ಕನ್ನಡ ಚಿತ್ರರಂಗದ ಮನೆ ಮಗ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ ಸಾವು ಇಂದಿಗೂ ನಂಬಲು ಅಸಾದ್ಯ ಸಾವಿರಾರು ಅಭಿಮಾನಿ ಬಳಗ ಹೊಂದಿದ್ದ ಅಪ್ಪು ಅವರು ನಮ್ಮೆಲ್ಲರನ್ನು ತೊರೆದು ಅಕ್ಟೋಬರ್ 29 2021 ಲಘು ಹೃದಾಘಾತದಿಂದ ನಮ್ಮೆಲ್ಲರನ್ನು ಆಗಲಿ ಬಾರದ ಲೋಕಕ್ಕೆ ಹೊರಟಬಿಟ್ಟರು.. ಆದರೂ ನಮ್ಮೆಲ್ಲರ ಉಸಿರಲ್ಲಿ ಅಪ್ಪು ಇಂದಿಗೂ ಚಿರಾಯು ಆಗಿ ನೆಲೆಸಿದ್ದಾರೆ. 1975 ಮಾರ್ಚ್ 17ರಂದು ಜನಿಸಿದ ಪುನೀತ್ ಅವರು 1976 ರಲ್ಲಿ ಪ್ರೇಮದ ಕಾಣಿಕೆ ಸಿನಿಮಾ ಮೂಲಕ ನಟನೆ ಮಾಡಿದರು. ಇವರು ಬಾಲ ಕಲಾವಿದನಾಗಿ, ನಟನಾಗಿ, ನಿರೂಪಕರಾಗಿ,ಗಾಯಕನಾಗಿ, ರಾಯಬರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಉಳಿತಾಯ ಬಹುತೇಕ ಸಮಾಜಸೇವೆಯ ಸಲ್ಲಿಸಿದ್ದಾರೆ.

ಬನ್ನಿ ಅವರ ಕೊನೆಯ ಚಿತ್ರ ಜೇಮ್ಸ್ ಮೂವೀ ಕುರಿತು ನೋಡೋಣ ಬನ್ನಿ.. ಪುನೀತ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಅವರ ಹುಟ್ಟುಹಬ್ಬದ ದಿನ ರಾಜ್ಯಾದಂತ ಬಹುತೇಕ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದೆ.. ಮಾರ್ಚ್ 17 ಎಲ್ಲ ಚಿತ್ರ ಮಂದಿರ ಬಾಕ್ಸ್ ಆಫೀಸ್ ಅಲ್ಲಿ ಧೂಳೆಬ್ಬಿಸಿದೆ. ಜೇಮ್ಸ್​ ಹೆಸರಿನ ​ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಓರ್ವ ಪವರ್​ಫುಲ್ ಸೋಲ್ಜರ್​ ​ ​ಪಾತ್ರದಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ., ಓನ್ಲಿ ಒನ್​ ಮ್ಯಾನ್​ ಶೋ. ಎದುರಾಳಿಯ ಎದೆಯಲ್ಲಿ ಭಯ ಹುಟ್ಟಿಸುತ್ತಾನೆ​. ವೈರಿಗಳು ಎಷ್ಟೇ ಬರಲಿ, ಒಂದೇ ಗನ್​ನಿಂದ ಎಲ್ಲರನ್ನೂ ಸುಟ್ಟು ನಾಶ ಮಾಡುತ್ತಾನೆ. ಅಷ್ಟು ಪವರ್​ಫುಲ್​ ಇರುವ ಈ ಜೇಮ್ಸ್​ಗೆ ಗೆಳೆಯರೇ ಕುಟುಂಬ.

ಕಾರ್​ ಚೇಸಿಂಗ್​ ದೃಶ್ಯಗಳು ಪ್ರೇಕ್ಷಕನ ಮೈಯಲ್ಲಿ ಪವರ್​ ಹರಿಸುತ್ತದೆ. ಇಡೀ ಚಿತ್ರವನ್ನು ಪುನೀತ್​ ಆವರಿಸಿಕೊಂಡಿದ್ದಾರೆ. ವೈರಿಗಳನ್ನು ರಕ್ಷಣೆ ಮಾಡಿ, ಆ ಬಳಿಕ ಅವರಿಗೆ ದುಸ್ವಪ್ನವಾಗಿ ಕಾಡುವ ಮೇಜರ್​ ಸಂತೋಷ್​ ಆಗಿ ಪುನೀತ್​ ಗಮನ ಸೆಳೆಯುತ್ತಾರೆ. ಫೈಟಿಂಗ್​ ದೃಶ್ಯಗಳಲ್ಲಿ ಪುನೀತ್ ಹಾಕಿದ ಶ್ರಮ ಎದ್ದು ಕಾಣುತ್ತದೆ​. ಪರದೆಯಮೇಲೆ ಪುನೀತ್​ ಅವರನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೆ, ಅಪ್ಪು​ ಇಲ್ಲ ಎಂಬ ನೋವು ಪ್ರತಿ ದೃಶ್ಯದಲ್ಲೂ ಕಾಡದೆ ಇರದು.ಈ ಸಿನಿಮಾದಲ್ಲಿ ನಿಶಾ ಗಾಯಕ್​ವಾಡ್​ಗೂ​ (ಪ್ರಿಯಾ ಆನಂದ್​) ಜೇಮ್ಸ್​​ ನಡುವೆ ಒಂದು ಲವ್​ ಟ್ರ್ಯಾಕ್​ ಇದೆ

ಹಿನ್ನೆಲೆ ಸಂಗೀತದ ಮೂಲಕ ಸಂಗೀತ ನಿರ್ದೇಶಕ ಚರಣ್​ ರಾಜ್ ಚಿತ್ರದ ತೂಕ ಹೆಚ್ಚಿಸಿದ್ದಾರೆ​. ಸ್ವಾಮಿ ಗೌಡ ಅವರ ಛಾಯಾಗ್ರಹಣ ಮೂಲಕ ಚಿತ್ರದ ಅಂದವನ್ನು ಹೆಚ್ಚಿಸಿದೆ ಕಾರ್​ ಚೇಸಿಂಗ್ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.ಜೇಮ್ಸ್ ಮೂವೀ ವಿಶ್ವದಲ್ಲೆಡೆ ಬಿಡುಗಡೆ ಆಗಿದ್ದು ಪುನೀತ್ ಅಭಿಮಾನಿಗಳು ವಾರದ ಮುಂಚೆ ಟಿಕೆಟ್ ಬುಕ್ ಮಾಡಿ ಚಂದನವನದಲ್ಲಿ ಜೇಮ್ಸ್ ಚಿತ್ರವು ಹೊಸ ದಾಖಲೆ ಬರೆದಿದೆ. ಮೊದಲ ದಿನವೇ 30-32 ಕಲೆಕ್ಷನ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಯೆಬ್ಬಿಸಿದೆ ಕರ್ನಾಟಕದಲ್ಲಿ 400 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ತೆಲುಗು ತಮಿಳಿನಲ್ಲೂ ಕೂಡ ಬಿಡುಗಡೆಯಾಗಿದ್ದು. 270 ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡಿದೆ.

ಪರಭಾಷೆಯ ಮೊದಲ 4 ಶೋ ಪ್ರದರ್ಶಗೊಳ್ಳುತ್ತಿದೆ. ಇನ್ನೂ ವಿದೇಶದಲ್ಲೂ ಜೇಮ್ಸ್ ಮೂವೀ ಪ್ರದಶನವಾಗುತ್ತಿದೆ.. ಒಟ್ಟಾರೆ ಕನ್ನಡ ಚಿತ್ರ ಬಾಕ್ಸ್ ಆಫೀಸಲ್ಲಿ ಒಂದು ಮೈಲಿಗಲ್ಲು ಬರೆಯುವುದರಲ್ಲಿ ಮಾತಿಲ್ಲ. ದಯವಿಟ್ಟು ಎಲ್ಲರಲ್ಲೂ ಒಂದು ವಿನಂತಿ ಆದಷ್ಟು ಕನ್ನಡ ಚಿತ್ರ ಉಳಿಸಿ ಬೆಳಸಿ.. ಕನ್ನಡ ಚಿತ್ರ ಮಂದಿರ ಅಲ್ಲೇ ಸಿನಿಮಾ ನೋಡಿ ಇನ್ನು ನಮ್ಮೆಲ್ಲರ ಅಚ್ಚು ಮೆಚ್ಚಿನ ಕನ್ನಡದ ಕರ್ನಾಟಕದ ಮನೆಮಗನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾವಿರಾರು ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಅವರು ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರವಾದ ಜೇಮ್ಸ್ ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ ಅದೇನೆಂದು ನೋಡೋಣ ಬನ್ನಿ.

ಇನ್ನೊಮ್ಮೆ ಕರುನಾಡಿನ ಮನೆ ಮಗನಾಗಿ ಹುಟ್ಟಿ ಬನ್ನಿ ನೀವು ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಿರಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿ, ಜೇಮ್ಸ್ ಚಿತ್ರಕ್ಕೆ ಅಭಿನಂದಿಸಿದ್ದಾರೆ. ಹಾಗೆ ಎಲ್ಲರೂ ಚಿತ್ರಮಂದಿರದಲ್ಲೆ ಚಿತ್ರ ನೋಡಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *