ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಬ್ಬರಿಗೊಬ್ಬರು ಗಿಫ್ಟ್ ಗಳನ್ನು ಕೊಡುತ್ತಾರೆ. ಚಂದನ್ ಶೆಟ್ಟಿ ನಿವೇದಿತಾ ಅವರಿಗೆ ಕೊಟ್ಟ ದೊಡ್ಡ ಗಿಫ್ಟ್ ಯಾವುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಹಾಗೂ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ಅದೇ ಸೀಸನ್ ನಲ್ಲಿ ಕಾಮನ್ ಮ್ಯಾನ್ ಲಿಸ್ಟ್ ನಲ್ಲಿ ಬಂದ ನಿವೇದಿತಾ ಗೌಡ ಮದುವೆಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು 99 ದಿನಗಳ ಕಾಲ ಇದ್ದು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಕೊನೆಯ ಹಂತದ ಸಮಯದಲ್ಲಿ ನಿವೇದಿತಾ ಗೌಡ ಎಲಿಮಿನೇಟ್ ಆಗಿದ್ದು ಚಂದನ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಬಿಗ್ ಬಾಸ್ ಜರ್ನಿ ನಂತರ ಇವರಿಬ್ಬರ ಫ್ರೆಂಡ್ಶಿಪ್ ಮುಂದುವರೆದಿತ್ತು. ಯುವ ದಸರಾ ಕಾರ್ಯಕ್ರಮದಲ್ಲಿ ಮೈಸೂರು ಜನರ ಮುಂದೆ ನಿವೇದಿತಾರಿಗೆ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದರು ನಿವೇದಿತಾ ಕೂಡ ಒಪ್ಪಿಕೊಂಡಿದ್ದರು.

ಹಿರಿಯರ ಆಶೀರ್ವಾದ ಮತ್ತು ಒಪ್ಪಿಗೆ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರು ತಮ್ಮ ಮನೆಯಲ್ಲಿ ನಡೆಯುವ ಘಟನೆಗಳು, ಒಬ್ಬರಿಗೊಬ್ಬರು ಕೊಡುವ ಸರ್ಪ್ರೈಸ್ ಫೋಟೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಾರೆ.
ಚಂದನ್ ಅವರು ತಮ್ಮ ಮುದ್ದಿನ ಪತ್ನಿ ನಿವೇದಿತಾರಿಗೆ ಆಗಾಗ ಕ್ಯೂಟ್ ಆದ ಸರ್ಪ್ರೈಸ್ ಗಳನ್ನು ನೀಡುತ್ತಾರೆ ಅವುಗಳ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಬೃಹತ್ ಆರೆಂಜ್ ಕಲರಿನ ಟೆಡ್ಡಿಬೇರ್ ಒಂದನ್ನು ನಿವೇದಿತ ಅವರಿಗೆ ಚಂದನ್ ಶೆಟ್ಟಿ ಗಿಫ್ಟ್ ಮಾಡಿದ್ದಾರೆ. ಆ ಬೃಹತ್ ಟೆಡ್ಡಿಬೇರ್ ಅವರ ಇಡೀ ಮನೆಯನ್ನು ಅಲಂಕರಿಸುತ್ತದೆ. ನಿವೇದಿತಾ ಅವರಿಗೆ ಟೆಡ್ಡಿಬೇರ್ ಇಷ್ಟ ಇರುವ ಕಾರಣ ಚಂದನ್ ಈ ಗಿಪ್ಟ್ ನೀಡಿದ್ದಾರೆ. ನಿವೇದಿತಾ ಬೃಹತ್ ಟೆಡ್ಡಿಬೇರ್ ಜೊತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *