ಸಪ್ತಮಾತೃಕೆಯರಾದ ವೈಷ್ಣವಿ ಇಂದ್ರಾಣಿ ಮಹೇಶ್ವರಿ ಕೌಮಾರಿ ಬ್ರಾಹ್ಮೀದೇವಿ ವಾರಾಹಿ ಮತ್ತು ಚಾಮುಂಡಿ ವಾರಣಾಸಿಯಿಂದ ದಕ್ಷಿಣದ ಕಡೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲೇ ನೆಲಸಲು ನಿರ್ಧರಿಸಿದರು .ಅವರಲ್ಲಿ ವೈಷ್ಣವಿ ಕೌಮಾರಿ ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು ಆ ಜಾಗವೇಹಾಸನಾಂಬ ದೇವಿ ದೇವಸ್ಥಾನವಾಗಿದೆ ಐತಿಹಾಸಿಕ ದೇವಾಲಯವಾದ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲನ್ನು ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ತೆರೆದು ಬಲಿಪಾಡ್ಯಮಿಯ ದಿನ ಮುಚ್ಚಲಾಗುತ್ತದೆ.

ಆದರೆ ಇಲ್ಲಿನ ಪವಾಡವೆಂದರೆ ಹಿಂದಿನ ವರ್ಷದಲ್ಲಿ ದೇವಿಗೆ ಹಾಕಲಾದ ಹೂವುಗಳು ತಾಜಾವಾಗಿರುತ್ತದೆ ಹಾಗೂ ಹಿಂದಿನ ವರ್ಷದಲ್ಲಿ ಹಚ್ಚಿದ ನಂದಾದೀಪ ಆರದೆ ಉರಿಯುತ್ತಲೇ ಇರುತ್ತದೆ. ಈ ಕೌತುಕವನ್ನೇ ನೋಡಲು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.ನಾವು ಈ ಲೇಖನದ ಮೂಲಕ ಹಾಸನಾಂಬ ದೇವಿಯ ದೇಗುಲದ ಬಗ್ಗೆ ತಿಳಿದುಕೊಳ್ಳೋಣ .

ಹಾಸನ ನಗರದಲ್ಲಿ ಹಾಸನಾಂಬೆ ಯ ದೇವಾಲಯವಿದೆ ಹಾಸನಾಂಬೆ ದೇವಿ ನಗರದ ದೇವತೆಯಾಗಿದ್ದು ಆ ನಗರಕ್ಕೆ ಹಾಸನ ಎಂಬ ಹೆಸರು ಬಂದಿದೆ ಹನ್ನೆರಡನೇ ಶತಮಾನದಲ್ಲಿ ಪಾಳೇಗಾರ ಕೃಷ್ಣಪ್ಪ ನಾಯಕನ ಕಾಲಾವಧಿಯಲ್ಲಿ ಹೊರಗಡೆ ಹೊರಟಾಗ ಮೋಲವೊಂದು ಅಡ್ಡ ಬಂದಿತ್ತು ಅದು ಅಪಶಕುನ ಎಂದು ಭಾವಿಸಿದಾಗ ಆಗ ಪ್ರತ್ಯಕ್ಷಳಾದ ದೇವಿ ನಾನು ಹಾಸನಾಂಬೆ ನಾನು ಇಲ್ಲೇ ನೆಲೆಸುತ್ತೇನೆ ಎಂದು ಹೇಳುತ್ತಾಳೆ .ಕಾಶಿಯಿಂದ ದಕ್ಷಿಣಾಭಿಮುಖವಾಗಿ ವಿಹಾರಕ್ಕೆಂದು ಬಂದ ಸಪ್ತ ಮಾತ್ರಕೆಯರು ಮಾಹಿಷ್ವರಿ ಕೌಮಾರಿ ವೈಷ್ಣವಿ ವಾರಾಹಿ ಇಂದ್ರಾಣಿ ದುರ್ಗೆ ಚಾಮುಂಡಿ ಇವರೆಲ್ಲ ಬಂದರೆಂದು ಪ್ರತೀತಿ ಇದೆ

ಅವರಲ್ಲಿ ವೈಷ್ಣವಿ ವಾರಾಹಿ ಇದ್ರಾಣಿ ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆ ದೇಗುಲವಾಗಿದೆ ದೇವನೋಬ್ಬನೆ ಆದರೂ ಪುರುಷ ಸ್ತ್ರೀ ರೂಪವನ್ನು ಒಂದಾಗಿ ಕಂಡಿದ್ದಾರೆಹಾಗೆ ಕಂಡ ರೂಪಗಳೆ ಸಪ್ತ ಮಾತ್ರಕೆಯರು ಹಾಸನದ ದೇವಿ ಕೆರೆಯಲ್ಲಿ ಕೆಂಚಮ್ಮ ದೇವು ಬ್ರಾಮಿ ದೇವಿ ನೆಲೆಸಿದ್ದಾರೆ ಹಾಸನಾಂಬೆ ದೇವಿ ಬೇಡಿದ ವರಕೊಡುವ ಶಕ್ತಿ ದೇವಿಯಾಗಿದ್ದಾಳೆ.

ಪ್ರತಿ ವರ್ಷಕೊಮ್ಮೆ ತೆರೆಯುವ ಗರ್ಭಗುಡಿ ಕೃಷ್ಣಪ್ಪ ನಾಯಕ ಕಾಲದಿಂದಲೂ ಆಶ್ವೀಜ ಮಾಸ ಪೌರಿಣೆಯ ನಂತರ ಬರುವ ಗುರುವಾರದಂದು ಹಾಸನಾಂಬೆ ದೇವಾಲಯ ತೆರೆಯಲ್ಪಡುತ್ತದೆ ಸಹಸ್ರ ಸಂಖ್ಯೆ ಯಲ್ಲಿ ಬರುವ ಭಕ್ತಾದಿಗಳು ಬಂದು ದರ್ಶನ ಪಡೆಯುತ್ತಾರೆ ಗರ್ಭಗುಡಿಯಲ್ಲಿ ಹುತ್ತೊದ ಪಾದಿಯಲ್ಲಿ ಇರುವ ಅಡಿ ಶಕ್ತಿ ಸ್ವರೂಪಿಣಿ ಹಾಸನಾಂಬೆ.

ಹಾಗೆಯೇ ಹಿಂದಿನ ವರ್ಷದ ಹಚ್ಚಿಟ್ಟ ದೀಪ ಹಾಗೂ ಮೂಡಿಸಿದ ಹೂವು ಬಾಡದೆ ನೇವೆದ್ಯಕ್ಕೆ ಇಟ್ಟ ಅಕ್ಕಿಯು ಅನ್ನವಾಗಿ ಇರುವ ವಿಸ್ಮಯ ದೃಶ್ಯವನ್ನು ಭಕ್ತರು ಕಣ್ಣು ತುಂಬಿ ಕೊಳ್ಳಬಹುದು ಹೀಗೆ ವರ್ಷಕೊಮ್ಮೆ ದೇಗುಲದ ಬಾಗಿಲನ್ನು ಅಕ್ಕಿ ನೇವೆದ್ಯ ಶೃಂಗಾರವನ್ನು ಮಾಡಿ ಜಿಲ್ಲಾಧಿಕಾರಿ ಹಾಗೂ ಶಾಸಕರು ಹಾಗೂ ಎಲ್ಲರ ಸಮ್ಮುಖದಲ್ಲಿ ತೆರೆಯಲಾಗುತ್ತದೆ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಅವರೆಲ್ಲರ ಸಮ್ಮುಖದಲ್ಲಿ ಮುಚ್ಚುತ್ತಾರೆ ಹಾಗೆಯೇ ಮುಚ್ಚುವಾಗ ದೇವಿಗೆ ಅಲಂಕಾರ ಅಕ್ಕಿ ನೈವೇದ್ಯ ಎಲ್ಲವನ್ನೂ ಇಟ್ಟು ಮುಚ್ಚಲಾಗುತ್ತದೆ .

ಈ ದೇವಾಲಯದ ಬಗ್ಗೆ ದಂತ ಕಥೆಯೂ ಇದೆ ಸೊಸೆ ಯೊಬ್ಬಳು ಮನೆ ಕೆಲಸ ಬಿಟ್ಟು ಧ್ಯಾನ ಮಗ್ನಳಾಗಿ ಇರುವಾಗ ಆಕೆಯ ಅತ್ತೆ ದೇವಿಯ ಎದುರು ಚಂದನದ ಬಟ್ಟಲನ್ನು ಇಟ್ಟು ತಲೆಯನ್ನು ಕುಟ್ಟಿದ್ದಳು ಹಾಗೆಯೇ ಅಮ್ಮ ಕಾಪಾಡು ಎಂದಾಗ ದೇವಿ ಅವಳ ಭಕ್ತಿ ಕೇಳಿ ತನ್ನ ದೇವಾಲಯದಲ್ಲಿ ಕಲ್ಲಾಗಿರು ಎಂದು ಹೇಳಿದ್ದಳು ಹಾಸನಾಂಬೆ ದೇವಿ ಬಹಳ ಮಡಿವಂತಿಕೆ ಮಾನ್ಯ ನಿಯಮ ನಿಷ್ಠೆಗೆ ಒಲಿಯುವಳು ಎಂಬುದು ಆಚಾರ ವಿಚಾರದಿಂದ ತಿಳಿದುಬಂದಿದೆ

ವರ್ಷಕೊಮ್ಮೆ ಮಾತ್ರ ಭಕ್ತಾದಿಗಳು ದರ್ಶನ ಪಡೆದುಕೊಳ್ಳುತ್ತಾರೆ ಹಾಸನ ನಗರದಲ್ಲಿ ಹಾಸನಾಂಬೆ ದೇವಿಯ ಜಾತ್ರೆ ನಡೆಯುತ್ತದೆ ಜಾತ್ರೆ ನೋಡಲು ನಯನ ಮನೋಹರವಾಗಿ ಇರುತ್ತದೆ .ಸಪ್ತಮಾತೃಕೆಯರು ಸದಾ ನಗುವ ದೇವತೆಯಾಗಿರುವ ಕಾರಣದಿಂದ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಾಸನವಾಗಿದೆ ಎನ್ನಲಾಗುತ್ತದೆ. ಈ ಮೂಲಕ ಹಾಸನ ವಿಶೇಷತೆಯನ್ನು ಹೊಂದಿದೆ.

Leave a Reply

Your email address will not be published. Required fields are marked *