ಹೆಚ್ಚಾಗಿ ಜನರು ನೋಟಿನ ಮೇಲೆ ಹೆಚ್ಚು ಆಸಕ್ತಿ ವಹಿಸಿತ್ತಾರೆ. ಅದೇ ನಾಣ್ಯದ ಮೇಲೆ ಅಷ್ಟೊಂದು ಆಸಕ್ತಿ ಪಡುವುದಿಲ್ಲ. ಆದರೆ ಮಧ್ಯಮ ವರ್ಗದವರಿಗೆ ಚಿಲ್ಲರೆ ಮೇಲೆ ಹೆಚ್ಚು ಒಲವು ಇರುತ್ತದೆ. ಏಕೆಂದರೆ ಅವರು ಸಣ್ಣ ಸಣ್ಣ ಡಬ್ಬಿಗಳಿಗೆ ನಾಣ್ಯಗಳನ್ನು ಹಾಕಿ ಉಳಿತಾಯ ಮಾಡುತ್ತಾರೆ. ಹೀಗೆ ಮಧ್ಯಮ ವರ್ಗದ ವ್ಯಕ್ತಿ ನಾಣ್ಯದಿಂದ ಬಿ.ಎಮ್. ಡಬ್ಲ್ಯೂ. ಕಾರ್ ಖರೀದಿ ಮಾಡಿದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಚೂನುಹು ಎಂಬ ವ್ಯಕ್ತಿ ಇದ್ದ. ಅವನು ಚಿಕ್ಕಂದಿನಿಂದಲೂ ನಾಣ್ಯವನ್ನು ಡಬ್ಬಿಗೆ ಹಾಕಿ ಉಳಿತಾಯ ಮಾಡುವ ಹವ್ಯಾಸ ಹೊಂದಿದ್ದ. ಹಾಗಾಗಿ ತನ್ನ ಕೈಯಲ್ಲಿ ಆದಷ್ಟು ಹಣವನ್ನು ಹುಂಡಿಗೆ ದಿನವೂ ಹಾಕುತ್ತಿದ್ದ. ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಜೀವನ ನಡೆಸುತ್ತಿದ್ದ. ಇವನು ಶ್ರೀಮಂತನಾಗಿರಲಿಲ್ಲ. ಆದರೆ ಮನುಷ್ಯನ ಆಸೆ ಕನಸುಗಳು ಅವನ ಬಡತನ ಮತ್ತು ಶ್ರೀಮಂತಿಕೆಯಿಂದ ಬರುವುದಿಲ್ಲ. ಯಾವುದೇ ಬಡವನಾಗಲೀ ಶ್ರೀಮಂತನಾಗಲೀ ಅವನಿಗೆ ಆಸೆ ಕನಸುಗಳು ಇರುವುದು ಸಹಜ.
ಇವನಿಗೆ ಚಿಕ್ಕಂದಿನಿಂದಲೇ ಒಂದು ಬಾರಿ ಬಿ.ಎಮ್.ಡಬ್ಲ್ಯೂ. ಕಾರ್ ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಹಾಗಾಗಿ ನಾಣ್ಯಗಳನ್ನು ಸಂಗ್ರಹ ಮಾಡುತ್ತಿದ್ದ. ಒಂದು ದಿನ ಬಿ.ಎಮ್.ಡಬ್ಲ್ಯೂ. ಶೋ ರೂಮ್ ಗೆ ಹೋಗಿ 52 ಲಕ್ಷ ಬೆಲೆಯ ತನಗೆ ಇಷ್ಟವಾದ ಬಣ್ಣದ ಕಾರ್ ನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. 52ಲಕ್ಷವನ್ನು ಚಿಲ್ಲರೆ ಅಂದರೆ ನಾಣ್ಯ ಕೊಡುತ್ತೇನೆ ಎಂದು ಈತನು ಹೇಳುತ್ತಾನೆ. ಆಗ ಆ ಶೋ ರೂಮ್ ನ ಮ್ಯಾನೇಜರ್ ಆಶ್ಚರ್ಯಚಕಿತನಾಗುತ್ತಾನೆ. ಮೊದಲು ಮ್ಯಾನೇಜರ್ ಇದನ್ನು ಹಿಂದೇಟು ಹಾಕುತ್ತಾರೆ. ನಂತರ ಆತನ ಪರಿಶ್ರಮ ಅರಿತ ಇವರು ಚಿಲ್ಲರೆ ತೆಗೆದು ಕೊಳ್ಳಲು ಒಪ್ಪಿದರು.
ಆಗ ಮನೆಗೆ ಹೋದ ಚೂನುಹು ಸುಮಾರು 45 ಬಕೆಟ್ ಗಳಲ್ಲಿ ಚಿಲ್ಲರೆಯನ್ನು ತುಂಬಿ ನಂತರ ಲಾರಿಯಲ್ಲಿ ಹಾಕಿಕೊಂಡು ಬಂದು ಶೋ ರೂಮ್ ಮುಂದೆ ನಿಲ್ಲಿಸಿದ. ನಂತರ ಶೋ ರೋಮಿನ ಸಿಬ್ಬಂದಿಗಳು ಸುಮಾರು 18ಗಂಟೆಗಳ ಕಾಲ ಎಣಿಸುವ ಕಾರ್ಯವನ್ನು ಮಾಡಿದರು. ಚಿಲ್ಲರೆಯನ್ನು ಎಣಿಸಿ ಮುಗಿಸುವ ಹೊತ್ತಿಗೆ ಸಿಬ್ಬಂದಿಗಳಿಗೆ ಸೊಂಟನೋವು ಬಂದಿತ್ತು. 52ಲಕ್ಷ ಹಣವನ್ನು ಕೊಟ್ಟು ಬಿ.ಎಮ್.ಡಬ್ಲ್ಯೂ. ಕಾರ್ ಖರೀದಿ ಮಾಡಿದ ಚೂನುಹು ಝುಮ್ ಎಂದು ಕಾರ್ ಡ್ರೈವ್ ಮಾಡಿಕೊಂಡು ಹೊರಟರು.
ಇಂತಹ ದೊಡ್ಡ ಆಕಾರದ ನದಿಯಾದರೂ ಚಿಕ್ಕ ಚಿಕ್ಕ ಹನಿಗಳು ಸೇರಿ ನದಿಯಾಗಿ ಹರಿಯುತ್ತದೆ. ಹಾಗಾಗಿ ಚಿಲ್ಲರೆಯ ಬಗ್ಗೆ ತಾತ್ಸಾರ ಮಾಡುವುದರಲ್ಲಿ ಅರ್ಥವಿಲ್ಲ. ಹಾಗೆಯೇ ಪ್ರತಿದಿನ ಹಣವನ್ನು ಉಳಿತಾಯ ಮಾಡುವುದರಿಂದ ಮುಂದೆ ಆಸರೆಯಾಗಿ ನಿಲ್ಲುತ್ತದೆ.