Dark neck Remedy: ಕೆಲವರಲ್ಲಿ ಕುತ್ತಿಗೆಯ ಮೇಲೆ ಉಂಟಾಗುವಂತಹ ಕಪ್ಪು ಕಲೆಗಳು ಪೂರ್ತಿ ಕುತ್ತಿಗೆಯನ್ನು ಸುತ್ತುವರೆದು ಆವರಿಸಿರುತ್ತದೆ ಇದನ್ನ ನಿವಾರಣೆ ಮಾಡುವ ಸಲಹೆಯನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.
ಈ ಕುತ್ತಿಗೆಯ ಭಾಗದಲ್ಲಿ ಕಪ್ಪು ಕಲೆಗಳು ಆವರಿಸಲು ಮುಖ್ಯ ಕಾರಣ ಅಜೀರ್ಣ ಮತ್ತು ಮಲಬದ್ಧತೆ ಹಾಗೆ ಕೆಲವೊಂದು ಚರ್ಮದ ಸಮಸ್ಯೆಗಳಿಂದ ಕೂಡ ಈ ರೀತಿ ಆಗುತ್ತದೆ ಹೆಚ್ಚಾಗಿ ದೇಹದ ತೂಕ ಕೊಬ್ಬಿನಿಂದಾಗಿ ಹೆಚ್ಚಾಗಿದ್ದ ಜನರಲ್ಲಿ ಈ ತರಹದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯ ಭಾಗದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾದಾಗ ಥೈರಾಯಿಡ್ ಗ್ರಂಥಿಯಲ್ಲಿನ ಸೂಕ್ಷ್ಮ ನರಗಳಲ್ಲಿ ವಿಷ ವಸ್ತುಗಳು ಸಂಗ್ರಹಣೆಯಾಗಿ ಅದರ ಮೂಲಕ ಸರಿಯಾಗಿ ಹೊರಗಡೆ ಹೋಗದೆ ಕುತ್ತಿಗೆಯ ಸುತ್ತಲೂ ಕಪ್ಪಾಗುತ್ತಾ ಹೋಗುತ್ತವೆ.
ಇದಕ್ಕೆ ಪರಿಹಾರವೆಂದರೆ ಎಳೆ ನೀರು ಮತ್ತು ಶ್ರೀಗಂಧ ಗಂಧದ ಕಲ್ಲಿನಲ್ಲಿ ತೈದು ರಾತ್ರಿ ಮಲಗುವಾಗ ಗುತ್ತಿಗೆಗೆ ಲೇಪನ ಮಾಡಿ ನಿದ್ರಿಸಿ ಬೆಳಿಗ್ಗೆ ಎದ್ದು ಸ್ನಾನ ಮಾಡಿದರೆ ಕಪ್ಪು ಕಲೆಗಳು ದೂರವಾಗುತ್ತವೆ ಹೀಗೆ 21 ದಿನಗಳ ಕಾಲ ಮಾಡಬೇಕು.
ಇನ್ನೂ ಶ್ರೀಗಂಧ ಇಲ್ಲದೆ ಹೋದಲ್ಲಿ ಕುಚಲಕ್ಕಿಯನ್ನು ಚೆನ್ನಾಗಿ ಕುದಿಸಿ ಸ್ಮ್ಯಾಶ್ ಮಾಡಿ ನಂತರ ಅದಕ್ಕೆ ಹಾಲು ಬೆರೆಸಿ ಮತ್ತೆ ಕುದಿಸಬೇಕು ಹೀಗೆ ಮಾಡಿದ ಮಿಶ್ರಣ ಉಗುರು ಬೆಚ್ಚಗೆ ಇರುವಾಗ ಪೇಸ್ಟನ ರೀತಿಯಲ್ಲಿ ಮಾಡಿ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಬೇಕು ಒಂದು ತಾಸಿನ ಬಳಿಕ ಮುಲ್ತಾನ್ ಮೆಟ್ಟಿ ಬಳಸಿ ಅದನ್ನ ತೊಳೆಯಬೇಕು ಈ ರೀತಿ ಮಾಡುವುದರಿಂದ ಗುತ್ತಿಗೆಯ ಸುತ್ತಲಿನ ಕಪ್ಪು ತಲೆ ಸಂಪೂರ್ಣ ಗುಣವಾಗುತ್ತದೆ.
ಇದನ್ನೊ ಓದಿ..Dates: ಖರ್ಜುರವನ್ನು ಹೀಗೆ ತಿನ್ನಿ ನಿಮಗೆ ಹೃದಯಾಘಾತ ಬರೋದಿಲ್ಲ
ಇನ್ನೊಂದು ಸಲಹೆ ಏನೆಂದರೆ ಅಲೋವೆರಾವನ್ನು ಮುಲ್ತಾನ್ ಮೇಟಿ ಜೊತೆಗೆ ಮಿಶ್ರಣ ಮಾಡಿ ತೆಳುವಾದ ಪೇಸ್ಟ್ ರೀತಿಯಲ್ಲಿ ಮಾಡಿ ರಾತ್ರಿ ಮಲಗುವಾಗ ಕುತ್ತಿಗೆಗೆ ಲೇಪನ ಮಾಡಿ ಮಲಗಿ ಬೆಳಿಗ್ಗೆ ಎದ್ದು ಸೀಗೆಕಾಯಿ ಪುಡಿ ಅಥವಾ ಅಟಲಕಾಯಿ ಬಳಸಿ ತೊಳೆಯಬೇಕು ಜೊತೆಗೆ ಈ ಸಮಸ್ಯೆಗೆ ಹೊಟ್ಟೆಯ ಶುದ್ಧೀಕರಣ ಬಹಳ ಮುಖ್ಯವಾಗಿರುತ್ತದೆ ಅದರಿಂದ ಬೆಟ್ಟದ ನೆಲ್ಲಿಕಾಯಿ ಪಾನೀಯ ಇತ್ಯಾದಿ ಮನೆ ಮದ್ದನ್ನು ಬಳಸಿ ಹೊಟ್ಟೆಯ ಶುದ್ಧೀಕರಣ ಮಾಡಿಕೊಂಡು ಈ ಲೇಪನವನ್ನು ಬಳಸಿದರೆ ಸಂಪೂರ್ಣವಾಗಿ ಕುತ್ತಿಗೆಯ ಸುತ್ತಲಿನ ಕಪ್ಪು ಭಾಗ ನಿವಾರಣೆಯಾಗುತ್ತದೆ.