ಸಾಮಾನ್ಯವಾಗಿ ಗಣಿಕೆ ಸೊಪ್ಪನ್ನು ಎಲ್ಲರೂ ನೋಡಿರುತ್ತಾರೆ, ಯಾಕಂದ್ರೆ ಗ್ರಾಮೀಣ ಭಾಗದ ಜನರು ಗಣಿಕೆ ಸೊಪ್ಪನ್ನು ಸರ್ವೇ ಸಾಮಾನ್ಯವಾಗಿ ಸಾಂಬಾರು ಮಾಡಲು ಉಪಯೋಗಿಸುತ್ತಾರೆ. ಗಣಿಕೆ ಸೊಪ್ಪಿನ ಸಾಂಬಾರಿನ ರುಚಿಯೇ ಬೇರೆ ಈ ಗಣಿಕೆ ಸೊಪ್ಪಿನ ಗಿಡವನ್ನು ಯಾರೂ ಬೆಳೆಯಬೇಕಿಲ್ಲ ಅದು ತಾನಾಗಿಯೇ ಹುಟ್ಟಿರುತ್ತದೆ ಹೀಗೆ ಗಣಿಕೆ ಸೊಪ್ಪು ಬರಿಯ ಸಾಂಬಾರು ಮಾಡಲು ಮಾತ್ರವಲ್ಲದೆ ದೇಹದಮೇಲೆ ಆಗುವ ಸಮಸ್ಯೆಗಳಿಂದ ಹಿಡಿದು ಜ್ವರ ಕೆಮ್ಮು ಶೀತ ಎಲ್ಲದ್ದಕ್ಕೂ ರಾಮಭಾಣ. ಈ ಅದ್ಭುತ ಸೊಪ್ಪು ಹಾಗಾಗಿ ಆಯುರ್ವೇದ ಪದ್ದತಿಯಲ್ಲಿ ಇದನ್ನು ವೈದ್ಯಕೀಯ ಚಿಕಿತ್ಸೆಗೂ ಸಹ ಉಪಯೋಗಿಸಲಾಗುತ್ತದೆ, ಈ ಗಿಡದ ಹಣ್ಣಿನಲ್ಲಿ ಸತು ರಂಜಕ ಹಾಗೂ ಕಬ್ಬಿಣದ ಅಂಶಗಳು ಹೆಚ್ಚಾಗಿರುವುದಲ್ಲದೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಹೆರಳವಾಗಿರುತ್ತವೆ. ಹಾಗಾಗಿಯೇ ಈ ಸಸ್ಯವು ಸಂಜೀವಿನಿಯಂತೆ ಭಾಸವಾಗುತ್ತದೆ
ಆದ್ದರಿಂದಲೇ ಈ ಸೊಪ್ಪನ್ನು ಹಲವಾರು ಸಮಸ್ಯೆಗಳಿಗೆ ಔಷದಿಯಾಗಿ ಬಳಸಲಾಗುತ್ತದೆ ಹಾಗಾದ್ರೆ ಈ ಗಣಿಕೆ ಸೊಪ್ಪಿನ ಆರೋಗ್ಯಕರ ಮಾಹಿತಿಯನ್ನು ತಿಳಿಯೋಣ ಬನ್ನಿ.
ಗಣಿಕೆ ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಅಲ್ಲದೇ ಮಲಬದ್ದತೆ ರಕ್ತದೊತ್ತಡ ಅಜೀರ್ಣ ಇರುವವರಿಗೂ ಕೂಡ ಇದು ಉತ್ತಮ ಆಹಾರವಾಗಿದೆ ಮತ್ತು ಈ ಗಣಿಕೆ ಸೊಪ್ಪನ್ನು ಉಪಯೋಗಿಸುವುದರಿಂದ ಬೊಜ್ಜು ಕರಗಿಸಿ ಸಣ್ಣಗಾಗಲುಬಹುದು ಮತ್ತು ಹೊಟ್ಟೆ ಹಸಿವೆ ಆಗದೆ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಸೊಪ್ಪನ್ನು ಬಳಸುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಸಾಗಿ ಸರಿಯಾದ ಸಮಯಕ್ಕೆ ಹೊಟ್ಟೆ ಹಸಿಯಲು ಪ್ರಾರಂಭಿಸುತ್ತದೆ, ಹಾಗೂ ಗಣಿಕೆ ಸೊಪ್ಪಿನ ಹಣ್ಣುಗಳನ್ನು ತಿನ್ನುವುದರಿಂದ ಜ್ವರ ಬಾಯಿ ಹುಣ್ಣು ಹಾಗೂ ಯಕೃತ್ತಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಅಲ್ಲದೇ ಈ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆಸ್ತಮಾ ಮತ್ತು ಬಾಯಾರಿಕೆ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ.
ಗಣಿಕೆ ಸೊಪ್ಪನ್ನು ಸೇವಿಸುವುದರಿಂದ ಪಿತ್ತ ಶಮನವಾಗುತ್ತದೆ ಮತ್ತು ಗಣಿಕೆ ಸೊಪ್ಪಿನ ಪಲ್ಯ ಅಥವಾ ಸಾರನ್ನು ಸೇವಿಸುವುದರಿಂದ ದೀರ್ಘ ಕಾಲದಿಂದ ಕಾಡುತ್ತಿರುವ ಬಾಯಿ ಹುಣ್ಣು ನಿವಾರಣೆಯಾಗುತ್ತದೆ ಅಲ್ಲದೇ ನಿಯಮಿತವಾಗಿ ಗಣಿಕೆ ಸೊಪ್ಪನ್ನು ಸೇವಿಸುತ್ತಾ ಬಂದರೆ ಮೂಲವ್ಯಾದಿ ನಿವಾರಣೆಯಾಗುವುದಲ್ಲದೆ ಬಿಸಿಲಿನ ತಾಪದಿಂದ ಮೂಗಿನಲ್ಲಿ ರಕ್ತ ಸೋರುವಿಕೆಯನ್ನು ತಡೆಗಟ್ಟುತ್ತದೆ ಹಾಗೂ ಗಣಿಕೆ ಸೊಪ್ಪಿನ ಎಲೆಗಳೊಂದಿಗೆ ಅರಿಶಿನ ಸೇರಿಸಿ ಅರೆದು ಬಿಸಿಮಾಡಿ ನೋವಿರುವ ಜಾಗಗಳಿಗೆ ಲೇಪಿಸುವುದರಿಂದ ಊತ ಮತ್ತು ನೋವು ಎರಡೂ ಶಮನವಾಗುತ್ತದೆ.