ಇವತ್ತಿನ ದಿನ ಮಲಬದ್ಧತೆಯಿಂದ ಅನೇಕ ಜನರು ನರಳುತ್ತಿದ್ದಾರೆ ಹಾಗಾಗಿ ಕರುಳನ್ನು ಶುದ್ಧವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಾವಿಂದು ನಿಮಗೆ ಕರುಳನ್ನು ಸುಲಭವಾಗಿ ಹೇಗೆ ಶುದ್ಧವಾಗಿಟ್ಟುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ಮೂರು ಬೀಜಗಳ ಮಂತ್ರವನ್ನು ತಿಳಿದುಕೊಳ್ಳೋಣ ಇದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಕರುಳು ಶುದ್ಧಿಯಾಗುತ್ತದೆ ಚರ್ಮಕ್ಕೆ ತುಂಬಾ ಬರುತ್ತದೆ ಕೂದಲಿಗೂ ಸಹ ತುಂಬಾ ಒಳ್ಳೆಯದು ಜೊತೆಗೆ ಮೂಳೆ ಎಲುಬುಗಳಿಗೂ ತುಂಬಾ ಒಳ್ಳೆಯದು.
ಮೂರು ಬೀಜಗಳು ಯಾವುದು ಎಂದರೆ ಅಗಸೆ ಬೀಜ ಎಳ್ಳು ಮತ್ತು ಮೆಂತೆ ಇವು ಮೂರನ್ನು ಸೇರಿಸಿ ಪುಡಿಮಾಡಿ ಉಪಯೋಗಿಸುವುದರಿಂದ ತುಂಬಾ ಸಹಾಯವಾಗುತ್ತದೆ ಇದನ್ನು ಹೇಗೆ ಮಾಡುವುದು ಎಂದರೆ ನೀವು ಮಾರುಕಟ್ಟೆಯಿಂದ ಒಂದು ಕೆಜಿ ಅಗಸೆಕಾಳು ಒಂದು ಕೆಜಿ ಮೆಂತೆ ಒಂದು ಕೆಜಿ ಕಪ್ಪು ಅಥವಾ ಬಿಳಿ ಎಳ್ಳನ್ನು ತೆಗೆದುಕೊಂಡು ಬರಬೇಕು ಇದನ್ನು ಎರಡರಿಂದ ಮೂರು ದಿನ ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು ನಂತರ ಅದನ್ನು ಸ್ವಚ್ಛಗೊಳಿಸಿ ಅದನ್ನು ಮಿಲ್ಲಿನಲ್ಲಿ ಅಥವಾ ನಿಮ್ಮ ಮನೆಯಲ್ಲಿ ಪುಡಿ ಮಾಡಿಕೊಳ್ಳಬಹುದು.
ಹೀಗೆ ಬೇರೆಬೇರೆಯಾಗಿ ಪುಡಿ ಮಾಡಿಕೊಂಡಿರುವುದನ್ನು ಒಂದು ಡಬ್ಬಿಯಲ್ಲಿ ಹಾಕಿ ಫ್ರಿಜ್ಜಿನಲ್ಲಿ ಇಟ್ಟುಕೊಳ್ಳಬೇಕು. ಸಂಜೆ ಏಳು ಗಂಟೆಯ ಹೊತ್ತಿಗೆ ಮೂರು ಗ್ಲಾಸ್ ನೀರು ಮೂರು ಚಮಚ ಪುಡಿಗಳನ್ನು ಬೆರೆಸಿ ನೀರನ್ನು ಕುಡಿಯುತ್ತಾ ಬಂದರೆ ಕರುಳನ್ನು ಶುದ್ಧವಾಗಿಟ್ಟುಕೊಳ್ಳುವುದರ ಜೊತೆಗೆ ಮಲಬದ್ಧತೆ ಕಡಿಮೆಯಾಗುತ್ತದೆ ದೇಹಕ್ಕೆ ಉತ್ತಮ ಅಂಶ ದೊರೆಯುತ್ತದೆ. ಇನ್ನೊಂದು ಮೊಸರು.
ಮೊಸರು ತುಂಬಾ ಒಳ್ಳೆಯದು ಹಲವು ಜನರು ಮೊಸರನ್ನ ತಿಂದರೆ ದಪ್ಪಗಾಗುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಮೊಸರನ್ನ ತಿಂದರೆ ಅದು ತುಂಬಾ ಒಳ್ಳೆಯದು ಮೊಸರಿನಲ್ಲಿ ಒಳ್ಳೆಯ ಕೊಬ್ಬಿನ ಅಂಶ ಇರುತ್ತದೆ ಇದರಿಂದ ನಮ್ಮ ಚರ್ಮಕ್ಕೆ ಉಪಯೋಗವಾಗುತ್ತದೆ. ಮಲಬದ್ಧತೆ ಕಡಿಮೆಯಾಗುತ್ತದೆ ಮೊಸರಿನಿಂದ ಒಳ್ಳೆಯ ಕ್ಯಾಲ್ಸಿಯಂ ದೊರೆಯುತ್ತದೆ ಹಾಗಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡರಿಂದ ಮೂರು ಕಪ್ ಮೊಸರನ್ನು ಸೇವಿಸುವುದು ತುಂಬಾ ಒಳ್ಳೆಯದು ಅಸ್ತಮ ತೊಂದರೆ ಇದ್ದರೆ ಕಫ ಇದ್ದರೆ ರಾತ್ರಿ ಮೊಸರನ್ನ ಸೇವಿಸುವುದು ಅಷ್ಟು ಒಳ್ಳೆಯದಲ್ಲ.
ಮೊಸರಿಗೆ ನೀವು ಜೇನುತುಪ್ಪವನ್ನು ಅಥವಾ ಬೆಲ್ಲ ಸೇರಿಸಿ ತೆಗೆದುಕೊಳ್ಳಬಹುದು ಉಪ್ಪು ಸಕ್ಕರೆಯನ್ನು ಸೇರಿಸುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.ಇನ್ನೊಂದು ಸಬ್ಜಾ ಬೀಜಗಳು ಈ ಬೀಜದಿಂದ ಪಾನಕವನ್ನು ಮಾಡಿ ಕುಡಿಯುವುದು ಒಳ್ಳೆಯದು ರಾತ್ರಿ ಬೀಜವನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಅದರ ಪಾನಕವನ್ನು ಮಾಡಿ ಕುಡಿಯುತ್ತಾ ಬಂದಲ್ಲಿ ಅನೇಕ ರೀತಿಯ ಪೋಷಕಾಂಶಗಳು ದೇಹಕ್ಕೆ ದೊರಕುತ್ತದೆ
ಇದರಿಂದಲೂ ಕೂಡ ಕರಳನ್ನು ಶುದ್ಧವಾಗಿಟ್ಟುಕೊಳ್ಳುವುದು. ಇನ್ನೊಂದು ಬಹಳ ಮುಖ್ಯವಾಗಿ ಎಲ್ಲರ ಮನೆಯಲ್ಲೂ ಸಿಗುವಂತಹದ್ದು ಶುದ್ಧವಾದ ಕೊಬ್ಬರಿಎಣ್ಣೆ ಇದನ್ನ ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಾಯಂಕಾಲ ಎರಡೆರಡು ಚಮಚ ಆಹಾರಕ್ಕಿಂತ ಪೂರ್ವದಲ್ಲಿ ತೆಗೆದುಕೊಳ್ಳುತ್ತಾ ಬಂದರೆ ಇದರಿಂದ ತುಂಬಾ ಸಹಾಯವಾಗುತ್ತದೆ. ಮಲವಿಸರ್ಜನೆ ಸರಿಯಾಗಿ ಆಗುವುದಕ್ಕೂ ಕೂಡ ಸಹಾಯವಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ಚರ್ಮಕ್ಕೆ ಒಳ್ಳೆಯದು ಕೂದಲಿಗೆ ಒಳ್ಳೆಯದು ಹೃದಯಕ್ಕೆ ಒಳ್ಳೆಯದು ಇದರಿಂದ ದಪ್ಪವಾಗುವಂತಹ ಹೆದರಿಕೆ ಇಲ್ಲ ಕರುಳು ಶುದ್ಧವಾಗುವುದಕ್ಕೆ ಇದು ಸಹಾಯಮಾಡುತ್ತದೆ. ಪೇರಲೆ ಹಣ್ಣು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪೇರಲೆ ಹಣ್ಣಿನಲ್ಲಿ ನೀರಿನಲ್ಲಿ ಕರಗುವ ಅಂಶ ಜಾಸ್ತಿ ಇದೆ. ಈ ಅಂಶದಿಂದ ಹೊಟ್ಟೆಯಲ್ಲಿ ಬೇಡದೆ ಇರುವಂತ ಅಂಶ ಮಲದ ರೂಪದಲ್ಲಿ ಹೊರ ಹೋಗುವುದಕ್ಕೆ ಸಹಾಯ ಮಾಡುತ್ತದೆ.
ನೀವು ಪ್ರತಿದಿನ ಒಂದು ಪೇರಲೇ ಹಣ್ಣನ್ನ ತಿನ್ನುವುದನ್ನು ರೂಢಿಸಿಕೊಂಡರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ರೀತಿಯಾಗಿ ನಾವು ಮೇಲೆ ತಿಳಿಸಿರುವ ಐದು ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕರುಳನ್ನು ಶುದ್ಧವಾಗಿಟ್ಟುಕೊಳ್ಳುವುದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸಿಕೊಂಡು ಆರೋಗ್ಯವನ್ನು ವರ್ಧಿಸಿ ಕೊಳ್ಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.