ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗದಲ್ಲಿ ಮಾಸ್ ಐಕಾನ್ ಆಗಿ ಹಲವಾರು ವರ್ಷಗಳಿಂದ ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರತಿಯೊಂದು ವಿಚಾರಗಳಲ್ಲಿ ಕೂಡ ಅಭಿಮಾನಿಗಳಿಗೆ ಮಾದರಿಯಾಗುವ ರೀತಿಯಲ್ಲಿ ಬದುಕುತ್ತಾರೆ. ತಮ್ಮ ಸಮಾಜ ಸೇವೆಗಳಿಂದಲೂ ಕೂಡ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೂಡ ನೀಡುತ್ತಿದ್ದಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸಮಾಜ ಸೇವೆಗಾಗಿ ಅತ್ಯಂತ ಹೆಚ್ಚು ಹಣವನ್ನು ವಿನಿಯೋಗಿಸುವ ನಟರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಡಿ ಬಾಸ್ ನಟನೆಯ ಅತ್ಯಂತ ಪ್ರಚಾರದಲ್ಲಿರುವ ಸಿನಿಮಾ ಆಗಿರುವ ಕ್ರಾಂತಿ ಸಿನಿಮಾ ಇದೆ ಜನವರಿ 26ರಂದು ಗಣರಾಜ್ಯೋತ್ಸವದ ದಿನದಂದು ದೇಶವಿದೇಶಗಳಲ್ಲಿ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯನ್ನು ಕಾಣಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾದ ಪ್ರೆಸ್ ಮೀಟಿಂಗ್ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಮಾಧ್ಯಮ ಮಿತ್ರರಿಗೆ ಬಿಚ್ಚಿಟ್ಟಿದ್ದಾರೆ ಅದರಲ್ಲಿ ಸಿನಿಮಾದ ಬಗ್ಗೆ ಕೂಡ ಮಾತನಾಡಿದ್ದಾರೆ.
ಹೌದು ಮಿತ್ರರೇ ಡಿ ಬಾಸ್ ರವರು ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡುತ್ತಾ ಈ ಸಿನಿಮಾ ಖಾಸಗಿ ಹಾಗೂ ಸರಕಾರಿ ಶಾಲೆಗಳ ನಡುವಿನ ವ್ಯತ್ಯಾಸವನ್ನು ಹಾಗೂ ವಿದ್ಯೆಯ ಮಹತ್ವವನ್ನು ಸಾರುವ ಅಂತಹ ಸಿನಿಮಾ ಆಗಿದೆ ಎನ್ನುವುದಾಗಿ ಸಿನಿಮಾದ ಪ್ರಮುಖ ಥೀಮ್ ಅನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ತಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ 40 ರೂಪಾಯಿಯಿಂದ ಹೆಚ್ಚೆಂದರೆ 60 ರೂಪಾಯಿ ಸ್ಕೂಲ್ ಫೀಸ್ಗಾಗಿ ವರ್ಷಕ್ಕೆ ಕಟ್ಟುತ್ತಿದ್ದೆವು. ಆದರೆ ಈಗ ಅದು ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳುತ್ತಾ ತಮ್ಮ ಮಗನ ಉದಾಹರಣೆ ನೀಡುತ್ತಾರೆ.
ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್ ಸ್ಕೂಲ್ ಫೀಸ್ಗಾಗಿ ವರ್ಷಕ್ಕೆ ಬರೋಬ್ಬರಿ 8 ಲಕ್ಷ ರೂಪಾಯಿ ಹಣವನ್ನು ಕಟ್ಟುತ್ತಾರೆ ಎಂಬುದಾಗಿ ಇದೇ ಕ್ರಾಂತಿ ಸಿನಿಮಾದ ಪ್ರೆಸ್ ಮೀಟ್ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. ಕೇವಲ ವರ್ಷಕ್ಕೆ 8 ಲಕ್ಷ ಸ್ಕೂಲ್ ಫೀಸ್ ಕಟ್ಟುತ್ತಿರುವ ವಿಚಾರವನ್ನು ಕೇಳಿರುವ ಅಭಿಮಾನಿಗಳು ಹಾಗೂ ಮಾಧ್ಯಮ ಮಿತ್ರರು ಆಶ್ಚರ್ಯ ಚಕಿತರಾಗಿದ್ದಾರೆ ಎಂದು ಹೇಳಬಹುದಾಗಿದೆ.