ಬಿಲ್ವಪತ್ರೆಯು ಶಿವನಿಗೆ ಇಷ್ಟವಾದ ಮತ್ತು ಪೂಜೆಗೆ ಶ್ರೇಷ್ಟವಾದ ಒಂದು ಪತ್ರೆಯಾಗಿದೆ ಒಮ್ಮೆ ಶಿವನ ಅರ್ಚನೆಗೆ ಬಳಸಿದ ಬಿಲ್ವಪತ್ರೆಯನ್ನು ಮರು ಐದು ಬಾರಿ ಬಳಸಬಹುದೆಂದು ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖವಿದೆ, ಹಾಗಾಗಿ ಬಿಲ್ವ ಪತ್ರೆಯು ಒಂದು ಪವಿತ್ರ ಪುಷ್ಪಕ್ಕೆ ಸಮಾನವಾಗಿದೆ. ಬಿಲ್ವಪತ್ರೆಯನ್ನು ಬರೀ ಪೂಜೆಗೆ ಮಾತ್ರವಲ್ಲದೆ ಈ ಬಿಲ್ವಪತ್ರೆಯು ಹಲವಾರು ಅನಾರೋಗ್ಯದ ಸಮಸ್ಯೆಗಳಿಗೂ ಕೂಡ ರಾಮಭಾಣದಂತೆ ಕೆಲಸ ಮಾಡುತ್ತದೆ ಹಾಗೆ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಬಿಲ್ವಪತ್ರೆಯ ಮರದ ಬೇರು ತೊಗಟೆ ಎಲೆಕಾಯಿ ಹೀಗೆ ಇಡೀ ಬಿಲ್ವಪತ್ರೆಯ ಮರವೇ ಔಷದಿಗಳ ಆಗರವಾಗಿದೆ ಹಾಗಾದ್ರೆ ಬಿಲ್ವಪತ್ರೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಉಪಹಾರವನ್ನು ತಿನ್ನುವ ಮೊದಲು ಪ್ರತಿನಿತ್ಯ ಈ ಬಿಲ್ವಪತ್ರೆಯ ಎಲೆಗಳನ್ನು ನಿರಂತರವಾಗಿ ಸೇವಿಸುತ್ತಾ ಬಂದರೆ ಸಕ್ಕರೆ ಕಾಯಿಲೆ ಇರುವವರು ಇಂದೆಂದೂ ಕಾಣದ ಬದಲಾವಣೆಯನ್ನು ಕಾಣಬಹುದು, ಅಲ್ಲದೇ ಬಿಲ್ವಪತ್ರೆಯ ಮರದ ಬೆರನ್ನು ಒಣಗಿಸಿ ಅದನ್ನು ಕುಟ್ಟಿ ಚೂರ್ಣ ಮಾಡಿ ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಸೇರಿಸಿ ನಿಯಮಿತವಾಗಿ ಪ್ರತಿನಿತ್ಯ ದಿನಕ್ಕೆ ಎರಡು ಲೊಟದಂತೆ ಕುಡಿಯುತ್ತಾ ಬಂದರೆ ವಾತ ಸಮಸ್ಯೆ ಅಜೀರ್ಣತೆಯ ಸಮಸ್ಯೆ ಏನೇ ಇದ್ದರೂ ಶೀಘ್ರವೇ ಗುಣಮುಖವಾಗುತ್ತದೆ, ಮತ್ತು ಬಿಲ್ವ ಮರದ ಒಣಗಿದ ಬೇರನ್ನು ಚೆನ್ನಾಗಿ ಅರೆದು ಹಣೆಗೆ ಲೇಪಿಸಿಕೊಳ್ಳುವುದರಿಂದ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಇನ್ನೂ ಬಿಲ್ವ ಪತ್ರೆಯ ಎಲೆಗಳನ್ನು ಚೆನ್ನಾಗಿ ಅರೆದು ಅದನ್ನು ತಲೆಗೆ ಹಚ್ಚಿಕೊಂಡು ನಂತರ ಅರ್ಧ ಗಂಟೆಗಳ ಕಾಲ ಬಿಟ್ಟು ತಲೆಗೆ ಸ್ನಾನ ಮಾಡಿಕೊಳ್ಳಬೇಕು ವಾರದಲ್ಲಿ ಮೂರು ಬಾರಿಯಾದರೂ ಹೀಗೆ ಮಾಡುವುದರಿಂದ ತಲೆಯಲ್ಲಿನ ಹೊಟ್ಟು ಕಡಿಮೆಯಾಗುತ್ತಾ ಬರುತ್ತದೆ.

ಬಿಲ್ವಪತ್ರೆಯ ಎಲೆಗಳನ್ನು ನೀರು ಸೇರಿಸದೆ ಅರೆದು ಹಣೆಗೆ ಹಚ್ಚಿಕೊಳ್ಳುವುದರಿಂದ ನಿದ್ರಾಹೀನತೆ ಸಮಸ್ಯೆ ಗುಣಮುಖವಾಗುತ್ತದೆ ಮತ್ತು ಬಿಲ್ವಪತ್ರೆಯ ರಸವನ್ನು ಎರಡರಿಂದ ಮೂರು ಚಮಚ ಪ್ರತಿನಿತ್ಯ ನಿಯಮಿತವಾಗಿ ಸೇವಿಸುತ್ತಾ ಬಂದರೆ ನಿಶಕ್ತಿ ಮತ್ತು ಸುಸ್ತು ಕಡಿಮೆಯಾಗುತ್ತದೆ. ಇನ್ನೂ ಗಾಯವಾದ ಜಾಗಗಳಿಗೆ ಬಿಲ್ವಪತ್ರೆಯನ್ನು ಅರೆದು ಕಟ್ಟುವುದರಿಂದ ಗಾಯಗಳು ಬೇಗ ಗುಣಮುಖವಾಗಿ ನೋವು ಮತ್ತು ಊತ ಶಮನವಾಗುತ್ತದೆ ಬಿಲ್ವಪತ್ರೆಯ ರಸವನ್ನು ಸುಟ್ಟ ಗಾಯಗಳ ಮೇಲೆ ಲೇಪಿಸುವುದರಿಂದ ನೋವು ಕಡಿಮೆಯಾಗಿ ಗಾಯವು ಕ್ರಮೇಣ ಮಾಯವಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!