ಮೊಸರು ಎಲ್ಲರಿಗೂ ಇಷ್ಟವಾಗುವಂತಹ ರುಚಿಕರವಾದ ಪದಾರ್ಥ. ಇದು ರುಚಿಕರವಾಗಿದೆ ಎಂದು ಬಹಳಷ್ಟು ಮಂದಿ ಯೆತ್ತೇಚ್ಚವಾಗಿ ತಿಂದು ಅನಾರೋಗ್ಯಕ್ಕೆ ತುತ್ತಾಗಿ ಬಿಡುತ್ತಾರೆ. ಮೊಸರು ಆರೋಗ್ಯಕರವೂ ಹೌದು ,ಅನಾರೋಗ್ಯಕರವೂ ಹೌದು. ಪ್ರತಿನಿತ್ಯ ತಮ್ಮ ಆಹಾರ ಪದ್ಧತಿಯಲ್ಲಿ ಮೊಸರನ್ನು ಕೂಡ ಸೇವಿಸುವುದು ಒಳ್ಳೆಯದು. ಮೊಸರಿನಲ್ಲಿ ಕ್ಯಾಲ್ಸಿಯಂ ವಿಟಮಿನ್ ಕ್ಯಾಲೋರಿ ಪ್ರೊಟೀನ್ ಗಳು ಸಮೃದ್ಧವಾಗಿ ಇರುವುದರಿಂದ ದೇಹಕ್ಕೆ ಸೂಕ್ತವಾದ ಪೋಷಣೆ ನೀಡುತ್ತದೆ. ಮೊಸರಿನ ಸೇವನೆಯಿಂದ ಸಾಕಷ್ಟು ಫಲಿತಾಂಶವನ್ನು ಪಡೆಯಬಹುದು.ಆದರೆ ಅದನ್ನು ಇತಿ ಮಿತಿಯಲ್ಲಿ ಸೇವಿಸಿದಾಗ ಆರೋಗ್ಯವನ್ನು ಚನ್ನಾಗಿ ಇಟ್ಟಿಕೊಳ್ಳಬಹುದು
ಮೊಸರಿನ ಪ್ರಯೋಜನ ಮತ್ತು ಮೊಸರನ್ನು ಹೇಗೆ ಬಳಸಬೇಕು ಯಾವ ಹೊತ್ತಿನಲ್ಲಿ ತಿನ್ನಬೇಕು ಮೊಸರನ್ನು ಯಾರು ತಿನ್ನಬೇಕು, ಯಾರ್ ತಿನ್ನಬಾರದು ಎಂಬುದನ್ನು ಆಯುರ್ವೇದ ಮತ್ತು ಮರ್ಮ ಚಿಕಿತ್ಸೆ ತಜ್ಞರಾದ ಡಾ ಪಿ.ಕೆ.ಪ್ರವೀಣ್ ಬಾಬು ಅವರು ತಿಳಿಸಿಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ ಬನ್ನಿ.
ಮೊದಲಿಗೆ ಮೊಸರಿನ ಗುಣಲಕ್ಷಣಗಳ ಬಗ್ಗೆ ತಿಳಿಯೋಣ.
ಮೊಸರು ಕಫವೃದ್ದಿಕರ ಇದು ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ.ಶೀತ ಪ್ರಕೃತಿಕರವಾದದ್ದು.
ಹೆಚ್ಚಿನ ದೈಹಿಕ ಶ್ರಮಿವಿಲ್ಲದೆ ಅಂದ್ರೆ ಎಸಿ ರೂಮಿನಲ್ಲಿ ಕೆಲ್ಸ ಮಾಡುವವರಿಗೆ ಮೊಸರು ಸೂಕ್ತಕರವಾದ ಆಹಾರವಲ್ಲ.ಹಾಗೂ ತಿನ್ನಲೇ ಬೇಕು ಎನ್ನುವವರು ಹೆಚ್ಚಿರುವ ಬಿಸಿಲಿನ ಅಂದ್ರೆ ಮಧ್ಯಾನ್ಹದ ಹೊತ್ತಲ್ಲಿ ಮಿತಿಯಾಗಿ ತಿನ್ನುವುದು ಸೂಕ್ತ.
ಸಂಜೆ ಹೊತ್ತಿನಲ್ಲಿ ತಂಡಿ ಹೆಚ್ಚಾಗುವ ಕಾರಣ ಸಂಜೆ ಹೊತ್ತಿನಲ್ಲಿ ಮೊಸರನ್ನು ಸೇವನೆ ಮಾಡಬಾರದು ಮೊದಲೇ ಶೀತದ ದೇಹವನ್ನು ಹೊಂದಿರುವ ಪುರುಷರು ಮಹಿಳೆಯರು ಸೇವನೆ ಮಾಡಿದ್ದಲ್ಲಿ ಶೀತಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಅಂದ್ರೆ ಅಸ್ತಮ ಅಲರ್ಜಿ ನೆಗಡಿ ಡಯಾಬಿಟಿಸ್ ಅಥವಾ ಶೀತಕ್ಕೆ ಸಂಬಂಧ ಪಟ್ಟ ಇತರ ಖಾಯಿಲೆಗಳು ಕಾಯಿಸಿಕೊಳ್ಳುತ್ತವೆ ಹಾಗಾಗಿ ಶೀತದ ದೇಹವನ್ನು ಹೊಂದಿರುವವರು ರಾತ್ರಿ ಹೊತ್ತು ತಿನ್ನದೇ ಇರುವುದು ಒಳ್ಳೆಯದು .ಪಿತ್ತ ದ ಸಮಸ್ಯೆ ಇರುವವರು ಕೂಡ ರಾತ್ರಿ ಹೊತ್ತು ಹಿತ ಮಿತವಾಗಿ ಬಳಸಿ ಮಧ್ಯಾನ್ಹದ ಹೊತ್ತಲ್ಲಿ ಬೇಕಾದ್ರೆ ಜಾಸ್ತಿ ತಿನ್ನಬಹುದು.ಸಾಮಾನ್ಯವಾಗಿ ಜನರು ಮೊಸರಿಗೆ ಉಪ್ಪು ಅಥವಾ ಸಕ್ಕರೆ ಸೇರಿಸಿ ಸೇವಿಸುತ್ತಾರೆ.ಹಾಗೆ ಸೇವಿಸುವುದು ಉಚಿತವಾಗಿದ್ದಲ್ಲ.
ಮೊಸರು ಒಂದು ಪ್ರೋಬೈಯೋಟಿಕ್. ಬ್ಯಾಕ್ಟೀರಿಯಗಳಲ್ಲಿ ಎರಡು ರೀತಿಯ ಬ್ಯಾಕ್ಟೀರಿಯಾಗಳು ಸುಸ್ಥಿತಿಯಲ್ಲಿ ಇರುತ್ತವೆ.
ಕೆಟ್ಟ ಬ್ಯಾಕ್ಟೀರಿಯ ನಮ್ಮ ದೇಹದಲ್ಲಿ ಅನಾರೋಗ್ಯವನ್ನು ಸೃಷ್ಟಿಸಿದರೆ ,ಒಳ್ಳೆ ಬ್ಯಾಕ್ಟೀರಿಯ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಸಹಾಯ ಮಾಡುತ್ತವೆ.ಉಪ್ಪಿನ ನೀರಿನಲ್ಲಿ ತರಕಾರಿಗಳನ್ನು ತೊಳೆಯುವುದು ಅದರಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯ ನಾಶವಾಗಲಿ ಎಂದು. ಹಾಗಿರುವಾಗ ಮೊಸರಿಗೆ ಉಪ್ಪು ಸೇರಿಸಿದರೆ ಅದರಲ್ಲಿ ಇರುವ ಒಳ್ಳೆ ಬ್ಯಾಕ್ಟೀರಿಯ ಕೂಡ ನಾಶ ಆಗಿ ಹೋಗುತ್ತದೆ.ಸಕ್ಕರೆಯ ಗುಣವೇ ಶೀತ . ಶೀತದ ಜೊತೆಗೆ ಕಫವನ್ನು ಹೆಚ್ಚಿಸುವ ಗುಣವಿರುವ ಶೀತದ ಗುಣವಿರುವ ಸಕ್ಕರೆಯನ್ನು ಬೆರೆಸಿ ರಾತ್ರಿ ಹೊತ್ತು ಸೇವಿಸುವುದರಿಂದ ಶೀತಕ್ಕೆ ಸಂಬಂಧ ಪಟ್ಟ ಖಾಯಿಲೆಗಳು ಉಲ್ಬಣಗೊಳ್ಳುತ್ತದೆ. ಹಾಗಾಗಿ ಮೊಸರಿಗೆ ಉಪ್ಪು ಅಥವಾ ಸಕ್ಕರೆಯನ್ನು ಸೇರಿಸಿ ಸೇವಿಸಬಾರದು. ರಾತ್ರಿ ಹೊತ್ತು ಮೊಸರು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ ಮಧ್ಯಾನ್ಹದ ಹೊತ್ತಲ್ಲಿ ಸೇವಿಸಿ.