎಂಬುದರ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಪ್ರತಿವರ್ಷದಂತೆ ಈ ವರ್ಷವೂ ದರ್ಶನ್ ಅವರು ತಮ್ಮ ತೂಗುದೀಪ್ ಫಾರಂ ಹೌಸ್ ನಲ್ಲಿ ತಮ್ಮ ಸಾಕುಪ್ರಾಣಿಗಳನ್ನು ಸುಂದರವಾಗಿ ಸಿಂಗರಿಸುವ ಮೂಲಕ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದಾರೆ. ತಮ್ಮ ಫಾರ್ಮಹೌಸ್ ನಲ್ಲಿರುವ ಪ್ರಾಣಿಗಳಿಗೆಲ್ಲ ಸ್ನಾನಮಾಡಿಸಿ ಅವುಗಳಿಗೆ ಸಿಂಗಾರ ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ದರ್ಶನ್ ಅವರ ಅಭಿಮಾನಿಗಳಿಗೆ ಖುಷಿಯನ್ನು ಉಂಟುಮಾಡಿದೆ.

ದರ್ಶನ್ ಅವರ ಪತ್ನಿಯೂ ಕೂಡಾ ಸಾಂಪ್ರದಾಯಿಕವಾಗಿ ಸೀರೆಯುಟ್ಟು ಹಬ್ಬವನ್ನು ಆಚರಿಸಿದ್ದಾರೆ ಜೊತೆಗೆ ದರ್ಶನ್ ಅವರ ಮಗ ತಂದೆಯ ಜೊತೆಗೆ ಸೇರಿಕೊಂಡು ಸಾಕುಪ್ರಾಣಿಗಳನ್ನು ಸಿಂಗರಿಸಿ ಅವುಗಳ ಜೊತೆ ಫೋಟೋ ತೆಗೆಸಿಕೊಂಡು ಹಬ್ಬವನ್ನು ಸಂಭ್ರಮಿಸಿದ್ದಾರೆ. ದರ್ಶನ್ ಅವರು ಎತ್ತಿನಗಾಡಿ ಓಡಿಸುವ ವಿಡಿಯೋ ಅವರ ಅಭಿಮಾನಿಗಳಿಗೆ ಖುಷಿಯನ್ನು ಉಂಟುಮಾಡಿದೆ. ಒಟ್ಟಾರೆಯಾಗಿ ಈ ವರ್ಷವೂ ಕೂಡ ಎಲ್ಲರೂ ಸಂಭ್ರಮ-ಸಡಗರದಿಂದ ಹಬ್ಬವನ್ನು ಆಚರಿಸಿದ್ದಾರೆ ಈ ಸಂಕ್ರಾಂತಿ ಎಲ್ಲರ ಬಾಳಿನಲ್ಲಿ ಸಮೃದ್ಧಿಯನ್ನು ಉಂಟುಮಾಡಲಿ ಕರೋನಾದ ಕರಿನೆರಳು ಕಡಿಮೆಯಾಗಿ ಎಲ್ಲರಿಗೂ ನೆಮ್ಮದಿಯ ಜೀವನ ಸಿಗಲಿ ಎಂದು ನಾವೆಲ್ಲರೂ ಆ ದೇವರಲ್ಲಿ ಕೇಳಿಕೊಳ್ಳೋಣ. Video Credit For Rajini Express

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!