ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಚಿರು ಅವರು ಸತ್ತಾಗ 6 ತಿಂಗಳ ಪ್ರಗ್ನೆಂಟ್ ಆಗಿದ್ದರು. ಮೇಘನಾ ರಾಜ್ ಅವರಿಗೆ ಜೂನಿಯರ್ ಚಿರು ಹುಟ್ಟಿದಾಗ ಅರ್ಜುನ್ ಸರ್ಜಾ ಅವರು ಮಾತನಾಡಿದ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ಅಂದರೆ ದುಃಖದ ನಡುವೆಯೂ ಕೂಡ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದರು. ಕುಟುಂಬದ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹುಟ್ಟುವ ಮಗುವಿಗೆ ಹಾರೈಸಿದ್ದರು. ಇಲ್ಲಿ ವಿಶೇಷತೆ ಎಂದರೆ ನೆನಪಿಗಾಗಿ ಚಿರು ಅವರ ಸೆಟ್ ಹಾಕಿಸಲಾಗಿತ್ತು. ಅಕ್ಟೋಬರ್ 22 2020ರಂದು ಬೆಳಿಗ್ಗೆ 11.07ರ ಹೊತ್ತಿಗೆ ಜೂನಿಯರ್ ಚಿರು ಅವರು ಭೂಮಿಗೆ ಕಾಲಿಟ್ಟಿದ್ದಾರೆ.ಇದರಿಂದ ಎಲ್ಲರೂ ಬಹಳ ಸಂತೋಷವಾಗಿದ್ದಾರೆ.
ನಟ ಅರ್ಜುನ್ ಸರ್ಜಾ ಸಹ ಸಂಭ್ರಮಿಸುತ್ತಿದ್ದಾರೆ. 2020 ಒಂದು ಕೆಟ್ಟ ವರ್ಷ ಈ ಪ್ರಪಂಚಕ್ಕೇ ಆಗಿದೆ. 4 ತಿಂಗಳ ಹಿಂದೆ ನಮ್ಮ ಕುಟುಂಬದಲ್ಲಿ ದೊಡ್ಡ ಅನಾಹುತ ಆಗಿದೆ. ಅದು ತುಂಬಲಾಗದ ನಷ್ಟವಾಗಿದೆ. ಇದರ ಮೇಲೆ ಈಗ ಒಂದು ಸಂಭ್ರಮ ಹುಟ್ಟಿದೆ. ಕುಟುಂಬದ ಪ್ರತಿಯೊಬ್ಬರಲ್ಲಿ ಸಂತೋಷ ತರುವ ವಿಷಯ. ಈ ಸಂತೋಷವನ್ನು ಅನುಭವಿಸಲು ಚಿರು ಇಲ್ಲ. ದೇವರೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ನಾವು ಇದ್ದೆವು. ಆದರೆ ದೇವರು ಇದ್ದಾನೆ ಎಂದು ನಂಬಿಕೆ ಬರುತ್ತಿದೆ. ಬಹಳ ಒಳ್ಳೆಯ ಜಾತಕ ಗಜ ಕೇಸರಿ ಯೋಗದಲ್ಲಿ ಮಗು ಹುಟ್ಟಿದೆ. ಈಗಲೂ ಚಿರು ಇಲ್ಲ ಎನ್ನುವುದನ್ನು ಊಹಿಸಿಕೊಳ್ಳಲಾಗುತ್ತಿಲ್ಲ. 36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ನಾನು ಶೂಟಿಂಗ್ ನಲ್ಲಿದ್ದೆ. ಅವನನ್ನು ನೋಡಲು ಓಡಿ ಬಂದಿದ್ದೆ. 20 ವರ್ಷಗಳ ನಂತರ ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೀನಿ. ಮರಳು ಗಾಡಿನ ಕುಟುಂಬಕ್ಕೆ ದೊಡ್ಡ ಸಂಭ್ರಮ ಸಿಕ್ಕಿದೆ. ಮಗು ನೋಡಿದರೆ ಚಿರು ಸರ್ಜಾ ನೆನಪಾಗುತ್ತಾನೆ ಎಂದು ಹೇಳಿದ್ದಾರೆ.