ಈ ಲೇಖನದ ಮೂಲಕ ನಾವು ವರ್ಷಪೂರ್ತಿ ಬೇಡಿಕೆ ಇರುವಂತ ಒಂದು ಬಿಸಿನೆಸ್ ಬಗ್ಗೆ ತಿಳಿದುಕೊಳ್ಳೋಣ. ನಮಗೆ ಪ್ರತಿದಿನ ಮನೆಯಲ್ಲಿ ಪೂಜೆಗೆ, ದೇವಸ್ಥಾನಕ್ಕೆ ಹೋಗುವಾಗ, ಅಡುಗೆಗೆ ತೆಂಗಿನ ಕಾಯಿ ಬೇಕೇ ಬೇಕು. ಮಾರ್ಕೆಟ್ ಗಳಿಗೆ ತೆಂಗಿನಕಾಯಿಯನ್ನು ರೈತರಿಂದ ಕೊಂಡುಕೊಂಡು ನಂತರ ಕೆಲಸಗಾರರ ಸಹಾಯದಿಂದ ತೆಂಗಿನಕಾಯಿ ಸುಲಿದು ನಂತರ ಅದನ್ನು ಮಾರುಕಟ್ಟೆಗೆ ತರಲಾಗುತ್ತದೆ. ಇದರಿಂದಾಗಿ ಲೇಬರ್ ಕಾಸ್ಟ್ ಹೆಚ್ಚಾಗುತ್ತೆ. ಹಾಗಾಗಿ ನಾವು ಒಂದು ಮಶೀನ್ ತಂದುಕೊಂಡು ಅದರ ಮೂಲಕ ಬಿಸಿನೆಸ್ ಆರಂಭಿಸುವುದರಿಂದ ಉತ್ತಮ ಆದಾಯವನ್ನು ನಾವು ಗಳಿಸಬಹುದು. ಬಿಸಿನೆಸ್ ಮಾಡೋಕೆ ತೆಂಗಿನಕಾಯಿ ನಮಗೆ ಎಲ್ಲಿಂದ ಸಿಗುತ್ತದೆ ಆದರೆ ಬೆಲೆ ಎಷ್ಟು ನಮಗಾಗುವ ಲಾಭಗಳೇನು ಈ ಎಲ್ಲ ವಿಷಯಗಳ ಬಗ್ಗೆ ಇಲ್ಲೆ ತಿಳಿದುಕೊಳ್ಳೋಣ.
ಬಿಸಿನೆಸ್ ಮಾಡುವುದಕ್ಕಾಗಿ ನಮಗೆ ಮೊದಲು ಮಷೀನ್ ಬೇಕು ಇದರ ಬೆಲೆ ಒಂದು ಲಕ್ಷದ 20 ಸಾವಿರದಿಂದ ಆರಂಭವಾಗಿ 1,60,000 ದ ವರೆಗೂ ಇರುತ್ತದೆ. ಹಾಗೇ ತೆಂಗಿನಕಾಯಿಗಳು ಬೇಕಾಗುತ್ತದೆ. ತೆಂಗಿನಕಾಯಿಗಳನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಬಹುದು ಅಥವಾ ಇಂಡಿಯಾ ಮಾರ್ಟ್ ಎಂಬ ವೆಬ್ಸೈಟ್ನಲ್ಲಿ ಅನೇಕ ಜನರು ಮಾರಾಟ ಮಾಡುವವರು ಇರುತ್ತಾರೆ ಅವರಿಂದಲೂ ಸಹ ಪಡೆದುಕೊಳ್ಳಬಹುದು. ಇವರ ಬಳಿ ಒಂದು ಕಾಯಿ ಹತ್ತು ರೂಪಾಯಿಗೆ ಸಿಗುತ್ತದೆ. ಮಧ್ಯಮಗಾತ್ರದ ಕಾಯಿ ಆದರೆ 9 ರೂಪಾಯಿ ಆಗಿರುತ್ತದೆ. ಇನ್ನು ಈ ಕಾಯಿ ಸುಲಿಯುವ ಯಂತ್ರ ಇದರ ಕೆಲಸ ಹೇಗಿರುತ್ತದೆ ಅಂತ ನೋಡುವುದಾದರೆ ಇದು ಎಲ್ಲಾ ವಿದ್ಯುತ್ ಶಕ್ತಿಯನ್ನು ಬಳಸಿಕೊಂಡು ನಿರ್ವಹಿಸುವುದಾಗಿದೆ. ವಿದ್ಯುತ್ ಬಳಸಿಕೊಂಡು ಮಶೀನ್ ಆನ್ ಮಾಡಿ ಅದರಲ್ಲಿ ಒಂದೊಂದೇ ಕಾಯಿಗಳನ್ನು ಇಡಬೇಕು ಆಗ ಮಶೀನ್ ತಾನಾಗಿಯೇ ಕಾಯಿಯ ಮೇಲಿನ ಸಿಪ್ಪೆಗಳನ್ನು ತೆಗೆಯುತ್ತದೆ.
ತುಂಬಾ ವೇಗವಾಗಿ ಕೆಲಸ ಮಾಡುವ ಈ ಮಶೀನ್ ಗಂಟೆಗೆ 600 ಕಾಯಿಗಳನ್ನು ಸುಲಿಯುವ ಸಾಮಾರ್ಥ್ಯವನ್ನು ಹೊಂದಿದೆ. ಮಶಿನ್ನಿನ ಒಂದು ಭಾಗದಲ್ಲಿ ತೆಂಗಿನ ಕಾಯಿಯ ಸುಲಿದ ಸಿಪ್ಪೆಗಳನ್ನು ಹೊರಗೆ ಒಂದು ಕಡೆ ಬಂದರೆ ಇನ್ನೊಂದು ಕಡೆ ತೆಂಗಿನಕಾಯಿ ಹೊರಗೆ ಬರುತ್ತದೆ. ಆದರೆ ಈ ಮಶೀನ್ ನಿರ್ವಹಣೆ ಮಾಡಲು ಒಬ್ಬ ಕಾರ್ಮಿಕ ಇದ್ದರೆ ಸಾಕು. ನಂತರ ಸುಲಿದ ಕಾಯಿಗಳನ್ನು ನಾವು ಮಾರಾಟ ಮಾಡಿಕೊಳ್ಳಬೇಕು. ಈ ತೆಂಗಿನಕಾಯಿಗಳನ್ನು ನಾವು ಮಾರಾಟ ಮಾಡುವುದು ಹೇಗೆ ಅಂತ ನೋಡುವುದಾದರೆ , ನಮ್ಮ ಎರಿಯಾಗಳಲ್ಲಿ ಇರುವಂತಹ ಕಿರಾಣಿ ಅಂಗಡಿಗಳಲ್ಲಿ ಅಥವಾ ದೇವಸ್ಥಾನ ಇರುವಂತಹ ಅಂಗಡಿಗಳಲ್ಲಿ ಮಾರಾಟ ಮಾಡಬೇಕು. ಇನ್ನು ಈ ಬಿಸ್ನೆಸ್ ನಿಂದಾಗಿ ನಮಗೆ ಲಾಭ ಎಷ್ಟು ಅಂತ ನೋಡುವುದಾದರೆ , ಒಂದು ಮಧ್ಯಮ ಗಾತ್ರದ ಕಾಯಿ 8 ರೂಪಾಯಿಗೆ ಸಿಗುತ್ತದೆ. ಇದರ ಸಾಗಾಣಿಕಾ ವೆಚ್ಚ ಒಂದು ರೂಪಾಯಿ ಹಾಗೂ ಲೇಬರ್ ಚಾರ್ಜ್ ಒಂದು ರೂಪಾಯಿ ಬೀಳಬಹುದು. ಹಾಗಾಗಿ ಒಂದು ಕಾಯಿಯ ಬೆಲೆ 10 ರೂಪಾಯಿ. ಇದರ ರಿಟೇಲ್ ಬೆಲೆ ಇಪ್ಪತ್ತರಿಂದ ಇಪ್ಪತೈದು ರೂಪಾಯಿ. ಅಂಗಡಿಗಳಿಗೆ 15 ರೂಪಾಯಿಗೆ ಹೋಲ್ ಸೇಲ್ ಮಾರಾಟ ಮಾಡಬಹುದು. ಹೀಗೆ ಮಾರಾಟ ಮಾಡಿದಾಗ ಪ್ರತೀ ಕಾಯಿಯ ಮೇಲೆ 5 ರೂಪಾಯಿ ಲಾಭ ಗಳಿಸಬಹುದು. ಈ ರೀತಿ ಪ್ರತೀ ದಿನ ಏನಾದರೂ ನೀವು 600 ಕಾಯಿಗಳನ್ನು ಮಾರಾಟ ಮಾಡಿದರೆ ದಿನಕ್ಕೆ ಮೂರು ಸಾವಿರ ಹಾಗೂ ತಿಂಗಳಿಗೆ ತೊಂಭತ್ತು ಸಾವಿರದವರೆಗೆ ಸಂಪಾದನೆ ಮಾಡಬಹುದು.