ನಮ್ಮ ದೇಶದಲ್ಲಿ ಹೈನುಗಾರಿಕೆಯನ್ನು ಹೆಚ್ಚಾಗಿ ಕಾಣಬಹುದು, ಕೆಲವರ ಕುಲಕಸುಬು ಹೈನುಗಾರಿಕೆಯಾಗಿದೆ. ಹೈನುಗಾರಿಕೆ ಮಾಡಬೇಕೆಂದರೆ ಕೆಲವು ಅಂಶಗಳನ್ನು ತಿಳಿದುಕೊಳ್ಳಬೇಕು. ಹೈನುಗಾರಿಕೆ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಡೈರಿ ಕನ್ನಡ ಎಂಬ ಅಪ್ಲಿಕೇಶನ್ ಇದ್ದು ಅದನ್ನು ಹೇಗೆ ಡೌನ್ಲೋಡ್ ಮಾಡಬೇಕು ಹಾಗೂ ಅದರಲ್ಲಿ ಯಾವೆಲ್ಲಾ ಮಾಹಿತಿಗಳು ಸಿಗುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಹಸುಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಪಡೆಯಲು ಮೊಬೈಲ್ ನಲ್ಲಿ ಪ್ಲೆ ಸ್ಟೋರಿಗೆ ಹೋಗಿ ಡೈರಿ ಕನ್ನಡ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದನ್ನು ಓಪನ್ ಮಾಡಿ ಡೋಂಟ್ ಶೋ ಅಗೇನ್ ಟಿಕ್ ಮಾಡಿ ಲೊಕೇಶನ್ನು ಎಕ್ಸೆಸ್ ಮಾಡಿಕೊಂಡ ನಂತರ ನಮ್ಮ ಹೆಸರು, ಫೋನ್ ನಂಬರ್, ರಾಜ್ಯ, ಜಿಲ್ಲೆ, ತಾಲೂಕನ್ನು ಸೆಲೆಕ್ಟ್ ಮಾಡಿ ಕಂಟಿನ್ಯೂ ಕ್ಲಿಕ್ ಮಾಡಬೇಕು. ಈ ಅಪ್ಲಿಕೇಶನ್ ಅನ್ನು ಓಪನ್ ಮಾಡಿದಾಗ ಮೊದಲು ತಳಿಗಳು ವಿಭಾಗವಿದೆ ಇದರಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಲು ಯಾವ ತಳಿಯ ಆಕಳು ಮತ್ತು ಎಮ್ಮೆಗಳನ್ನು ಸಾಕಬೇಕು ಎಂಬುದು ಮುಖ್ಯವಾಗುತ್ತದೆ.
ಹಸುವಿನ ತಳಿಗಳಲ್ಲಿ 6 ತಳಿಗಳ ಹಸುಗಳನ್ನು ಸಾಕಬಹುದು ಅವುಗಳೆಂದರೆ ಗಿರ್, ರೆಡ್ ಸಿಂಧಿ, ಸಾಯಿವಾಲ್, ದೇವಣಿ, ಎಚ್ಎಫ್, ಜರ್ಸಿ. ಯಾವ ತಳಿಯ ಹಸುಗಳು ಹೇಗೆ ಎಂಬ ಮಾಹಿತಿಯನ್ನು ವಿಡಿಯೋ ಮೂಲಕ ಕೊಟ್ಟಿದ್ದಾರೆ ನೋಡಿ ತಿಳಿದುಕೊಳ್ಳಬಹುದು ಅಲ್ಲದೇ ಯಾವ ತಳಿಯ ಆಕಳು ಹೆಚ್ಚು ಲಾಭ ಕೊಡುತ್ತದೆ ಎಂಬ ಮಾಹಿತಿಯನ್ನು ಸಹ ಇಲ್ಲಿ ನೋಡಬಹುದು. ಅದೇ ರೀತಿ ಎಮ್ಮೆಗಳಲ್ಲಿ ಸಾಕಷ್ಟು ತಳಿಗಳು ಇರುತ್ತದೆ. ಎಮ್ಮೆಗಳಲ್ಲಿ ಯಾವ ತಳಿಯ ಎಮ್ಮೆಗಳನ್ನು ಸಾಕಬೇಕು ಎಂಬುದರ ಮಾಹಿತಿಯನ್ನು ಕೊಟ್ಟಿದ್ದಾರೆ. ಹಸುಗಳಿಗೆ ಬೇಧಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಸಂವರ್ಧನೆ ಎಂಬ ವಿಭಾಗದಲ್ಲಿ ಹಸುವಿನ ಬೇಧಿಯ ಲಕ್ಷಣವನ್ನು ಯಾವ ರೀತಿ ಪತ್ತೆಹಚ್ಚಬೇಕು ಎಂಬುದನ್ನು ವಿಡಿಯೋ ಮೂಲಕ ತೋರಿಸಲಾಗಿದೆ. ಹಸುವಿಗೆ ಯಾವ ಸಮಯದಲ್ಲಿ ಕೃತಕ ಗರ್ಭಧಾರಣೆ ಮಾಡಿಸಬೇಕು ಅದರ ಪ್ರೋಸೆಸ್ ಹೇಗಿರುತ್ತದೆ ವಿಡಿಯೋದಲ್ಲಿ ವಿವರಣೆ ಕೊಟ್ಟಿದ್ದಾರೆ. ನಂತರ ಹೈನುಗಾರಿಕೆ ಎಂಬ ವಿಭಾಗದಲ್ಲಿ ಹಸುಗಳ ಆಯ್ಕೆಯ ಬಗ್ಗೆ ಹಸುಗಳನ್ನು ಖರೀದಿ ಮಾಡಬೇಕಾದರೆ ಹೆಚ್ಚಿನ ಲಾಭ ಅಂದರೆ ಅಧಿಕ ಹಾಲು ಕೊಡುವ ಹಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ನೋಡಬಹುದು.
ಕೊಟ್ಟಿಗೆ ನಿರ್ವಹಣೆ ವಿಭಾಗದಲ್ಲಿ ಕೊಟ್ಟಿಗೆಯ ರಚನೆ ಹಾಗೂ ಕೊಟ್ಟಿಗೆ ಪ್ರಕಾರಗಳ ಬಗ್ಗೆ ಮಾಹಿತಿ ತಿಳಿಯಬಹುದು. ಹಸುಗಳನ್ನು ಕಟ್ಟುವ ಸ್ಥಳವನ್ನು ಕೊಟ್ಟಿಗೆ ಎನ್ನುತ್ತೇವೆ. ಕೊಟ್ಟಿಗೆ ರಚನೆ ಹೇಗಿರಬೇಕೆಂದರೆ ಕೊಟ್ಟಿಗೆಗೆ ಗಾಳಿ-ಬೆಳಕು ಸರಿಯಾಗಿ ಬರಬೇಕು, ಹುಲ್ಲು ನೀರಿಗೆ ವ್ಯವಸ್ಥೆ ಇರಬೇಕು ಇದರಿಂದ ಹಸುವಿನ ಆರೋಗ್ಯ ಉತ್ತಮವಾಗಿರುತ್ತದೆ. ಕೊಟ್ಟಿಗೆಯಲ್ಲಿ ಹಲವು ಪ್ರಕಾರಗಳು ಇರುತ್ತದೆ ಮಣ್ಣಿನ ಕೊಟ್ಟಿಗೆ, ಸಿಮೆಂಟ್ ಕೊಟ್ಟಿಗೆ, ಕಲ್ಲಿನ ಕೊಟ್ಟಿಗೆಯೆಂದು ಹಲವು ಪ್ರಕಾರಗಳಿವೆ. ಆಹಾರ ನಿರ್ವಹಣೆ ವಿಭಾಗದಲ್ಲಿ ಹಸುಗಳಿಗೆ ಆಹಾರ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಹಸು ಹಾಲು ಚೆನ್ನಾಗಿ ಕೊಡುತ್ತದೆ ಮತ್ತು ಹೆಚ್ಚು ಹೆಚ್ಚು ಕೊಡುತ್ತದೆ. ಹಸುಗಳಿಗೆ ಒಣ ಮೇವು, ಹಸಿಮೇವು, ದಾಣಿ, ನೀರನ್ನು ಸರಿಯಾದ ಸಮಯಕ್ಕೆ ಕೊಡಬೇಕು. ಹಾಲು ಕೊಡುವ ಹಸುಗಳಿಗೆ ಕ್ಯಾಲ್ಸಿಯಂ ಪೌಡರ್ ಹಾಗೂ ಇನ್ನಿತರ ಪೌಡರ್ ಗಳನ್ನು ವೈದ್ಯರ ಸಲಹೆಯೊಂದಿಗೆ ಮಿಕ್ಸ್ ಮಾಡಿ ಕೊಡಬಹುದು.
ರಾಸುಗಳ ನಿರ್ವಹಣೆ ವಿಭಾಗದಲ್ಲಿ ಹುಟ್ಟಿದ ಕರುಗಳಿಗೆ ಆರೈಕೆ ಮಾಡಬೇಕು ಅವುಗಳಿಗೆ ಮೊದಲು ನೀರನ್ನು ಕುಡಿಸಬೇಕು ನಂತರ ದೊಡ್ಡದಾಗುತ್ತಿದ್ದಂತೆ ಸಣ್ಣ ಸಣ್ಣ ಹುಲ್ಲುಗಳನ್ನು ಹಾಕಬೇಕು, ಇದರ ಜೊತೆಗೆ ಗರ್ಭಧಾರಣೆಯಾದ ಹಸುವನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಬಹುದು. ರೋಗ ಮತ್ತು ನಿರ್ವಹಣೆ ಎಂಬ ವಿಭಾಗದಲ್ಲಿ ರೋಗ ಮತ್ತು ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಹಸುವಿಗೆ ಯಾವ ಯಾವ ಖಾಯಿಲೆಗಳು ಬರುತ್ತದೆ, ರೋಗಗಳ ಲಕ್ಷಣಗಳನ್ನು ಹೇಗೆ ಗುರುತಿಸಿ ಪತ್ತೆಹಚ್ಚಬೇಕು, ಯಾವ ರೋಗ ಬಂದಾಗ ಯಾವ ರೀತಿಯ ಚಿಕಿತ್ಸೆ ಮಾಡಬೇಕು ಎಂಬ ಮಾಹಿತಿಯನ್ನು ತಿಳಿಯಬಹುದು. ನಂತರ ಇರುವುದು ಹೈನುಗಾರಿಕೆಯ ಆರ್ಥಿಕತೆ ಹೈನುಗಾರಿಕೆ ಕೆಲವು ಸೂತ್ರಗಳನ್ನು ಅನುಸರಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಹೇಗೆ ಗಳಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲಸಿಕೆಗಳು ವಿಭಾಗದಲ್ಲಿ ಹಸುಗಳಿಗೆ ನೆರಡಿ ರೋಗ, ಚಪ್ಪೆ ರೋಗ, ಗಂಟಲು ಬೇನೆ, ಕಾಲುಬಾಯಿ ರೋಗ, ಕಂದು ರೋಗ ಈ ಎಲ್ಲಾ ರೋಗಗಳಿಗೆ ಯಾವ ಯಾವ ಲಸಿಕೆಗಳನ್ನು ಹಾಕಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಲಸಿಕೆಗಳು ಎಂಬ ವಿಭಾಗದಲ್ಲಿ ನೋಡಬಹುದು. ಈ ಅಪ್ಲಿಕೇಶನ್ ನಲ್ಲಿ ಹಸುಗಳಿಗೆ ಸಂಬಂಧಿಸಿದ ಬಹಳಷ್ಟು ಮಾಹಿತಿಗಳನ್ನು ನೀಡಲಾಗಿದೆ ಎಲ್ಲರೂ ಓದಿ ಹೈನುಗಾರಿಕೆಯನ್ನು ಅಭಿವೃದ್ಧಿ ಮಾಡಿಕೊಳ್ಳಿರಿ.