ಸಿನಿಮಾ ಸ್ಟಾರ್ ನಟರು ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು ಒಂದು ಕಾಲದಲ್ಲಿ ಕಷ್ಟ ಪಟ್ಟುರುತ್ತಾರೆ ಅವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ತೂಗುದೀಪ ಶ್ರೀನಿವಾಸ್ ಅವರು ದರ್ಶನ್ ಅವರ ಜೊತೆ ಹೇಗಿದ್ದರು ಹಾಗೂ ಅವರ ಮನೆಯ ಪರಿಸ್ಥಿತಿ ಹೇಗಿತ್ತು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ತಂದೆ ಯಾವಾಗಲೂ ಹಾಗೆ ಅವರು ಎಷ್ಟೇ ಬ್ಯುಸಿ ಇದ್ದರು, ಎಲ್ಲೆ ಇದ್ದರು ಮಕ್ಕಳ ಬಗ್ಗೆ ಸದಾ ಯೋಚನೆ ಮಾಡುತ್ತಾರೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಮಕ್ಕಳ ಜೊತೆ ಬೆರೆತು ಅವರ ಸೇವೆ ಮಾಡುತ್ತಾರೆ. ತೂಗುದೀಪ ಶ್ರೀನಿವಾಸ ಅವರು ತಮ್ಮ ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು. ಶ್ರೀನಿವಾಸ ಅವರು ನೆಲದ ಮೇಲೆ ಕುಳಿತು ದರ್ಶನ್ ಅವರ ಕಾಲಿಗೆ ಶೂ ತೊಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಲ್ಲದೇ ಈ ಫೋಟೋ ನೋಡಿದರೆ ತಮ್ಮ ತಂದೆಯ ನೆನಪು ಆಗುತ್ತದೆ. ನಾವು ಚಿಕ್ಕವರಿರುವಾಗ ನಮಗೆ ತಂದೆಯ ಬೆಲೆ ಗೊತ್ತಾಗುವುದಿಲ್ಲ ತಂದೆಯಾದಾಗ ಅಪ್ಪನ ಪ್ರಾಮುಖ್ಯತೆ, ಪ್ರೀತಿ ತಿಳಿಯುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ನಾವು ತಂದೆಯಾದಾಗ ನಮ್ಮ ಮಗುವಿನ ಮೇಲೆ ಹೃದಯದಲ್ಲಿ ಹುಟ್ಟುವ ಪ್ರೀತಿಯ ಅಲೆಯನ್ನು ಕಂಡು ನಮ್ಮ ತಂದೆಯು ಇಷ್ಟೇ ಪ್ರೀತಿ ಮಾಡುತ್ತಿದ್ದಾರೆಂದು ಅನಿಸುತ್ತದೆ.
ತೂಗುದೀಪ ಶ್ರೀನಿವಾಸ್ ಅವರು ಪ್ರಾಯದ ಸಮಯದಲ್ಲಿ ಬಹಳ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಕೊನೆಯ ದಿನಗಳಲ್ಲಿ ಅನಾರೋಗ್ಯ ಕಾರಣದಿಂದ ಸಿನಿಮಾದಲ್ಲಿ ನಟನೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆಯಲ್ಲಿ ಒಂದು ಲೀಟರ್ ಹಾಲು ಕೊಂಡುಕೊಳ್ಳಲು ಕಷ್ಟ ಆಯಿತು. ತಂದೆಯ ಮಾತಿನಂತೆ ನೀನಾಸಂನಲ್ಲಿ ನಟನೆ ಕಲಿಯಲು ದರ್ಶನ್ ಅವರು ಹೋದರು. ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೇಗೊ ಜೀವನ ಕಳೆಯುತ್ತಿದ್ದರು. ಈ ಸಮಯದಲ್ಲಿ ದರ್ಶನ್ ಅವರ ತಂದೆ ಮರಣ ಹೊಂದಿದರು. ಅವರ ಮನೆಯಲ್ಲಿ ಎಷ್ಟರ ಮಟ್ಟಿಗೆ ಬಡತನವಿತ್ತೆಂದರೆ ನೀನಾಸಂನಲ್ಲಿ ಕಲಿಯುತ್ತಿರುವ ದರ್ಶನ್ ಅವರಿಗೆ ತಂದೆಯ ಅಂತ್ಯಸಂಸ್ಕಾರಕ್ಕೆ ಮೈಸೂರಿಗೆ ಬರಲು ಅವರ ಬಳಿ ಹಣವಿರಲಿಲ್ಲ. ಈ ಕಷ್ಟ ಯಾರಿಗೂ ಬರಬಾರದು ದರ್ಶನ್ ಅವರು 500 ರೂಪಾಯಿ ಸಾಲ ಪಡೆದು ಮೈಸೂರಿಗೆ ಬಂದು ತಂದೆಯ ಅಂತಿಮ ದರ್ಶನ ಮಾಡುತ್ತಾರೆ.
ನಂತರ ದರ್ಶನ್ ಅವರ ಪರಿಶ್ರಮ, ಕಲೆಯಿಂದ ಕನ್ನಡ ಚಿತ್ರರಂಗದಲ್ಲಿ ಅವಕಾಶ ದೊರೆತು ಬಹು ಬೇಗನೆ ಕನ್ನಡ ಚಿತ್ರರಂಗದ ಟಾಪ್ ನಟನಾಗಿ ದರ್ಶನ್ ಪ್ರಸಿದ್ಧರಾದರು. ಅಂದು ಊಟಕ್ಕೂ ಕಷ್ಟವಿತ್ತು ಇಂದು ಕೋಟಿ, ಕೋಟಿ ಹಣವನ್ನು ಸಂಪಾದಿಸುತ್ತಾರೆ. ಮಗನ ಯಶಸ್ಸನ್ನು ನೋಡಿ ಕೊಂಡಾಡಲು ಅವರ ತಂದೆ ಇಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ತೂಗುದೀಪ ಶ್ರೀನಿವಾಸ್ ಅವರು ಇದ್ದಿದ್ದರೆ ದರ್ಶನ್ ಅವರ ಏಳ್ಗೆಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದರು. ಜೀವನವೇ ಹಾಗೆ ಒಂದನ್ನು ಕೊಟ್ಟು ಇನ್ನೊಂದನ್ನು ನಮ್ಮಿಂದ ಕಿತ್ತುಕೊಳ್ಳುತ್ತದೆ ನಮ್ಮ ಜೀವನದಲ್ಲಿ ವಿಧಿ ಆಡಿಸಿದಂತೆ ನಾವು ಆಡಲೇಬೇಕು. ಎಲ್ಲರೂ ತಂದೆಯಿಂದ ಕಲಿಯುವುದು ಬಹಳ ಇರುತ್ತದೆ. ತಂದೆ ಒಬ್ಬ ಮಾರ್ಗದರ್ಶಕ, ರಕ್ಷಕ, ಸ್ನೇಹಿತ ಹೀಗೆ ಎಲ್ಲ ಪಾತ್ರವನ್ನು ಮಕ್ಕಳ ಜೀವನದಲ್ಲಿ ನಿರ್ವಹಿಸುತ್ತಾನೆ. ಇಂತಹ ಎಲ್ಲ ಅಪ್ಪಂದಿರಿಗೂ ಒಂದು ಸಲಾಮ್.