ಮನುಷ್ಯನಿಗೆ ಒಂದಲ್ಲ ಒಂದು ಬೇನೆ ಸಾಮಾನ್ಯವಾಗಿ ಕಾಡೇ ಕಾಡುತ್ತದೆ ಅದಕ್ಕೆ ಮನೆಯಲ್ಲಿಯೇ ಇರುವಂತ ಒಂದಿಷ್ಟು ಪಾರಂಪರಿಕ ಮನೆಮದ್ದು ಬಳಸಿ ಸಮಸ್ಯೆಯಿಂದ ಪರಾಗಬಹುದಾಗಿದೆ. ವಿಳ್ಳೇದೆಲೆ ಬರಿ ಶಾಸ್ತ್ರಕ್ಕೆ ಸೀಮಿತವಾಗದೆ ಹತ್ತಾರು ಆರೋಗ್ಯಕಾರಿ ಪ್ರಯೋಜನವನ್ನು ಹೊಂದಿದೆ, ಆದ್ದರಿಂದ ಈ ಲೇಖನದ ಮೂಲಕ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋದು ಹೇಗೆ ಅನ್ನೋದನ್ನ ತಿಳಿಯೋಣ.
ಕೆಮ್ಮು ಹಾಗೂ ಕಫ ಹೆಚ್ಚಾಗಿದ್ರ ಇದರಿಂದ ಮುಕ್ತಿ ಪಡೆಯೋದು ಹೇಗೆ ಅನ್ನೋದನ್ನ ನೋಡುವುದಾದರೆ, ವೀಳ್ಯದೆಲೆ, ಏಲಕ್ಕಿ ಮತ್ತು ಲವಂಗವನ್ನು ನೀರಲ್ಲಿ ಕುದಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಕೆಮ್ಮು ಕಫ ಸಮಸ್ಯೆಯಿಂದ ರಿಲೀಫ್ ಪಡೆಯಬಹುದಾಗಿದೆ.
ಇನ್ನು ಕಫ ಹೆಚ್ಚಾಗಿ ಇದರಿಂದ ತಲೆನೋವು ಇದ್ರೆ ವೀಳ್ಯೆದೆಲೆಯ ರಸವನ್ನು ಹಣೆಗೆ ಹಚ್ಚಿ ಕೊಳ್ಳುವುದರಿಂದ ತಲೆ ನೋವು ಬಹು ಬೇಗನೆ ಕಡಿಮೆಯಾಗುತ್ತದೆ. ವಿಳ್ಳೇದೆಲೆಯಲ್ಲಿ ನೈಸರ್ಗಿಕ ಔಷದಿ ಗುಣಗಳು ಇರೋದ್ರಿಂದ ವಿಳ್ಳೆದೆಯನ್ನು ಆಯುರ್ವೇದಿಕ್ ಔಷಧಿಗಳಲ್ಲಿ ಬಳಸಲಾಗುತ್ತದೆ.
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮತ್ತೊಂದು ಸುಲಭ ಮನೆಮದ್ದು ಹೌದು ಪ್ರತಿದಿನ 2 ವೀಳ್ಯದೆಲೆ ಜತೆಗೆ 2-4 ಕರಿಮೆಣಸಿನ ಕಾಳನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಕೆಲವರಲ್ಲಿ ಹೆಚ್ಚಾಗಿ ಬೆವರಿನ ವಾಸನೆ ಸಮಸ್ಯೆ ಇರುತ್ತದೆ ಅಂತವರಿಗೆ ಈ ಮನೆಮದ್ದು ಉಪಯೋಗಕಾರಿ ಅನ್ನೋದನ್ನ ಹೇಳಲಾಗುತ್ತದೆ. ನೀವು ಸ್ನಾನ ಮಾಡುವ ನೀರಿಗೆ ವೀಳ್ಯದೆಲೆಯ ಕಷಾಯವನ್ನು ಆ ನೀರಿಗೆ ಸ್ನಾನ ಮಾಡುವುದರಿಂದ ಬೆವರು ವಾಸನೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಪದೇ ಪದೇ ಕಾಡುವಂತ ಅಜೀರ್ಣತೆ ನಿವಾರಣೆಗೆ ವೀಳ್ಯದೆಲೆಯನ್ನು ನೀರು ಮತ್ತು ಕರಿಮೆಣಸಿಕಾಳಿನ ಜತೆ ಕುದಿಸಿ ಕಷಾಯ ಮಾಡಿ ಎರಡು ಚಮಚ ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ. ನಿಮಗೆ ಈ ನೈಸರ್ಗಿಕ ವಿಳ್ಳೆದೆಯಲ ಮನೆಮದ್ದು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಹಾಗೂ ಪ್ರತಿದಿನ ಆರೋಗ್ಯಕಾರಿ ಮಾಹಿತಿಯನ್ನು ನಮ್ಮಲ್ಲಿ ಪಡೆಯಲು ನಮ್ಮ ಪೇಜ್ ಅನ್ನು ಬೆಂಬಲಿಸಿ ಶುಭವಾಗಲಿ.