ಹೈನುಗಾರಿಕೆ ಎಂಬುದು ಸಾವಿರಾರು ವರ್ಷಗಳಿಂದಲೂ ವ್ಯವಸಾಯದ ಒಂದು ಭಾಗವಾಗುತ್ತಾ ಬಂದಿರುತ್ತದೆ ಐತಿಹಾಸಿಕವಾಗಿ ಹೇಳುವುದಾದರೆ ಇದು ಚಿಕ್ಕ ವೈವಿಧ್ಯಮಯ ಒಕ್ಕಲು ಜಮೀನುಗಳ ಒಂದು ಭಾಗ ಎನಿಸಿಕೊಂಡು ಬಂದಿರುತ್ತದೆ ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿದಂತಿರುವ ಕೃಷಿ ಅಥವಾ ಒಂದು ಪಶುಸಂಗೋಪನೆಯ ಉದ್ಯಮದ ಒಂದು ವರ್ಗವಾಗಿದೆ ಹಾಲಿನ ಉತ್ಪಾದನೆಯನ್ನು ಸಾಮಾನ್ಯವಾಗಿ ಹೈನು ಹಸುಗಳಿಂದ ಮಾಡಲಾಗುತ್ತದೆ ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ನಾವು ಕೇಳುತ್ತಿರುವಂತಹ ಮಾತು ಹಾಲಿನಲ್ಲಿರುವಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು
ಇದು ನಮ್ಮ ಆರೋಗ್ಯವನ್ನು ಸದಾ ಕಾಪಾಡುವುದು. ಹಾಲಿನಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ ಸೋಡಿಯಂ ಪ್ರೋಟೀನ್ ವಿಟಮಿನ್ ಕೊಬ್ಬು, ಅಮಿನೋ ಆಮ್ಲ ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇರುತ್ತದೆ ಆರೋಗ್ಯದಲ್ಲಿ ಹಾಲು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಹಾಲನ್ನು ಕೆಲವರು ಬೆಳಗ್ಗೆ ಇನ್ನು ಕೆಲವರು ಸಂಜೆ ವೇಳೆ ಕುಡಿಯುತ್ತಾರೆ ಮಲಗುವ ಮೊದಲು ಹಾಲು ಕುಡಿದರೆ ಒಳ್ಳೆಯದು ಬೇಸಾಯದ ಜತೆ ಬೇಸರ ಮಾಡದೆ ಎಮ್ಮೆ ಗಳನ್ನು ಸಾಕಿದರೆ ಎರಡು ವಿಧದ ಲಾಭತರುತ್ತದೆ ಒಂದೆಡೆ ಹಾಲು ಇನ್ನೊಂದೆಡೆ ಗೊಬ್ಬರದ ಕೊಡುಗೆ ನೀಡುವ ಹೈನುಗಾರಿಕೆ ನಿಜಕ್ಕೂ ವರದಾನವಾಗಿದೆ ನಾವು ಈ ಲೇಖನದ ಮೂಲಕ ಜಾಪಾರಾ ಬಾದಿ ತಳಿಯ ಎಮ್ಮೆಯ ಬಗ್ಗೆ ತಿಳಿದುಕೊಳ್ಳೋಣ.
ಜಾಪರಬಾದಿ ಎಮ್ಮೆಯನ್ನು ಸಾಕುದರಿಂದ ಹೆಚ್ಚು ಹಾಲು ಸಿಗುತ್ತದೆ ಆದರೆ ಈ ಎಮ್ಮೆಗಳು ಕರ್ನಾಟಕದ ತಳಿಗಳು ಅಲ್ಲ ಬದಲಾಗಿ ಹರಿಯಾಣದಿಂದ ತರಿಸಲಾಗುತ್ತದೆ ಜಾಸ್ತಿ ಫ್ಯಾಟ್ ಮತ್ತು ಕರ್ನಾಟದಲ್ಲಿ ಸಾಕಾಣಿಕೆ ಮಾಡುವ ಎಮ್ಮೆಗಳಿಗಿಂತ ಹೆಚ್ಚು ಹಾಲು ಕೊಡುತ್ತದೆ ಆದರೆ ಕರ್ನಾಟಕದಲ್ಲಿ ಹೆಚ್ಚು ಜನರಿಗೆ ಪರಿಚಯವಿಲ್ಲದ ತಳಿ ಮತ್ತು ಹರಿಯಾಣದಲ್ಲಿ ಪ್ರಗ್ನೇಟ್ ಇರೋ ಎಮ್ಮೆ ಬೇಕು ಅಂದರು ಸಹ ಸಿಗುತ್ತದೆ ಮತ್ತು ಹಾಲು ಕೊಡುವ ಎಮ್ಮೆ ಇದ್ದರೆ ಅದರ ಮರಿಯನ್ನು ಸಹ ಕೊಡುತ್ತಾರೆಹಾಗೂ ಪ್ರಗ್ನೆಂಟ್ ಇರೋ ಎಮ್ಮೆ ತಂದರೆ ಸ್ವಲ್ಪ ಜಾಸ್ತಿ ಹಣ ಬೇಕಾಗುತ್ತದೆ ಮತ್ತು ನಾನ್ ಪ್ರಗ್ನೆಂಟ್ ಇದ್ದಲ್ಲಿ ಸ್ವಲ್ಪ ಹಣ ಕಡಿಮೆ ಹಾಗೂ ಹಾಲು ಕೊಡುವ ಎಣ್ಣೆ ಇದ್ದರೆ ಜಾಸ್ತಿ ಹಣ ಬೇಕಾಗುತ್ತದೆ ಜಾಪರಬಾದಿ ಜಾತಿ ಎಮ್ಮೆ ಹಣೆ ಮತ್ತು ಕಾಲಿನ ಮೇಲೆ ಬಿಳಿ ಮಚ್ಚೆಗಳಿರುತ್ತದೆ ಕೋಡು ಸುಮಾರು ಒಂದು ಮೊಳದುದ್ದವಿರುತ್ತದೆ ದಿನವೊಂದಕ್ಕೆ ೩೦ ರಿಂದ ೪೦ ಪೌಂಡು ಹಾಲು ಕರೆಯಬಹುದು ದಿನವೊಂದಕ್ಕೆ ಸುಮಾರು ೨೫ ರಿಂದ ೩೦ ಪೌಂಡು ಹಾಲುಕೊಡುತ್ತದೆ ಕೋಡು ಸುಮಾರು ಒಂದು ಗಜ ಉದ್ದವಿದ್ದು ಬೆನ್ನಿನಮೇಲೆ ಬಾಗಿದೆ
ಒಂದು ಜಾಪರಬಾದಿಯ ಬೆಲೆ ಎಂಬತ್ತು ಸಾವಿರದಿಂದ ಒಂದುಲಕ್ಷ ರೂಪಾಯಿವರೆಗೆ ಇರುತ್ತದೆ ಇವುಗಳ ವಿಶೇಷತೆ ಎಂದರೆ ಒಂದು ಹೈನಿನಲ್ಲಿ ಎರಡು ಸಾವಿರ ಲೀಟರ್ ಹಾಲು ಕೊಡುತ್ತದೆ ದಿನಕ್ಕೆ ಸ್ಥಳೀಯ ಎಮ್ಮೆಗಳಿಗಿಂತ ಜಾಫ್ರಾಬಾದಿ ತಳಿ ಎಮ್ಮೆಗಳು ಕೊಡುವ ಹಾಲಿನಲ್ಲಿ ಅಧಿಕ ಕೊಬ್ಬಿನಾಂಶ ಇರುತ್ತದೆ ಒಂದು ದಿನಕ್ಕೆ ಹಿಂಡಿಹಸಿಹುಲ್ಲು ಒಣಮೇವು ಸೇರಿದಂತೆ ಇಪ್ಪತ್ತುಕೆ.ಜಿ ಆಹಾರ ಇವುಗಳಿಗೆ ಬೇಕಾಗುತ್ತದೆ ಎಮ್ಮೆಗಳು ಇಪ್ಪತ್ತಾರು ತಿಂಗಳಿಗೇ ವಯಸ್ಸಿಗೆ ಬಂದು ಗರ್ಭಧರಿಸಲು ಶಕ್ತವಾಗುತ್ತದೆ
ವಯಸ್ಸಿಗೆ ಬಂದ ಎಮ್ಮೆಗಳ ದೇಹದ ತೂಕ ಐದು ನೂರು ಕೆ ಜಿ ಯಿಂದ ಏಳು ನೂರು ಕೆ.ಜಿಯಷ್ಟು ಇರುತ್ತದೆ ಸ್ಥಳೀಯ ತಳಿಗಳ ಎಮ್ಮೆಗಳನ್ನು ಸುಧಾರಿಸಲು ಅವುಗಳ ಜೊತೆ ಜಾಫ್ರಾಬಾದಿ ತಳಿಗಳನ್ನು ಸಾಕಿದರೆ ರೈತರಿಗೆ ಅನುಕೂಲ ಒಂದು ಎಮ್ಮೆಯಿಂದ ವಾರ್ಷಿಕ ಒಂದೂವರೆ ಲಕ್ಷ ರೂ ಆದಾಯ ಜಾಪರಬಾದಿ ತಳಿಯ ಎಮ್ಮೆಗಳು ರೈತರ ಪಾಲಿನ ಆದಾಯದ ದಾರಿಯೂ ಹೌದು ರೈತರಿಗೆ ಇದರಿಂದ ನಷ್ಟದ ಮಾತೇ ಇಲ್ಲ ಆದರೆ ನಿರ್ವಹಣೆ ಕೂಡ ಅಷ್ಟೇ ಪ್ರಮಾಣದ್ದಾಗಿರುತ್ತದೆ ಹೀಗಾಗಿ ಶ್ರದ್ಧೆಯಿಂದ ದುಡಿದರೆ ಲಾಭ ಕಟ್ಟಿಟ್ಟ ಬುತ್ತಿ ಈ ತಳಿಯ ಎಮ್ಮೆಗಳು ನಿತ್ಯ ಕನಿಷ್ಠ 25 ಲೀಟರ್ ಹಾಲು ನೀಡುತ್ತದೆ ಸ್ಥಳೀಯವಾಗಿರುವ ಡೈರಿಗೆ ಹಾಲು ಸರಬರಾಜು ಮಾಡಬಹುದು.
ಜಾಪರಬಾಡಿ ತಳಿಯ ಎಮ್ಮೆಗಳು ನೋಡಲು ಭಾರೀ ಗಾತ್ರದಲ್ಲಿರುತ್ತವೆ ಸಾಮಾನ್ಯ ಎಮ್ಮೆಗಳಂತಿರದೆ ತುಸು ಭಿನ್ನವಾಗಿ ದೊಡ್ಡದಾಗಿ ಕಾಣಿಸುತ್ತದೆ ಅವುಗಳ ಗಾತ್ರಕ್ಕೆ ತಕ್ಕಂತೆ ಆಹಾರ ಕೂಡ ಹೆಚ್ಚಾಗಿಯೇ ಬೇಕು ಎಂದು ಎಮ್ಮೆಗಳು ಹೆಚ್ಚು ತಿಂದಷ್ಟು ಹಾಲು ಉತ್ಪಾದನೆ ಜಾಸ್ತಿ ಎನ್ನುವ ಕಾರಣಕ್ಕೆ ಉತ್ತಮವಾಗಿ ಮೇಯಿಸಲಾಗುತ್ತದೆ ಒಂದು ಎಮ್ಮೆಗೆ ಏನಿಲ್ಲವೆಂದರೂ ದಿನಕ್ಕೆ ಇಪ್ಪತ್ತು ಕೆ.ಜಿ ಆಹಾರ ಬೇಕು ಒಣ ಹುಲ್ಲಿನ ಜೊತೆಗೆ ಹತ್ತಿ ಕಾಳು ಗೋಧಿ ಹೊಟ್ಟುಸಜ್ಜೆ ಕುದಿಸಿ ತಿನ್ನಿಸಲಾಗುತ್ತದೆ ಹೀಗಾಗಿ ಅವುಗಳ ನಿರ್ವಹಣೆ ಕೂಡ ತುಸು ದುಬಾರಿಯೇ ಇರುತ್ತದೆ ಒಣ ಹುಲ್ಲು ಹಸಿ ಹುಲ್ಲು ಬೂಸಾ ಬಾರ್ಲಿಯನ್ನು ಸಾಮಾನ್ಯ ಆಹಾರ ಪದ್ಧತಿಯಡಿ ಎಮ್ಮೆಗಳಿಗೆ ನೀಡಲಾಗುತದೆ ದಿನಕ್ಕೆ ಎರಡು ಬಾರಿ ನೀರು ಮತ್ತು ಮೂರು ಬಾರಿ ಆಹಾರ ನೀಡಲಾಗುತ್ತದೆ ಇವುಗಳ ವಾಸಕ್ಕಾಗಿ ಸಣ್ಣ ದೊಂದು ಕೊಟ್ಟಿಗೆ ನಿರ್ಮಿಸ ಬೇಕಾಗುತ್ತದೆ.