ಎಲ್ಲಾ ವಿಧದ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಧೋನಿಯವರು ಮುಂದಿನ ದಿನಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಕೈಯಾಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಟ ಮುಂದುವರಿಸಲಿರುವ ಎಂ ಎಸ್ ಧೋನಿ ಜಾಹೀರಾತು ಕ್ಷೇತ್ರ, ಪ್ರಚಾರ ಕ್ಷೇತ್ರದ ರಾಯಭಾರಿಯಾಗಿ ಮುಂದುವರಿಯುತ್ತಾರೆ. ಈ ವರ್ಷದ ಐಪಿಎಲ್ ನಂತರ ಧೋನಿಯವರು ಸಾವಯವ ರಾಸಾಯನಿಕ ಉದ್ಯಮಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಿವೃತ್ತಿಯ ನಂತರ ಟೊಮೊಟೋ, ಹಾಲು ಮಾರುತ್ತಿರುವ ಧೋನಿ. ಸಾವಯವ ಕೃಷಿಗೆ ಆದ್ಯತೆ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ಗೆ ವಿದಾಯ ಹೇಳಿದ ನಂತರ, ಇದೀಗ ಅವರು ಹೈನುಗಾರಿಕೆ ಮತ್ತು ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿದ್ದಾರೆ. ಅವರು ರಾಂಚಿಯ ಬಳಿಯ ಧರ್ವಾದ ಹತ್ತಿರ ಸೇಂಬಾ ಎಂಬಲ್ಲಿ ತಮ್ಮ 55 ಎಕರೆ ಜಮೀನಿನಲ್ಲಿ ಕೃಷಿಯನ್ನು ಆರಂಭಿಸಿದ್ದು ಜೊತೆಗೆ ಹೈನುಗಾರಿಕೆಯನ್ನು ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಅವರು ತಮ್ಮ ಕೃಷಿ ಭೂಮಿಯಲ್ಲಿ ತರಕಾರಿಯನ್ನು ಬೆಳೆಯುತ್ತಿದ್ದು, ಅವರ ಕೃಷಿ ಭೂಮಿಯಲ್ಲಿ ಟಮೋಟೊ, ಎಲೆಕೋಸು, ಹೂಕೋಸು, ಬ್ರೋಕಲಿ ಇತ್ಯಾದಿ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಅದರಲ್ಲಿ ಟಮೋಟೋ ಬೆಳೆ ಈಗ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರತಿದಿನ ಅವರ ತೋಟದಲ್ಲಿ ಸುಮಾರು 80 ಕಿಲೋಗ್ರಾಂ ಗಳಷ್ಟು ಟೊಮೊಟೊವನ್ನು ಬಿಡಿಸಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದ್ದು, ಈ ಟೊಮೊಟೊಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಎನ್ನಲಾಗಿದೆ. ಪ್ರತಿದಿನ ಬೆಳಿಗ್ಗೆ ಬಹುಬೇಗ ಎಲ್ಲಾ ಟಮೋಟೋ ಕೂಡಾ ಮಾರಾಟವಾಗುತ್ತದೆ ಎನ್ನಲಾಗಿದೆ. ಧೋನಿ ಅವರ ಫಾರ್ಮ್ ಹೌಸ್ ನಲ್ಲಿ ಬೆಳೆದಿರುವ ಟಮೋಟೋ ಹಣ್ಣುಗಳನ್ನು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಯಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇದೇ ರೀತಿಯ ಸಾವಯವ ಕೃಷಿಯಿಂದ ಬೆಳೆಯಲಾದ ಹೂಕೋಸು ಕೂಡ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ರಾಂಚಿ ಜನರು ಧೋನಿ ಅವರ ತೋಟದ ಹೂಕೋಸಿನ ರುಚಿಯನ್ನು ಕೂಡ ಸವಿಯಲು ಕೆಲವೇ ದಿನಗಳಲ್ಲಿ ಸಾಧ್ಯವಾಗಲಿದೆ. ಪ್ರಸ್ತುತ ಧೋನಿ ಅವರ ತೋಟದಿಂದ ಮಾರುಕಟ್ಟೆಗೆ ಬರುವ ಟಮೋಟೋ ಬೆಲೆ ಪ್ರತಿ ಕಿಲೋಗ್ರಾಂಗೆ 40 ರೂಪಾಯಿಗಳು ಎನ್ನಲಾಗಿದೆ.
ಕೃಷಿಯ ಜೊತೆಗೆ ಹೈನುಗಾರಿಕೆ ಕೂಡ ಧೋನಿ ಅವರ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದು, ದಿನವೊಂದಕ್ಕೆ ಸುಮಾರು ಮುನ್ನೂರು ಲೀಟರ್ ಹಾಲನ್ನು ಉತ್ಪಾದನೆ ಮಾಡಲಾಗುತ್ತದೆ. ಈ ಹಾಲು ಕೂಡ ನೇರವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಹಾಲಿನ ಬೆಲೆ ಪ್ರತಿ ಲೀಟರ್ ಗೆ 55 ರೂ.ಗಳು ಎಂದು ನಿಗಧಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈ ಹಾಲಿಗೂ ಕೂಡ ಉತ್ತಮವಾದ ಬೇಡಿಕೆ ಇದೆ ಎನ್ನಲಾಗಿದೆ. ಧೋನಿಯವರ ಫಾರ್ಮ್ ಹೌಸ್ ನಲ್ಲಿ ಹುಟ್ಟು 70 ಹಸುಗಳು ಇವೆ. ಇದರಲ್ಲಿ ಭಾರತೀಯ ಮತ್ತು ಫ್ರಾನ್ಸ್ ನ ತಳಿಗಳನ್ನು ಕಾಣಬಹುದಾಗಿದ್ದು, ಇವೆಲ್ಲವುಗಳನ್ನು ಕೂಡಾ ಪಂಜಾಬ್ ನಿಂದ ಕೊಂಡು ತರಲಾಗಿದೆ ಎನ್ನಲಾಗಿದೆ. ಧೋನಿಯವರ ಗೋಶಾಲೆಯ ಜವಾಬ್ದಾರಿಯನ್ನು ಶಿವನಂದನ್ ಮತ್ತು ಆತನ ಪತ್ನಿ ಸುಮನಾ ಯಾದವ್ ವಹಿಸಿಕೊಂಡಿದ್ದಾರೆ. ಶಿವನಂದನ್ ಅವರು ಫಾರ್ಮ್ ಹೌಸ್ ಬಗ್ಗೆ ಮಾತನಾಡುತ್ತಾ ಈಗಾಗಲೇ ಇಲ್ಲಿಂದ ಬಂದ ಲಕ್ಷಗಟ್ಟಲೆ ಆದಾಯದ ಹಣವನ್ನು ಧೋನಿ ಅವರ ಅಕೌಂಟ್ಗೆ ಹಾಕಿರುವುದಾಗಿ ಹೇಳಿದ್ದಾರೆ. ಅಲ್ಲದೇ ಧೋನಿ ಅವರಿಗೆ ಕೂಡ ಸಾವಯವ ಪದ್ಧತಿಯಲ್ಲಿ ನಡೆಯುತ್ತಿರುವ ಕೃಷಿ ಬಗ್ಗೆ ಹಾಗೂ ಫಾರ್ಮ್ ಹೌಸ್ ನಲ್ಲಿ ನಡೆಯುವ ಹೈನುಗಾರಿಕೆ ಬಗ್ಗೆ ಕೂಡಾ ಬಹಳ ಆಸಕ್ತಿಯಿದೆ ಎಂದು ತಿಳಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರು ರಾಂಚಿಯಲ್ಲಿ ಇರುವಂತಹ ದಿನಗಳಲ್ಲಿ ತಪ್ಪದೇ ಪ್ರತಿ ಎರಡು, ಮೂರು ದಿನಗಳಿಗೊಮ್ಮೆ ತಮ್ಮ ಫಾರ್ಮ್ ಹೌಸ್ ಗೆ ಭೇಟಿ ನೀಡುತ್ತಾರೆ ಹಾಗೂ ಅಲ್ಲಿ ಸಮಯವನ್ನು ಕಳೆಯುತ್ತಾರೆ. ಇನ್ನು ಫಾರ್ಮ್ ಹೌಸ್ ನಲ್ಲಿ ಬೆಳೆಯುವ ತರಕಾರಿ ಹಾಗೂ ಉತ್ಪಾದನೆ ಮಾಡುವ ಹಾಲಿನ ಮಾರಾಟದಿಂದ ಬರುವ ಎಲ್ಲಾ ಹಣವನ್ನು ನೇರವಾಗಿ ಧೋನಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಅವರು ಬಿಡುವಿನ ವೇಳೆ ಗೋಶಾಲೆಯಲ್ಲಿರುವ ಹಸುಗಳ ಜೊತೆಗೆ ಕೂಡ ಸಮಯವನ್ನು ಕಳೆಯಲು ಇಷ್ಟ ಪಡುತ್ತಾರೆ ಇಂದು ಗೋಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶಿವನಂದನ್ ಹೇಳುತ್ತಾರೆ.
ಧೋನಿ ಮತ್ತು ಇತರ ಕ್ರಿಕೆಟರ್ ಗಳ ವ್ಯವಸ್ಥಾಪಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರ್ಕ ಸ್ಪೋರ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮಿಹಿರ್ ದಿವಾಕರ್, ನಿಯೊ ಗ್ಲೋಬಲ್ ನಲ್ಲಿ ಸಹಭಾಗಿಯಾಗಲಿದ್ದಾರೆ ಧೋನಿ. ಮಾರುಕಟ್ಟೆಯಲ್ಲಿ ಈ ಕಂಪೆನಿ ಈಗಾಗಲೇ ಎರಡು ಉತ್ಪನ್ನಗಳನ್ನು ಬಿಟ್ಟಿದ್ದು ಅದನ್ನು ಮುಂದಿನ ದಿನಗಳಲ್ಲಿ 15ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ. ಧೋನಿಯವರು ನಮ್ಮ ಜೊತೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಲಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಮುಂದಿನ ಸೆಪ್ಟೆಂಬರ್ ನಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಧೋನಿಯವರು ತಮ್ಮ ಫಾರ್ಮ್ ಹೌಸ್ ನಲ್ಲಿ ಸಾವಯವ ರಾಸಾಯನಿಕ ಬಗ್ಗೆ ಪರೀಕ್ಷೆ ಮಾಡಿದ್ದಾರೆ ಎಂದು ಹೇಳುತ್ತಾರೆ. ನ್ಯೂ ಗ್ಲೋಬಲ್ ಮುಂಬೈ ಮತ್ತು ಗುಜರಾತ್ ನ ಭಾವನಗರದಲ್ಲಿ ಫ್ಯಾಕ್ಟರಿಗಳನ್ನು ಹೊಂದಿದೆ. ದೆಹಲಿಯಲ್ಲಿ ಕಚೇರಿಯಿದೆ. ಧೋನಿಯವರು ಇವುಗಳನ್ನು ನೋಡಿ ಖುಷಿಯಾಗಿದ್ದಾರೆ. ಧೋನಿಯವರು ನಮ್ಮ ಕಂಪೆನಿ ಜೊತೆ ಬೃಹತ್ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಐಪಿಎಲ್ ನಂತರ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದರು.