ಪರಮ ಪವಿತ್ರವಾದ ಗೋವುಗಳನ್ನ ನಾವು ಪೂಜಿಸುತ್ತ ಬಂದಿರುವುದು ಅನಾಧಿಕಾಲದಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯ ಆಗಿದೆ. ಸಂಪೂರ್ಣವಾಗಿ ಗೋವುಗಳನ್ನ ವಿಷ್ಣುಮಯ ಅಂತ ಹೇಳುತ್ತೇವೆ. ಗೋವು ವಿರಾಟರೂಪಿ ಭಗವಂತನ ವಿಶ್ವ ಸ್ವರೂಪವಾಗಿದ್ದು ಎಲ್ಲಾ ರೀತಿಯ ಪಾಪಗಳಿಂದ ಮುಕ್ತವಾಗಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಲು ಗೋವು ಭೂಮಿಯ ಮೇಲಿರುವ ದೇವತೆ ಆಗಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಗೋವಿನ ಪ್ರತಿ ಕಣದಲ್ಲೂ 14 ಲೋಕಗಳು ನಡೆಸುತ್ತಿರುವ ಪ್ರತೀ ಶಾಖೆಯ ಕರ್ತವ್ಯವನ್ನು ಮಾಡುತ್ತಿರುವ 33 ಕೋಟಿ ದೇವತೆಗಳು ಅನೇಕ ಸ್ಥಳಗಳಲ್ಲಿ ನೆಲೆಸಿವೆ ಎಂದು ವೇದಗಳು ಸಾರುತ್ತಿವೆ. ಅಂದರೆ ಅಖಿಲ ಬ್ರಹ್ಮಾಂಡವನ್ನು ಸಲಹುತ್ತಿರುವ ದೇವರುಗಳ ಆ ವಾಸ ಸ್ಥಾನವು ಗೋವಿನ ಶರೀರ ಆಗಿದ್ದು ಗೋವು ಚಲಿಸುವ ದೇವತೆಯಾಗಿದ್ದು ದೇವಾಲಯವಾಗಿದ
ಗೋವು ಚಲಿಸುವ ತೀರ್ಥಾಲಯ, ಚಲಿಸುವ ಚಿಕಿತ್ಸಾಲಯ ಆಗಿದ್ದು ಕರ್ಮ ವಿಪಾಕವನ್ನು ಹೋಗಲಾಡಿಸಿ ಮನುಷ್ಯನನ್ನು ಸುಖಿಯಾಗಿ ಇಡುತ್ತದೆ ಕಾಮಧೇನು. ಆದ್ದರಿಂದ ಕಾಮಧೇನುವನ್ನು, ಗೋವನ್ನು ಅತ್ಯಂತ ಭಕ್ತಿಯಿಂದ ಪೂಜಿಸುವ ಸಂಪ್ರದಾಯ ನಮ್ಮದು. ಜನನದಿಂದ ಮರಣದವರೆಗೂ ಮಾನವನಿಗೆ ಅಮೃತ ಸದೃಶವಾದ ಹಾಲನ್ನು ಉಣಿಸುವಂತಾ ಮಾತೇ ಗೋವು. ಅಂತಹ ಗೋವನ್ನು ನಾವು ಭಕ್ತಿಯಿಂದ ಪೂಜಿಸಿದರೆ ಅನಂತ ಅನಂತ ಪುಣ್ಯಕೋಟಿಯ ಫಲ ದೊರೆಯುತ್ತದೆ. ಅದಕ್ಕಾಗಿ ನಾವು ಮಾಡಬೇಕಿರುವುದು ಇಷ್ಟೇ. ಯಥಾನು ಶಂತಿ ಗೋವುಗಳಿಗೆ ಆಹಾರ ನೀಡಿ, ಗೋವುಗಳನ್ನ ರಕ್ಷಣೆ ಮಾಡಬೇಕಿದೆ. ಗೋವಿನ ಹಾಲು ಮಾತ್ರವೇ ಅಮೃತವಲ್ಲ. ಗೋಮಯ, ಗೋಮೂತ್ರಗಳು ಕೂಡಾ ಔಷಧೀಯ ರೂಪದಲ್ಲಿ ನಮಗೆ ಉಪಯೋಗ ಆಗುತ್ತವೆ ಎನ್ನುವುದು ಅಷ್ಟೇ ಸತ್ಯವಾಗಿದೆ.
ಇನ್ನೂ ಗೋವನ್ನು ಪೂಜಿಸುವುದರಿಂದ ಸಾಕಷ್ಟು ಲಾಭಗಳು, ಪುಣ್ಯಗಳು ಒದಗಿ ಬರುತ್ತವೆ ಎಂದು ಅನಾಧಿ ಕಾಲದಿಂದಲೂ ನಾವು ಗೋವನ್ನು ಪೂಜಿಸುತ್ತ ಬಂದಿದ್ದೇವೆ. ಹಾಗಿದ್ದಾಗ ನಾವು ಗೋವಿಗೆ ಇದೊಂದು ವಸ್ತುವನ್ನು ತಿನ್ನಿಸಿದರೆ ನಾವು ಕೋಟೀಶ್ವರರಾಗುತ್ತೇವೆ ಅಷ್ಟ ಐಶ್ವರ್ಯ ನಮಗೆ ದೊರೆಯುತ್ತದೆ ಎನ್ನುತ್ತಾರೆ ಆಧ್ಯಾತ್ಮಿಕ ಚಿಂತಕರು. ಹಾಗಾದ್ರೆ ಅದು ಯಾವುದು ಅನ್ನೋದನ್ನ ನೋಡೋಣ. ಪ್ರತೀ ಒಬ್ಬರೂ ಗೋವನ್ನು ಸಂರಕ್ಷಿಸಿಕೊಳ್ಳಬೇಕು ಗೋಚನ್ನು ಪೂಜಿಸಬೇಕು ಪ್ರತೀ ನಿತ್ಯ ಎಲ್ಲೇ ಗೋವು ಕಾಣಿಸಿಕೊಂಡರೂ ಅದಕ್ಕೆ ನಮಸ್ಕರಿಸಬೇಕು ಎನ್ನುವುದು ಮನೆಯಲ್ಲಿ ಹಿರಿಯರು ಹೇಳುತ್ತಿರುವಂತಹ ಕಿವಿಮಾತು . ಇನ್ನು ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ಗೋವನ್ನು ಪೂಜಿಸಿ ಆಹಾರ ನೀಡುವಂತದ್ದನ್ನು ಕಾಣುತ್ತೇವೆ.
ಕೆಲವು ಜನ ಪಟ್ಟಣದಲ್ಲಿ ಇದನ್ನು ಮಾಡಲು ಸಾಧ್ಯ ಇರುವುದಿಲ್ಲ. ಆದರೆ ಗೋಶಾಲೆಗೆ ತೆರಳಿ ಮಮ್ಮಾ ಯಥಾನು ಶಕ್ತಿ ಪೂಜೆಯನ್ನು ಮಾಡಿ ಗ್ರಾಸವನ್ನು ನೀಡಲು ಸಾಧ್ಯ ಆಗೇ ಆಗತ್ತೆ. ಹಾಗಾದ್ರೆ ಗೋವಿಗೆ ಈ ವಸ್ತುವನ್ನು ನೀಡಿ ನಮ್ಮ ಮನೆಯಲ್ಲಿ ಧನಕನಕಗಳು ತುಂಬಿಕೊಳ್ಳುತ್ತವೆ. ಗೋವಿಗೆ ನೇರವಾಗಿ ಅಲ್ಲದೆ ಬೇರೆ ಇನ್ಯಾವುದೇ ರೂಪದಲ್ಲಿ ಆಗಲಿ ಉಪ್ಪನ್ನು ನೀಡಬೇಕು. ಯಾವುದೇ ಆಹಾರದಲ್ಲೂ ಕೂಡ ಉಪ್ಪು ಸೇರಿಸಿ ಕೊಡಬಹುದು ಆದ್ರೆ ನೇರವಾಗಿ ಉಪ್ಪನ್ನ ಕೊಡಬಾರದು. ಹೀಗೆ ಯಾವುದೇ ಆಹಾರದ ಜೊತೆ ಉಪ್ಪುನ್ನು ಗೋವಿಗೆ ತಿನ್ನಿಸುತ್ತ ಬಂದರೆ ಮನೆಯಲ್ಲಿ ಧನಕನಕಗಳು ತುಂಬಿಕೊಳ್ಳುತ್ತವೆ. ಉಪ್ಪನ್ನು ನೀಡಬೇಕು ಅಂದರೆ ಕೆಜಿ ಅಷ್ಟು ಕೊಡವುದೂ ಅಲ್ಲ ಸ್ವಲ್ಪ ಪ್ರಮಾಣದಲ್ಲಿ ನೀಡಬೇಕು. ಇದರಿಂದ ಗೋವು ಸಂತೃಪ್ತಗೊಂಡು ಹರಸುತ್ತದೆ ಎನ್ನುತ್ತಾರೆ.