ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬೆನ್ನಲ್ಲೆ ಕಳೆದ ಮಾರ್ಚ್ ತಿಂಗಳಿನಲ್ಲಿ ಅಡುಗೆ ಎಣ್ಣೆ, ಖಾದ್ಯ ತೈಲಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿತು ಇದರಿಂದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದರು. ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡ ಜನರಿಗೆ ಅಡುಗೆ ಎಣ್ಣೆ ಖರೀದಿಸುವುದು ಕಷ್ಟವಾಯಿತು. ಇದೀಗ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಅಡುಗೆ ಎಣ್ಣೆ ಬೆಲೆ ಇಳಿಕೆ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಕಳೆದ ಒಂದು ವರ್ಷದಿಂದ ಕಚ್ಚಾ ತೈಲ ಬೆಲೆ ಶೇ 95ರಷ್ಟು ಏರಿಕೆಯಾದರೆ, ಇನ್ನೊಂದೆಡೆ ವಿವಿಧ ಖಾದ್ಯ ತೈಲಗಳ ಬೆಲೆ ಶೇ 60 ರಷ್ಟು ಏರಿಕೆಯಾಗಿದೆ. ಇದೀಗ ಅಡುಗೆ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಖಾದ್ಯ ತೈಲಗಳ ಬೆಲೆ ಇಳಿಕೆಯು ಮುಂದಿನ ದಿನಗಳಲ್ಲಿ ಎಲ್ಲಾ ತೈಲ ಬೆಲೆ ಇಳಿಕೆಗೆ ಸಾಕ್ಷಿಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ ಕಳೆದ ಒಂದು ತಿಂಗಳಿನಿಂದ ಖಾದ್ಯ ತೈಲಗಳ ಬೆಲೆ ಇಳಿಕೆಯಾಗುತ್ತಿದೆ ಮತ್ತು ಕೆಲವು ವಿಭಾಗಗಳಲ್ಲಿ ತೈಲ ಬೆಲೆ ಶೇ 20 ರಷ್ಟು ಕುಸಿತವಾಗಿದೆ ಎಂದು ಸಚಿವಾಲಯ ಹೇಳಿದೆ.
ಖಾದ್ಯ ತೈಲದ ಬೆಲೆಗಳು ಕಾಂಪ್ಲೆಕ್ಸ್ ಸಂಖ್ಯೆಗಳ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ಅಂತರರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಉತ್ಪಾದನೆಯೂ ಸೇರಿದೆ. ದೇಶೀಯ ಉತ್ಪಾದನೆ ಮತ್ತು ಬಳಕೆಯ ನಡುವೆ ದೊಡ್ಡ ಅಂತರವಿರುವುದರಿಂದ ದೇಶವು ಹೆಚ್ಚಿನ ಪ್ರಮಾಣದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಸಚಿವಾಲಯ ತಿಳಿಸಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಗ್ರಾಹಕರು ಬೆಲೆ ಏರಿಕೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸುತ್ತಿರುವ ಕಾರಣ ಅಂಗಡಿ ಮಾಲೀಕರು ಬೆಲೆ ಏರಿಕೆ ಬಗ್ಗೆ ಗ್ರಾಹಕರು ಪ್ರಶ್ನೆ ಮಾಡುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.
ಲಾಕ್ ಡೌನ್ ಸಮಯದಲ್ಲಿ ಮಸಾಲೆಗಳು, ದ್ವಿದಳ ಧಾನ್ಯಗಳ ಬೆಲೆಯೂ ಹೆಚ್ಚಳವಾಯಿತು. ತೈಲದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಖಾದ್ಯ ತೈಲ ಬೆಲೆಯನ್ನು ಪ್ರತಿ ಲೀಟರ್ ಗೆ ರೂ 60 ರಿಂದ 70 ರೂ ಹೆಚ್ಚಿಸಲಾಗಿದೆ. ಈ ಮೊದಲು ರೂ 100 ವೆಚ್ಚವಿರುವ ತೈಲಕ್ಕೆ ಈಗ ರೂ 170 ರೂ ಕೊಡಬೇಕಾಗಿದೆ. ಬೆಲೆ ಏರಿಕೆ ಬಗ್ಗೆ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ ಎಂದು ದೆಹಲಿ ಅಂಗಡಿ ಮಾಲೀಕ ಡಿ.ಎಸ್.ಬಿಂದ್ರಾ ಕಳೆದ ವಾರ ಎಎನ್‍ಐಗೆ ಹೇಳಿದರು. ಲಾಕ್‍ಡೌನ್ ನಂತರ ಗ್ರಾಹಕರ ಖರೀದಿ ಸಾಮರ್ಥ್ಯವು 50% ರಷ್ಟು ಕುಸಿದಿದೆ ಎಂದು ಬಿಂದ್ರಾ ಎತ್ತಿ ತೋರಿಸಿದರು. ತೈಲ ಬೆಲೆ ಏರಿಕೆಯಾಗಿದ್ದು ಯಾವ ಎಣ್ಣೆಗೆ ಪ್ರತಿ ಲೀಟರ್ ಗೆ ಎಷ್ಟು ಬೆಲೆ ಎಂಬುದನ್ನು ಈ ಕೆಳಗೆ ನೋಡಬಹುದು. ಒಂದು ಲೀಟರ್ ಪಾಮ್ ಎಣ್ಣೆಗೆ ರೂ 115. ಒಂದು ಲೀಟರ್ ಸನ್‍ಫ್ಲವರ್ ಎಣ್ಣೆಗೆ ರೂ 157. ಒಂದು ಲೀಟರ್ ಸೋಯಾ ಎಣ್ಣೆಗೆ ರೂ 138. ಒಂದು ಲೀಟರ್ ಸಾಸಿವೆ ಎಣ್ಣೆಗೆ ರೂ 157. ಒಂದು ಲೀಟರ್ ಶೇಂಗಾ ಎಣ್ಣೆಗೆ ರೂ 174. ಒಟ್ಟಿನಲ್ಲಿ ಇದೀಗ ತೈಲ ಬೆಲೆ ಇಳಿಕೆಯಾಗಿರುವುದು ಎಲ್ಲಾ ವರ್ಗದವರಿಗೂ ಸಂತಸ ತಂದಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466