Congress guarantee: ಚುನಾವಣೆ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬರಲು ಮುಖ್ಯ ಕಾರಣಗಳು ಏನು ಎಂಬುದನ್ನು ನೋಡುವುದಾದರೆ ಮೊದಲನೆಯದಾಗಿ ಕಾಂಗ್ರೆಸ್ ಸರ್ಕಾರ (Congress Govt) ಕೊಟ್ಟಿರುವ 5 ಗ್ಯಾರಂಟಿ ಯೋಜನೆಗಳು.ಈ ಯೋಜನೆಗಳು ಜನರ ಮೇಲೆ ನೇರವಾಗಿ ಪರಿಣಾಮವನ್ನು ಬೀರಿತ್ತು ಏಕೆಂದರೆ ಬೆಲೆ ಏರಿಕೆಯಿಂದ ಬೇಸತ್ತ ಜನರು ಬದಲಾವಣೆಯನ್ನ ಬಯಸಿ ಕಾಂಗ್ರೆಸ್ ಸರ್ಕಾರವನ್ನು ಗೆಲ್ಲುವಂತೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರ ಕೇವಲ ಯೋಜನೆಯನ್ನು ರೂಪಿಸದೆ ಅವರ ಸಹಿ ಇರುವಂತಹ ಗ್ಯಾರಂಟಿ ಕಾರ್ಡುಗಳನ್ನು ಪ್ರತಿಯೊಬ್ಬರಿಗೂ ವಿತರಿಸಿತ್ತು ಆದರೆ ಇದೀಗ ಈ ವಿಷಯವಾಗಿ ಗೊಂದಲ ಉಂಟಾಗಿದೆ
ಅದೇನೆಂದರೆ ಈ ಯೋಜನೆಗಳನ್ನ ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಸರ್ಕಾರ ಮುಂದಾಗುತ್ತಾ ಅಥವಾ ಇಲ್ಲವಾ ಎನ್ನುವುದಾಗಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಪ್ರತಿಯೊಂದು ಭಾಷಣಗಳಲ್ಲಿಯೂ ಕೂಡ ಬಹಳ ಸ್ಪಷ್ಟವಾಗಿ ಈ ವಿಷಯದ ಬಗ್ಗೆ ಹೇಳಿಕೆಯನ್ನ ಕೊಡುತ್ತಿದ್ದರು ಇವೆಲ್ಲವನ್ನೂ ಸಹ ಜನರು ಗಂಭೀರವಾಗಿ ತೆಗೆದುಕೊಂಡಿದ್ದು ಈ ಯೋಜನೆಗಳು ಯಾವಾಗ ಜಾರಿಯಾಗುತ್ತವೆ ಎಂಬುದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆಅಷ್ಟೇ ಅಲ್ಲದೆ ರಾಜ್ಯದ ಜನತೆ, ಜೂನ್ ಒಂದನೇ ತಾರೀಖಿನಿಂದ ಕರೆಂಟ್ ಬಿಲ್ಲನ್ನ ಕಟ್ಟುವುದಿಲ್ಲ ಎಂದು ಹಠ ಹಿಡಿದು ಕೂತಿದ್ದಾರೆ.
ಜನರಿಗೆ ಬಹಳ ಮುಖ್ಯವಾಗಿ ಇರುವ ಅವಶ್ಯಕತೆ ಎಂದರೆ ಶಿಕ್ಷಣ ಮತ್ತು ಆರೋಗ್ಯ ಇವುಗಳ ವಿಚಾರದಲ್ಲಿ ಉಚಿತವಾಗಿ ದೊರಕುವ ಸೌಲಭ್ಯಗಳು ಜನರಿಗೆ ಉತ್ತಮ ರೀತಿಯಲ್ಲಿ ಸಹಕಾರಿಯಾಗುತ್ತಿದ್ದವು ಇದನ್ನು ಹೊರತುಪಡಿಸಿ ಇನ್ನೂ ಹೆಚ್ಚಿನದನ್ನ ನೀಡಬೇಕು ಎಂದಾದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಇರುವ ತೆರಿಗೆಯನ್ನು ಕಡಿಮೆ ಮಾಡಬಹುದಿತ್ತು ಆದರೆ ಇದ್ಯಾವುದನ್ನು ಮಾಡದೆ ಜನರನ್ನ ಆಕರ್ಷಿಸುವಂತಹ ಘೋಷಣೆಗಳನ್ನ ಕಾಂಗ್ರೆಸ್ ಸರ್ಕಾರ ಮಾಡಿತ್ತು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಇರುವ ಬಜೆಟ್ ಬಹಳ ಮುಖ್ಯ.
ಅಷ್ಟಕ್ಕೂ ಕೇಂದ್ರ ಸರ್ಕಾರದ ಒಂದು ವರ್ಷದ ಬಜೆಟ್ 3 ಲಕ್ಷ ಕೋಟಿ ಅದರಲ್ಲಿ ಈಗಾಗಲೇ ಇರುವಂತಹ ಕೊರತೆ 60580 ಕೋಟಿ ಹಾಗೂ ರಾಜ್ಯದ ಮೇಲೆ ಇರುವಂತಹ ಸಾಲ 5,61,000 ಕೋಟಿ ಹೀಗಿರುವಾಗ ಕಾಂಗ್ರೆಸ್ ನೀಡಿರುವ ಯೋಜನೆಗಳು ಆರ್ಥಿಕ ನಷ್ಟವನ್ನು ಉಂಟು ಮಾಡಲಿವೆ. ಮನೆಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳಷ್ಟು ಸಹಾಯಧನ ಇನ್ನು ನಿರುದ್ಯೋಗಿ ಪದವೀಧರ ಯುವಕರಿಗೆ ತಿಂಗಳಿಗೆ 3000 ಹಣ ನೀಡುತ್ತೇವೆ ಅಂತ ಹೇಳಿದ್ದಾರೆ ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ಒಂದುವರೆ ಸಾವಿರ ನೀಡುವುದಾಗಿ ಹೇಳಿದ್ದಾರೆ
ಇವೆಲ್ಲಾ ಬಹಳ ಅಪಾಯಕಾರಿ ಯೋಜನೆಗಳು ಏಕೆಂದರೆ ನಿರುದ್ಯೋಗಿಗಳು ಉದ್ಯೋಗ ಹುಡುಕುವಲ್ಲಿ ಆಳಶಿಗಳಾಗಬಹುದು. ಹಾಗೆ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಕೂಡ ಭರವಸೆ ನೀಡಿದ್ದಾರೆ ಈ ವಿಚಾರ ಸರ್ಕಾರಕ್ಕೆ ಅಷ್ಟೇನು ಹೊರೆಯನ್ನು ಉಂಟುಮಾಡುವುದಿಲ್ಲ ಇನ್ನು ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇದರ ಜೊತೆಗೆ ಪ್ರತಿ ಮನೆಗೆ 200 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ಪೂರೈಕೆ.
ಒಟ್ಟಾರೆಯಾಗಿ ಈ ಎಲ್ಲಾ ಯೋಜನೆಗಳಿಗೆ 62 ಸಾವಿರ ಕೋಟಿ ಬಜೆಟ್ ಅವಶ್ಯಕತೆ ಇದೆ ಆದ್ದರಿಂದ ಇವುಗಳನ್ನು ಜಾರಿಗೆ ತರಲು ರಾಜ್ಯದ ಸಾಲವನ್ನ ಹೆಚ್ಚಿಗೆ ಮಾಡಬೇಕಾಗುತ್ತದೆ ಇದರಿಂದ ಆರ್ಥಿಕವಾಗಿ ಸುಸ್ಥಿರವಾಗಿರುವಂತಹ ನಮ್ಮ ರಾಜ್ಯದ ಪರಿಸ್ಥಿತಿ ಹದಗಿಡುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಸುಸ್ಥಿರವಾಗಿಟ್ಟುಕೊಳ್ಳುವುದು ಸರ್ಕಾರದ ಮುಖ್ಯ ಕರ್ತವ್ಯವಾಗಿರುತ್ತದೆ ಆದ್ದರಿಂದ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಹೊಸ ಯೋಜನೆ ಗಳನ್ನು ಜಾರಿಗೆ ತರಬೇಕು.