ಸಾಮಾನ್ಯವಾಗಿ ಬಹುತೇಕ ಜನರಿಗೆ ಇತ್ತೀಚಿನ ದಿನಗಳಲ್ಲಿ ಅಸಿಡಿಟಿ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗೆ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಹಲವು ಔಷದಿ ಮಾತ್ರೆಗಳಿವೆ ಆದ್ರೆ ಪ್ರತಿದಿನ ಇಂಗ್ಲಿಷ್ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವಂತ ಕರಬೇವು ಬಳಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಇದರಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬಿರೋದಿಲ್ಲ.
ಅಸಿಡಿಟಿ ಗ್ಯಾಸ್ಟ್ರಿಕ್ ಆದ್ರೆ ಹೊಟ್ಟೆಯಲ್ಲಿ ನೋವು ಅಲ್ಲದೆ ಬೇರೆ ಬೇರೆ ತರಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅದರಿಂದ ಯಾವಾಗ ಮುಕ್ತಿ ಪಡೆಯಬೇಕು ಅನಿಸುತ್ತದೆ. ಆದ್ದರಿಂದ ಎಲ್ಲರಿಗು ಸುಲಭವಾಗಿ ಸಿಗುವಂತ ಕರಬೇವು ಬಳಸಿ ಅದರಿಂದ ಪರಿಹಾರ ಕಾಣಬಹುದು. ಕರಬೇವಿನ ಪುಡಿಯನ್ನು ಹೇಗೆ ತಯಾರಿಸಿಕೊಳ್ಳಬಹುದು ಅನ್ನೋದನ್ನ ಮುಂದೆ ನೋಡಿ, ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ, ಇದರ ಸದುಪಯೋಗ ಪಡೆದುಕೊಳ್ಳಲಿ.
ಕರಬೇವಿನ ಪುಡಿ ತಯಾರಿಸೋದು ಹೇಗೆ? ಮೊದಲು ಒಂದು ಬಟ್ಟಲು ಕರಿಬೇವು, ಮೆಣಸಿನಕಾಳು 10 ರಿಂದ 12 , ಜೀರಿಗೆ ಎರಡು ಚಮಚ. ಹಾಗು ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು ಇಷ್ಟು ತಗೆದುಕೊಂಡು ಕರಬೇವು ಪುಡಿ ತಯಾರಿಸಬೇಕು.
ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ನೋಡುವುದಾದರೆ, ಒಂದು ಬಟ್ಟಲು ಕರಿಬೇವನ್ನು ತಗೆದುಕೊಂಡು ಅದನ್ನು ನೀರಿನಲ್ಲಿ ಚನ್ನಾಗಿ ತೊಳೆದು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ, ಅದು ಚನ್ನಾಗಿ ಒಣಗಿದ ಮೇಲೆ ಜೀರಿಗೆ, ಕಾಳುಮೆಣಸು, ಉಪ್ಪು ಇವುಗಳನ್ನು ಕರಿಬೇವಿನ ಜೊತೆಗೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ. ನುಣ್ಣಗೆ ಪುಡಿಮಾಡಿಕೊಂಡ ಪುಡಿಯನ್ನು ನೀವು ಪ್ರತಿದಿನ ಊಟ ಮಾಡುವಾಗ ಬಳಸಿಕೊಳ್ಳಬಹುದು. ಈ ಪುಡಿಯನ್ನು ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಹಾಕಿಕೊಂಡು ಈ ಪುಡಿಯನ್ನು ಸಹ ಬಳಸಿಕೊಂಡು ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲದಂತೆ ನಿವಾರಿಸಿಕೊಳ್ಳಬಹುದಾಗಿದೆ.