ರೈತರು ತೋಟ ಹಾಗೂ ಗದ್ದೆಯ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಾರೆ. ಹೈನುಗಾರಿಕೆಯಲ್ಲಿ ಆಕಳು ಸಾಕಣೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮುಂತಾದವುಗಳು ಬರುತ್ತವೆ. ಇವುಗಳಲ್ಲಿ ಒಂದಾದ ಕುರಿ ಸಾಕಾಣಿಕೆ ಮಾಡುವವರಿಗೆ ಅಥವಾ ಕುರಿ ಸಾಕಾಣಿಕೆ ಮಾಡಬೇಕು ಎಂದು ಅಂದುಕೊಳ್ಳುತ್ತಿರುವವರಿಗೆ ಜಿಲ್ಲಾ ಪಂಚಾಯತದಿಂದ ಒಂದು ಸೌಲಭ್ಯ ಒದಗಿಸುತ್ತಿದೆ. ಈ ಸೌಲಭ್ಯದ ವಿವರವನ್ನು ನಾವು ತಿಳಿಯೋಣ.

ಗ್ರಾಮಾಂತರ ಪ್ರದೇಶದ ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ, ಆರ್ಥಿಕ ಚಟುವಟಿಕೆಗೆ ನೆರವು ನೀಡುವ ಸಲುವಾಗಿ ಜಿಲ್ಲಾ ಪಂಚಾಯತವು ಸೌಲಭ್ಯ ಜಾರಿಗೆ ತಂದಿದೆ. ಈ ಸೌಲಭ್ಯವು ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡುವವರಲ್ಲಿ ಅರ್ಹರಾಗಿರುವವರಿಗೆ ಮಾತ್ರ ನೀಡಲಾಗುತ್ತದೆ. ಮೇಕೆ ಸಾಕಾಣಿಕೆ ಮಾಡಲು ಶೆಡ್ ಮಾಡಲು ಬೇಕಾದ ಅಂದಾಜು ವೆಚ್ಚವನ್ನು ಪಟ್ಟಿ ಮಾಡಿ ನಿಗದಿತ ಹಣಕ್ಕೆ ಗ್ರಾಮ ಪಂಚಾಯತದಲ್ಲಿ ಅನುಮೋದನೆ ತೆಗೆದುಕೊಳ್ಳಬಹುದು.

ಈ ಸೂಚನೆಯನ್ನು ನೀಡಲು ಜಿಲ್ಲಾಧಿಕಾರಿಯಿಂದ ಗ್ರಾಮ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ದೊರಕಿದೆ. ತಮ್ಮ ಜಾಗದ ಸುತ್ತಲೂ ಶೆಡ್ ನಿರ್ಮಿಸಲು 44,000 ಸಾವಿರದ ವರೆಗೆ ಸಹಾದಧನ ಗ್ರಾಮ ಪಂಚಾಯತಿಯಿಂದ ದೊರಕುತ್ತದೆ. ಗ್ರಾಮಾಂತರದಲ್ಲಿ ಹಿತ್ತಲು ಪ್ರದೇಶದಲ್ಲಿ ಕುರಿ ಸಾಕಾಣಿಕೆ ಮಾಡುತ್ತಾರೆ. ಕಾಡು ಪ್ರಾಣಿಗಳು ಹಾಗೂ ಕಳ್ಳಕಾಕರಿಂದ ಕುರಿಗಳನ್ನು ಕಾಯ್ದುಕೊಳ್ಳುವುದು ಕಷ್ಟಕರವಾಗುತ್ತದೆ. ಮೇಕೆಗಳನ್ನು ಕಾಪಾಡಿಕೊಳ್ಳಲು ಶೆಡ್ ನಿರ್ಮಾಣ ಅತ್ಯವಶ್ಯಕವಾಗಿದೆ.

ಗ್ರಾಮ ಪಂಚಾಯತಿ ವತಿಯಿಂದ ಕುರಿ ಹಾಗೂ ಮೇಕೆ ಸಾಕಾಣಿಕೆಗೆ ಧನ ಸಹಾಯ ಸಿಗುತ್ತದೆ. ಅದರ ಲಾಭ ಪಡೆದುಕೊಳ್ಳಲು ಗ್ರಾಮ ಪಂಚಾಯತದ ಅಧಿಕಾರಿಗಳನ್ನು ಆದಷ್ಟು ಬೇಗ ಭೇಟಿ ಮಾಡುವುದು ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!