ಆಧುನಿಕ ಯುಗದಲ್ಲಿ ನಾವು ನಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವೇ ಇರುವುದಿಲ್ಲ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗೆ ನಾವು ತುತ್ತಾಗುತ ಇರುವುದು ಸಹಜ ಸಂಗತಿ ಹಾಗೂ ಇತ್ತೀಚೆಗೆ ಹವಾಮಾನ ವೈಪರಿತ್ಯ ಕೂಡ ಒಂದು ಕಾರಣ ಎಷ್ಟು ಜನರು ಮುಂಜಾನೆ ಎದ್ದು ಸಣ್ಣ ವಾಕಿಂಗ್ ಮಾಡಿ ದೇಹವನ್ನು ದಂಡಿಸಿ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ ಆದರೆ ಕೆಲವರು ವ್ಯಾಯಾಮ ಯೋಗ ಇತ್ಯಾದಿ ಮೊರೆ ಹೋಗಿ ದೇಹವನ್ನು ಆರೋಗ್ಯಕರ ರೀತಿಯಲ್ಲಿ ಇಟ್ಟುಕೊಳ್ಳುತ್ತರೆ ಕೆಲವರು ಏನನ್ನು ಕೂಡ ಅವಲಂಬಿಸದೆ ಸೋಂಬೇರಿ ತರಹ ಇದ್ದು ತನ್ನ ದೇಹಕ್ಕೆ ತಾವೇ ಸಂಚಕಾರ ತಂದುಕೊಳ್ಳುವ ಭರದಲ್ಲಿ ಇರುವವರು ಇದ್ದಾರೆ

ಒಬ್ಬ ಮನುಷ್ಯನು ಆರೋಗ್ಯಕರ ಆಹಾರ ಸೇವಿಸಿ ಬೇರೆ ಏನು ಚಟುವಟಿಕೆ ಮಾಡದಿದ್ದಲ್ಲಿ ಆತನ ಆರೋಗ್ಯ ಅಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ ಆದರೆ ಸ್ವಲ್ಪ ಹೊತ್ತು ನಡೆದಾಡುವ ಚಟುವಟಿಕೆ ಮಾಡಿದ್ದಲ್ಲಿ ಉತ್ತಮ ಇಂದಿನ ಅಂಕಣ ಅಲ್ಲಿ ನಿಯಮಿತ ವಾಕಿಂಗ್ ಇಂದ ಏನೆಲ್ಲಾ ಉಪಯೋಗ ಇದೆ ಎನ್ನುವುದನ್ನು ನೋಡೋಣ

ನಡಿಗೆ ಎನ್ನುವುದು ಒಂದು ಅದ್ಭುತವಾದ ಆರೋಗ್ಯಕರ ದಿವ್ಯಶಕ್ತಿ ಸರ್ವರೋಗಕ್ಕೂ ನಡಿಗೆ ಇಂದ ಪರಿಹಾರ ಕಂಡುಕೊಳ್ಳಬಹುದು ಇನ್ನೂ ಮಾನವ ಶರೀರವು ಹಲವಾರು ಅಂಗಾಗ ಹೊಂದಿದ್ದು ಎಲ್ಲ ಅಂಗಕ್ಕೂ ರಕ್ತ ಪರಿಚಲನೆ ಸರಿಯಾಗಿ ಆದಲ್ಲಿ ಆತನ ಎಲ್ಲ ಸಮಸ್ಯೆಯಿಂದ ದೂರ ಎಂದು ಅರ್ಥ ಹಾಗಾಗಿ ನಡಿಗೆಯಿಂದ ಇದು ಸಾಧ್ಯ ನಾವು ತಿಂದ ಆಹಾರವು ಸರಿಯಾಗಿ ಪಚನಕ್ರಿಯೆ ಆಗದೇ ಹೋದಲ್ಲಿ ಏನೆಲ್ಲಾ ಸಮಸ್ಯೆ ಉಂಟಾಗುವುದು ಎಂಬುದರ ಬಗ್ಗೆ ನಮೆಗೆಲ್ಲ ತಿಳಿದೇ ಇದೆ ಬರಿಕಾಲಿನಲ್ಲಿ ಮಣ್ಣಿನ ಮೇಲೆ ನಡೆಯುವುದರಿಂದ ನಿಮ್ಮ ದೇಹದಲ್ಲಿ ಹೊಸ ಸಂಚಲನ ಮೂಡುವುದು ಊಟದ ನಂತರ ಸ್ವಲ್ಪ ಹೊತ್ತು ನಡೆಯುವುದರಿಂದ ಜೀರ್ಣಕ್ರಿಯೆ ಉತ್ತಮ ಆಗುವುದು ಮತ್ತು ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ನಿವಾರಣೆ ಆಗುವುದು

ಹಳ್ಳಿಯ ಊಟ ಚೆಂದ ನೋಟವು ಅದ್ಬುತ ಇನ್ನೂ ಹಳ್ಳಿಯ ವಾತಾವರಣ ಅಲ್ಲಿ ಇದ್ದರೆ ಮನಕ್ಕೆ ಆಗುವಂಥ ಆನಂದ ಹೇಳಲು ಪದಗಳೇ ಇಲ್ಲ ಆದರೆ ಇಂದಿನ ಮಾನವ ಆಧುನಿಕ ಜೀವನಕ್ಕೆ ಲಗ್ಗೆ ಇಟ್ಟಿದ್ದು ವಿಷಾದನೀಯ ಸಂಗತಿ ಎಂದರೆ ತಪ್ಪಲ್ಲ ಹಳ್ಳಿಯ ಕಡೆ ಶುಭ್ರ ಮಣ್ನಲ್ಲಿ ಬರಿಕಾಲಲ್ಲಿ ನಡೆದಾಡುದರಿಂದ ನಿಮ್ಮ ದೇಹದಲ್ಲಿ ಆಗುವ ಅನುಭವ ನಿಮಗೆ ಅರಿವು ಬರುವುದು ಆದರೆ ಸಿಟಿ ಕಡೆ ನಡೆದರೆ ಕಾಲಿಗೆ ಏನಾದರೂ ಚುಚ್ಚಿ ನೋವು ಅನುಭವಿಸುವ ಸಾಧ್ಯತೆ ಇದ್ದು ನಿಮ್ಮ ಮನೆಯ ಹತ್ತಿರ ಇರುವ ಪಾರ್ಕ್ ಅಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ ವಾಕಿಂಗ್ ಇಂದ ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗ ಪಡೆಯಬಹುದು ಎಂಬುದನ್ನು ನೋಡೋಣ

ಹೃದಯಾಘಾತ ಇತ್ತೀಚೆಗೆ ದಿನ ಸಾಮಾನ್ಯ ಆಗಿದೆ ಅದನ್ನು ಕೂಡ ತಡೆಗಟ್ಟಬಹುದು ಮಾಂಸ ಖಂಡ ಕ್ರಿಯಾಶೀಲತೆ ಹೊಂದಿ ಹೃದಯ ಬಡಿತ ಕೂಡ ಲಯಬದ್ಧ ಆಗುವುದು ಜೀರ್ಣಕ್ರಿಯೆ ಸರಾಗವಾಗುವುದು ಹಾಗೂ ನಮ್ಮ ಶರೀರದ ಎರಡನೆಯ ಹೃದಯ ಎಂದರೆ ಮಿನಖಂಡ ಕ್ರಿಯಾಶೀಲ ಹೊಂದಿ ಅದಲ್ಲಿ ನರದೌರ್ಬಲ್ಯ ಸಮಸ್ಯೆ ನಿವಾರಣೆಯಾಗುವುದು ಹಾಗೂ ಅನೇಕ ಕಾಯಿಲೆಗಳು ಕೂಡ ನಡೆದಾಡುವುದುರಿಂದ ಸಮಸ್ಯೆ ಇಂದ ದೂರ ಇರುವ ಸಾಧ್ಯತೆ ಇದೆ ಅತಿಯಾದ ಒತ್ತಡ ಜಂಕ್ ಆಹಾರ ಸೇವನೆಯಿಂದ ಇಂದಿನ ದಿನಗಳಲ್ಲಿ ಬೊಜ್ಜುತನ ಬಂದಿದ್ದು ಅದನ್ನ ಕರಗಿಸಲು ಏನೇನು ಹರಸಾಹಸ ಪಡುತ್ತಿದ್ದಾರೆ ಆದರೆ ನಿಯಮಿತವಾಗಿ ಬೆಳಿಗ್ಗೆ ಹಾಗೂ ಸಂಜೆ ನಡಿಗೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು

ಇಂದು ಬೊಜ್ಜು ಕರಗಿಸಲು ಏನೇನು ಔಷಧಿಗಳು ಇಂದಿನ ಮಾರುಕಟ್ಟೆಯಲ್ಲಿ ಸಿಗುತ್ತದೆ ಹಾಗೂ ವರ್ಕೌಟ್ ಮೊರೆ ಹೋಗುವ ಜನರು ಇದ್ದಾರೆ ಆದರೆ ಇದರಿಂದ ಬ್ಲಡ್ ಪ್ರೆಶರ್ ಏರಿಳಿತ ಉಂಟಾಗುವುದು ಮತ್ತು ಹೃದಯಾಘಾತ ಅನೇಕ ಸಮಸ್ಯೆಗಳಿಗೆ ಆಗುವ ಸಾಧ್ಯತೆಗಳಿವೆ ಆದ್ದರಿಂದ ವರ್ಕೌಟ್ ಅಪಾಯಕಾರಿ ಹಾಗೂ ವಾಕಿಂಗ್ ಉಪಯೋಗಕಾರಿ ಎಂದೇ ಹೇಳಬಹುದು ಇನ್ನೂ ಜನೇಂದ್ರಿಯ ಕ್ರಿಯೆಗೆ ಸಂಬಂಧಪಟ್ಟ ಗ್ರಂಥಿಗಳು ಕ್ರಿಯಾಶೀಲವಾಗಿರುತ್ತದೆ ಮತ್ತು ಮಾನವನ ದೇಹದಲ್ಲಿ ಜಾಯಿಂಟ್ ಕೂಡ ಕ್ರಿಯಾಶೀಲ ಹೊಂದಿ ಇದರಿಂದ ನಿಮಗೆ ಸಂದಿವಾತ ಮತ್ತು ಆಮವಾತಾದ ಸಮಸ್ಯೆ ಬರೋಲ್ಲ ಹಾಗೂ ಉಸಿರಾಟದಲ್ಲಿ ಕೂಡ ಒಳ್ಳೆಯ ಬೆಳವಣಿಗೆ ಆಗುವುದು ಮತ್ತು ಆಯುಷ್ಯ ಕೂಡ ವೃದ್ಧಿ ಆಗುವುದು ಮತ್ತು ನಿದ್ರಾಹೀನತೆಯಿಂದ ಕೂಡ ಮುಕ್ತಿ ಪಡೆಯಬಹುದು

ಆದರೆ ಮುಖವನ್ನು ಗಂಟಿಕ್ಕಿ ಕೊಳ್ಳದೆ ಸದಾ ಲವಲವಿಕೆ ಇಂದ ಮತ್ತು ನಗು ನಗುತ ಎಲ್ಲರ ಜೊತೆ ಬೆರೆಯುತ ನಡೆದಾಡುವ ಮನುಷ್ಯ ಹಸನ್ಮುಖಿ ಆಗಿ ಇದ್ದಲಿ ಆಯುಷ್ಯ ಆರೋಗ್ಯ ಕೂಡ ಚೆನ್ನಾಗಿ ಇರುವುದು ಸಪ್ತ ಧಾತು ಮತ್ತು ವಾತ ಪಿತ್ತ ಕಫ ಮುಂತಾದ ವಿಕಾರಕ ಸಮತೋಲನ ಕಾಯ್ದುಕೊಳ್ಳಲು ಸಹಕಾರಿ ಇನ್ನೂ ವೈದ್ಯಕೀಯ ಕ್ಷೇತ್ರದಲ್ಲಿ ವಾಸಿಯಾಗದ ಖಾಯಿಲೆ ಕೂಡ ಈ ನಡಿಗೆ ಮತ್ತು ಆಯುರ್ವೇದಿಕ ಚಿಕಿತ್ಸೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ರೂಮಲ್ಲಿ ವೈದ್ಯ ಶ್ರೀ ಚನ್ನಕೇಶವ ಬಸವಣ್ಣನವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!