ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಮಹಾಸ್ ಅಭಿಮಾನಿಗಳನ್ನು ಹೊಂದಿರುವ ಟಾಪ್ ನಟ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಡಿ ಬಾಸ್ ಅವರಿಗೆ ಸಿನಿಮಾ ಬಿಟ್ಟರೆ ಪ್ರಾಣಿಗಳನ್ನು ಸಾಕುವುದು ಹಾಗೂ ದುಬಾರಿ ಕಾರುಗಳನ್ನು ಖರೀದಿಸುವ ಆಸಕ್ತಿ ಕೂಡ ಹೆಚ್ಚಿದೆ ಎಂಬುದು ಈಗಾಗಲೇ ಅಭಿಮಾನಿಗಳಿಗೆ ತಿಳಿದಿರುವ ವಿಚಾರವಾಗಿದೆ. ಇನ್ನು ಇತ್ತೀಚಿಗಷ್ಟೇ ನಡೆದಿರುವ ಆಯುಧ ಪೂಜೆಯ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯಲ್ಲಿದ್ದ ಎಲ್ಲಾ ಕಾರುಗಳ ಪೂಜೆಯನ್ನು ಮಾಡಲಾಗಿದೆ.

ಈ ಸಂದರ್ಭದಲ್ಲಿ ಡಿ ಬಾಸ್ ಬಳಿ ಇರುವ ದುಬಾರಿ ಕಾರುಗಳು ಯಾವ್ಯಾವು ಎಂಬುದು ಕೂಡ ತಿಳಿದು ಬಂದಿದ್ದು ಅದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಇದರಲ್ಲಿ ಮೊದಲನೆಯದಾಗಿ ಇತ್ತೀಚಿಗಷ್ಟೇ ಖರೀದಿಸಿರುವ 1.20 ಕೋಟಿ ಮೌಲ್ಯದ ರೇಂಜ್ ರೋವರ್ ಡಿಫೆಂಡರ್. ಲ್ಯಾಂಬೋರ್ಗಿನಿ ಅವೆಂಟಡರ್ ಡಿ ಬಾಸ್ ಬಳಿ ಇರುವ ಅತ್ಯಂತ ದುಬಾರಿ ಮೌಲ್ಯದ ಕಾರು ಇದರ ಬೆಲೆ ಬರೋಬ್ಬರಿ ಸರಿಸುಮಾರು ಆರು ಕೋಟಿ. 80 ಲಕ್ಷ ರೂಪಾಯಿ ಮೌಲ್ಯದ ಟೊಯೋಟಾ ವೇಲ್ ಫೈಯರ್ ಅನ್ನು ಕೂಡ ಡಿ ಬಾಸ್ ಹೊಂದಿದ್ದಾರೆ.

88 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ ಜಾಗ್ವಾರ್ ಎಕ್ಸ್ ಕೆ. ಇದನ್ನು ಡಿ ಬಾಸ್ ರವರ ಬರ್ತಡೆಗೆ ಒಂದು ಸಮಯದಲ್ಲಿ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ ಅವರು ಗಿಫ್ಟ್ ಆಗಿ ನೀಡಿದ್ದರು. ಹಳದಿ ಬಣ್ಣದ 75 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಫೋರ್ಡ್ ಮಸ್ಟಾಂಗ್ ಇವರ ಬಳಿ ಇದೆ. 3 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕೂಡ ಡಿ ಬಾಸ್ ಬಳಿ ಇದೆ. ನಿರ್ಮಾಪಕ ಸಂದೇಶ ನಾಗರಾಜ್ ಅವರು ಡಿ ಬಾಸ್ ರವರಿಗೆ ನೀಡಿರುವ ಉಡುಗೊರೆ ಆಗಿರುವ 1.5 ಕೋಟಿ ಮೌಲ್ಯದ ಪೋರ್ಶೇ ಕವಾನ್.

2.75 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್. 38 ಲಕ್ಷದ ಮಿನಿ ಕೂಪರ್, ಇದೇ ಮೌಲ್ಯದ ಟೊಯೋಟಾ ಫಾರ್ಚುನರ್, 42 ಲಕ್ಷ ಮೌಲ್ಯದ ಫೋರ್ಡ್ ಯೆಂಡೀವರ್, 53 ಲಕ್ಷ ರೂಪಾಯಿ ಮೌಲ್ಯದ ಜೀಪ್ ವ್ರಾಂಗ್ಲರ್, 61 ಲಕ್ಷ ರೂಪಾಯಿ ಮೌಲ್ಯದ ಬಿ ಎಂ ಡಬ್ಲ್ಯೂ 520ಡಿ, 85 ಲಕ್ಷದ ಆಡಿ q7 ಇವುಗಳೇ ಡಿ ಬಾಸ್ ಬಳಿ ಇರುವ ದುಬಾರಿ ಮೌಲ್ಯದ ಕಾರುಗಳು. ಇಷ್ಟೊಂದು ದುಬಾರಿ ಮೌಲ್ಯದ ಕಾರುಗಳನ್ನು ಹೊಂದಿರುವ ಕನ್ನಡ ಚಿತ್ರರಂಗದ ಏಕೈಕ ನಟ ಡಿ ಬಾಸ್ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *