ಚಿರು ಹಾಗೂ ಮೇಘನಾರಾಜ್ ಅವರ ಕೊನೆಯ ಶಾಪಿಂಗ್ ಹೇಗಿತ್ತು ನೋಡಿ ವಿಡಿಯೋ

0 0

ನಟ ಚಿರಂಜೀವಿ ಸರ್ಜಾ ತಮ್ಮ ಮಡದಿ ಮೇಘನಾ ನೊಂದಿಗೆ ಶಾಪಿಂಗ್ ಮಾಡಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈಗ ಸದ್ಯ ಚಿರು ನಮ್ಮೊಂದಿಗಿಲ್ಲ ಆದರೆ ಅವರ ನೆನಪು ಸದಾ ಕಾಡುತ್ತಿರುತ್ತದೆ. ಇರುವವರ ನೆನಪು ಇಲ್ಲದಾಗ ಹೇಗಿದೆ ಎಂಬುದನ್ನು ಮೇಘನರನ್ನು ನೋಡಿದಾಗ ತಿಳಿದುಬರುತ್ತದೆ.

ಲಾಕ್‌ಡೌನ್‌ನಲ್ಲಿ ಮೇಘನಾ ಗರ್ಭಿಣಿಯಂದು ತಿಳಿದ ಕ್ಷಣ ಚಿರು ಪ್ರತಿಯೊಂದೂ ಕ್ಷಣವನ್ನು ಪತ್ನಿ ಜೊತೆ ಕಳೆಯಬೇಕೆಂದು ಬಯಸಿದ್ದರಂತೆ.  ಅದಕ್ಕೆ ಸರಿಯಾಗಿ ಲಾಕ್‌ಡೌನ್ ಅನೌನ್ಸ್ ಆಗಿದ್ದರಿಂದ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ, ಪ್ರತೀ ದಿನವನ್ನೂ ಸೆಲೆಬ್ರೇಶನ್‌ನಂತೆ ಕಳೆದರಂತೆ. ಕೆಲಸದಲ್ಲಿ ಬ್ಯುಸಿ ಇದ್ದಿದ್ದರೆ ಚಿರುಗೆ ತನ್ನೊಂದಿಗೆ ಸಮಯ ಕಳೆಯಲು ಆಗುತ್ತಿರಲಿಲ್ಲ. ಚಿರು ಕೊನೇ ದಿನಗಳನ್ನು ಅದ್ಭುತವಾಗಿ ಕಳೆಯಲಾಗಿದೆ. ಅಲ್ಲದೇ ಅದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳೆಂದು, ನೆನಪಿಸಿಕೊಂಡಿದ್ದಾರೆ ಚಿರು ಪತ್ನಿ ಮೇಘನಾ. ಚಿರು ಮನೆಯಲ್ಲಿ ಪ್ರಜ್ಞೆ ತಪ್ಪಿದರೂ, ನಡುವೆ ಒಮ್ಮೆ ಕಣ್ಣು ಬಿಟ್ಟಿದ್ದರಂತೆ. ಎಚ್ಚರವಾದಾಗ ಮೇಘನಾ ಜೊತೆ ಮಾತನಾಡಿದ್ದಾರೆ. ನೀನು ಏನೂ ಟೆನ್ಶನ್‌ ತಗೋಬೇಡ. ನನಗೆ ಏನಾಗೋಲ್ಲ ಎಂಬ ಭರವಸೆಯನ್ನೂ ನೀಡಿದ್ದರಂತೆ. ಆದರೆ, ಎಲ್ಲವೂ ವಿಧಿಯಾಟ. ಜೀವನದಲ್ಲಿ ಏನೇನೋ ಆಗಿ ಹೋಯಿತು, ಎಂದು ಮಮ್ಮುಲ ಮರುಗಿದ್ದಾರೆ ಮಡದಿ.

ಯಾವಾಗ ಮೇಘನಾ ಗರ್ಭಿಣಿ ಎಂದು ತಿಳಿಯಿತೋ, ಚಿರುಗೆ ಸಂಭ್ರಮವೋ ಸಂಭ್ರಮವಂತೆ. ಅಭಿಮಾನಿಗಳೊಂದಿಗೆ ಈ ಸಂತೋಷದ ವಿಷಯದ ವಿಷಯವನ್ನು ಹೇಗೆ ಹಂಚಿಕೊಳ್ಳಬೇಕಂದೂ ಹತ್ತು, ಹಲವು ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದರಂತೆ. ಆದರೆ, ಮನೆಯ ಹಿರಿಯರು ಈಗಲೇ ಯಾರಿಗೂ ಹೇಳುವುದು ಬೇಡ. ಐದು ತಿಂಗಳಾಗಲೆಂದು ಸಹಜವಾಗಿಯೇ ಹೇಳಿದ್ದರಿಂದ ವಿಷಯವನ್ನು ಬಚ್ಚಿಟ್ಟಿದ್ದರಂತೆ. ಆದ್ದರಿಂದ ಮನೆಯವರು ಹಾಗೂ ಕೆಲವೇ ಆಪ್ತರಿಗೆ ಮಾತ್ರ ಈ ಸಂತೋಷದ ಸುದ್ದಿ ತಿಳಿಸಿದ್ದರಂತೆ. ಈ ಸಂಭ್ರಮವನ್ನು ಚಿರು ಬಹಳ ಉತ್ಸಾಹದಿಂದ ಆಚರಿಸಿಕೊಳ್ಳುತ್ತಿದ್ದರು ಹಾಗೂ ಮೇಘನಾ ಜೊತೆ ಕೊನೆ ಬಾರಿ ಎಂಬಂತೆ ಶಾಪಿಂಗ್ ಸಹ ಹೋಗಿ ಬಂದಿದ್ದರು, ಅವರು ಈಗ ಇಲ್ಲದಿದ್ದರು ಅವರ ಪ್ರೀತಿ ಚಲನ ವಲನಗಳು ಇಂದಿಗೂ ಜೀವಂತವಾಗಿದೆ.

Leave A Reply

Your email address will not be published.