ಧರ್ಮಸ್ಥಳ ದೇಗುಲವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಇದನ್ನು ಶ್ರೀ ಮಂಜುನಾಥನ ಆವಾಸ ಸ್ಥಾನ ಎಂದು ನಂಬಲಾಗಿದೆ ಈ ಪವಿತ್ರ ದೇಗುಲವು ನೇತ್ರಾವತಿ ನದಿ ದಂಡೆಯಲ್ಲಿದೆ ಇದು ಶಿವನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದು ಭಕ್ತರು ನಂಬಿದ್ದಾರೆ ಅಷ್ಟು ಮಾತ್ರವಲ್ಲ ಶಿವ ಭಕ್ತರ ನೆಚ್ಚಿನ ಸ್ಥಳವೂ ಇದಾಗಿದೆ ಇಲ್ಲಿಗೆ ಭೇಟಿ ನೀಡದ ಜನರೇ ಇಲ್ಲ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆ ಧರ್ಮಸ್ಥಳದ ಮಂಜುನಾಥನನ್ನು ನೋಡುವ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ
ಧರ್ಮಸ್ಥಳ ಮಂಜುನಾಥ ದೇವಾಲಯದ ಮತ್ತೊಂದು ಅದ್ಭುತ ಸಂಗತಿಯೆಂದರೆ ಜೈನ ಮತ್ತು ಹಿಂದೂ ಧರ್ಮದ ಸಂಯೋಜನೆ ಧರ್ಮಸ್ಥಳದ ಆರಾಧ್ಯ ದೈವವಾದ ಮಂಜುನಾಥನ ಪಕ್ಕದಲ್ಲೇ ಜೈನ ತೀರ್ಥಂಕರನನ್ನು ಪೂಜಿಸಲಾಗುತ್ತದೆ ಇದು ಭಕ್ತಿ ಮತ್ತು ಧಾರ್ಮಿಕ ಸಂಯೋಜನೆಯ ಸಾಕ್ಷಿರೂಪವೂ ಆಗಿದೆ ನಾವು ಈ ಲೇಖನದ ಮೂಲಕ ಧರ್ಮಸ್ಥಳದ ಕೆಲವು ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.
ಧರ್ಮ ಇರುವ ಸ್ಥಳವೇ ಧರ್ಮಸ್ಥಳ ಕರ್ನಾಟಕದಲ್ಲಿ ಅನೇಕ ಶಿವ ಭಕ್ತ ರೂ ಬಂದು ಹೋಗುವ ತಾಣ ವಾಗಿದೆ ಶಿವನನ್ನು ಆರಾಧಿಸುವ ಸ್ಥಳ ಧರ್ಮಸ್ಥಳವಾಗಿದೆ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಆರಾಧಿಸಿದರೆ ಜೀವನದಲ್ಲಿ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ ಶಿವನನ್ನು ಆರಾಧಿಸುವ ಸ್ಥಳ ಹಾಗೂ ಅತ್ಯಂತ ಪುರಾತನ ದೇವಾಲಯವಾಗಿದೆ ಶಿವನನ್ನು ಆರಾಧಿಸುವ ಸ್ಥಳದಲ್ಲಿ ಸಾಕ್ಷಾತ್ ಪರಮ ಶಿವನೇ ನೆಲೆಸಿರುತ್ತಾನೆ ತೊಂದರೆಗಳೆಲ್ಲವು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ
ರಾಜ್ಯದ ಅತ್ಯಂತ ಪುರಾತನ ದೆಗುಲವಾಗಿದೆ ಜೈನ ಭಂಟ ಸಮುದಾಯವು ಆರಂಭಿಸಿದ್ದು ಪ್ರಸ್ತುತ ಹೆಗ್ಗಡೆ ಅವರು ದೇಗುಲದ ನಿರ್ವಹಣೆ ಮಾಡುತ್ತಿದ್ದಾರೆ ಧರ್ಮಸ್ಥಳ ದೇವಸ್ಥಾನವನ್ನು ಎಂಟು ನೂರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಧರ್ಮಸ್ಥಳದ ನಿಗೂಢ ಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿರುವುದಿಲ್ಲ ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ .
ಧರ್ಮಸ್ಥಳ ವನ್ನು ಹಿಂದೆ ಕುಡುಮ ಎಂದು ಕರೆಯಲಾಗುತ್ತದೆ ಸ್ಥಳೀಯ ಐತಿಯಹದ ಪ್ರಕಾರ ನೆಲ್ಲಾಡಿ ಬೀಡು ಎಂಬಲ್ಲಿ ಬಿರಿಮಣ್ಣ ಪರಗಡೆ ಹಾಗೂ ಅಮ್ಮದೇವಿ ಬಲ್ಲಾಳಿ ಎಂಬ ಜೈನ ದಂಪತಿಗಳು ಇದ್ದರು ಅವರು ಈ ಪ್ರದೇಶದ ಒಡೆಯರು ಹಾಗೂ ದಾನಿಗಳು ಆಗಿದ್ದರು ಒಮ್ಮೆ ಧರ್ಮ ದೇವತೆಗಳು ಕಲರೈ ಕನ್ಯಾ ಕುಮಾರಿ ಮತ್ತು ಕುಮಾರ ಸ್ವಾಮಿ ಗಳು ಕುದುರೆ ಮತ್ತು ಆನೆಗಳ ಮೇಲೆ ಬಂದು ದಂಪತಿಯನ್ನು ಹರಸಿ ಹೋಗಿದ್ದರು
ದಾನ ಧರ್ಮವನ್ನು ನಿರಂತರವಾಗಿ ಮಾಡಿ ಎಂದು ತಿಳಿಸಿ ಹಾಗೆಯೇ ದೇವಾಲಯವನ್ನು ಸ್ಥಾಪಿಸಿ ಎಂದು ಹೇಳುತ್ತಾರೆ ಇದೆ ಕಾರಣಕ್ಕಾಗಿ ಧರ್ಮಸ್ಥಳದಲ್ಲಿ ಆನೆಯನ್ನು ಸಾಕಲಾಗುತ್ತದೆ ದೇವತೆಗಳ ಆಜ್ಞೆಯಂತೆ ಕದ್ರಿಯಲ್ಲಿ ಇರುವ ಲಿಂಗವನ್ನು ಅಣ್ಣಪ್ಪ ದೇವರು ಕದ್ರಿಯಲ್ಲಿರುವ ಲಿಂಗವನ್ನು ಧರ್ಮಸ್ಥಳ ದಲ್ಲಿ ತಂದು ಪ್ರತಿಷ್ಠಾಪಿಸುತ್ತಾರೆ .
ಅದು ಸುಮಾರು ದೇವರಾಜ ಹೆಗ್ಗಡೆ ಅವರ ಕಾಲದಲ್ಲಿ ಉಡುಪಿಯ ಎಂಟು ಮಠದಲ್ಲಿ ಒಂದಾದ ಸೊಂದೆಯ ವಾದಿರಾಜ ಸ್ವಾಮಿಗಳು ಸುಬ್ರಮಣ್ಯ ಭೇಟಿ ನೀಡಿದ ಸಂದರ್ಭದಲ್ಲಿ ಆಗ ದೇವರಾಜ ಹೆಗ್ಗಡೆಯವರು ವಾದಿರಾಜ ಸ್ವಾಮಿಗಳನ್ನು ಕುಡುಮಾಗೆ ಬರಲು ವಿನಂತಿಸಿಕೊಳ್ಳುತ್ತಾರೆ ಆಗ ವಾದಿರಾಜರು ಈ ಸ್ಥಳವನ್ನು ಸಂದರ್ಶಿಸುತ್ತಾರೆ ಆಗ ಅಲ್ಲಿಯ ಸ್ವಾಮಿಗಳು ಶಿವಲಿಂಗದ ಪ್ರಸಾದವನ್ನು ವಾದಿರಾಜರಿಗೆ ಕೊಡಲು ಮುಂದಾದಾಗ ಶ್ರೀಗಳು ಪ್ರಸಾದವನ್ನು ನಿರಾಕರಿಸುತ್ತಾರೆ
ಕಾರಣ ಗರ್ಭಗುಡಿಯಲ್ಲಿ ಶಿವನನ್ನು ನೋಡಿ ವಿಚಲಿತರಾಗುತ್ತಾರೆ ವಾದಿರಾಜರು ಶಿವನನ್ನು ಸರಿಯಾಗಿ ಪ್ರತಿಷ್ಠಾಪಿಸಿಲ್ಲ ಇದರಲ್ಲಿ ಏನೋ ದೋಷವಿದೆ ಎಂದು ಹೇಳುತ್ತಾರೆ ವೇದ ವಿಧಿ ವಿಧಾನದ ಪ್ರಕಾರ ಲಿಂಗವನ್ನು ಪ್ರತಿಷ್ಠಾಪೀಸಲಾಗಿಲ್ಲ ಎಂದು ಹೇಳುತ್ತಾರೆ ಅದ ಹೆಗ್ಗಡೆಯವರು ಲಿಂಗವನ್ನು ಪುನಃ ಪ್ರತಿಷ್ಠಾಪಿಸಲು ಬೇಡಿಕೊಳ್ಳುತ್ತಾರೆ ವಾದಿರಾಜ ಸ್ವಾಮಿಗಳು ತಮ್ಮ ಯೋಗ ಶಕ್ತಿಯ ಮೂಲಕ ಲಿಂಗವನ್ನು ಪವಿತ್ರ ಗೊಳಿಸುತ್ತಾರೆ ಜೊತೆಗೆ ಆ ಸ್ಥಳಕ್ಕೆ ಧರ್ಮ ಸ್ಥಳ ಎಂದು ಹೆಸರು ಇಡುತ್ತಾರೆ ಹಾಗೆಯೇ ದಾನ ಧರ್ಮವನ್ನು ಆರಾಧಿಸಬೇಕು ಎಂದು ಹೇಳಿ ಹೋಗುತ್ತಾರೆ ಹೀಗೆ ಧರ್ಮ ಸ್ಥಳದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಯಿತು ಆ ಲಿಂಗಕ್ಕೆ ಮಂಜುನಾಥ ಎಂದು ಹೆಸರಿಡಲಾಗಿದೆ .
ಆ ಕಾಲದಿಂದ ಇಲ್ಲಿಯ ವರೆಗೆ ಹೆಗ್ಗಡೆ ವಂಶಸ್ಥರೆ ಧರ್ಮ ಸ್ಥಳ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಹೆಗ್ಗಡೆ ವಂಶಸ್ಥರಲ್ಲಿ ಪ್ರಸಿದ್ಧರಾದವರು ಕುಮಾರಯ್ಯ ಹೆಗ್ಗಡೆ ಮಂಜಯ್ಯ ಹೆಗ್ಗಡೆ ರತ್ನವರ್ಮ ಹೆಗ್ಗಡೆ ಹಾಗೆಯೇ ಈಗಿನ ಶ್ರೀಗಳಾದ ವೀರೇಂದ್ರ ಹೆಗ್ಗಡೆ ಹಾಗೂ ಈಗಿನ ಧರ್ಮದರ್ಶಿ ಗಳು ಸಾವಿರದ ಒಂಬೈನೂರ ಅರವತ್ತೆಂಟರಿಂದ ಧರ್ಮದರ್ಶಿಗಳಾಗಿದ್ದರೆ ಕುಮಾರಯ್ಯ ಹೆಗ್ಗಡೆಯವರು ಬ್ರಿಟಿಷರ ಕಾಲದಲ್ಲಿಯೇ ಧರ್ಮದರ್ಶಿ ಗಳಾಗಿದ್ದರು ಬ್ರಿಟಿಷರು ಸಹ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದರೆಂದು ಇತಿಹಾಸವಿದೆ
ಅಡಿಕೆ ತೋಟ ತೆಂಗು ಬೆಟ್ಟ ಗುಡ್ಡ ಗಳು ಈ ಊರನ್ನು ಸುತ್ತುವರೆದಿದೆ ಧರ್ಮಸ್ಥಳದಲ್ಲಿ ಧರ್ಮ ಮತ್ತು ಮತ ದಲ್ಲಿ ಭೇದ ಭಾವವಿಲ್ಲದೆ ಸಹಾನುಭೂತಿ ನೆಲೆಸಿದೆ ಈ ದೇವಾಲಯ ಎಲ್ಲ ಜಾತಿ ಧರ್ಮಕ್ಕೆ ಹೇಳಿ ಮಾಡಿಸಿದ ದೇವಾಲಯವಾಗಿದೆ ಈ ದೇವಾಲಯದ ಭಕ್ತರಲ್ಲಿ ಹಿಂದೂಗಳು ಮುಸಲ್ಮಾನರು ಕ್ರೈ ಸ್ತರು ಎಲ್ಲ ಮತಸ್ಥರು ಇದ್ದಾರೆ ಎಲ್ಲರಿಗೂ ಈ ದೇವಾಲಯದಲ್ಲಿ ಪ್ರವೇಶವಿದೆ ಧರ್ಮ ಸ್ಥಳದಲ್ಲಿ ಸಾವಿರಾರು ಜನರ ಮದುವೆಗಳು ನೆರವೇರುತ್ತದೆ ಇದು ನಿರಂತವಾಗಿ ನಡೆಯುತ್ತ ಬಂದಿದೆ ಈ ದೇವಾಲಯದಲ್ಲಿ ನಾಗರಿಕ ಜಗಳಗಳು ತೀರ್ಮಾನವಾಗಿತ್ತದೆ
ಇದು ಕರ್ನಾಟಕದ ವಿಶೇಷವಾಗಿದೆ ವಿವಾದವನ್ನು ಹೊಂದಿರುವರು ಯಾವುದೇ ಜಾತಿ ಮತ ಪಂಥ ಒಳಗಾದ ಜಗಳವನ್ನು ಬಗೆಹರಿಸಲಾಗುವುದು ಪ್ರತಿ ವರ್ಷ ಮಂಜುನಾಥ ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ಲಕ್ಷ ದೀಪೊತ್ಸವ ನಡೆಯುತ್ತದೆಹನ್ನೆರಡು ವರ್ಷಗಳಿಗೊಮ್ಮೆ ನಡಾವಳಿ ಎಂಬ ಉತ್ಸವ ನಡೆಯುತ್ತದೆ ಹದಿಮೂರು ದಿನಗಳ ಕಾಲ ನಡೆಯುತ್ತದೆ ವರ್ಷ ವರ್ಷವೂ ಸಂಕ್ರಾಂತಿಯಂದು ಜಾತ್ರೆ ರಥೋತ್ಸವ ನಡೆಯುತ್ತದೆ ಧರ್ಮಸ್ಥಳದಲ್ಲಿ ಏಕಶಿಲಾ ವಿಗ್ರಹವಿದೆ ಹೀಗೆ ಧರ್ಮಸ್ಥಳ ಶಿವ ಆರಾಧನೆಯ ತಾಣ ವಾಗಿದೆ.