ಅತಿಯಾಗಿ ಚಿಕನ್ ಮಟನ್ ತಿಂದ್ರೆ ಏನಾಗುತ್ತೆ ಗೊತ್ತೆ ನಿಮಗಿದು ಗೊತ್ತಿರಲಿ

0 2

ಮಾಂಸಾಹಾರ ಪ್ರಿಯರಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಮಾಂಸಾಹಾರ ಪ್ರಿಯರಿಗೆ ದಿನವೆಲ್ಲ ಚಿಕನ್ ನೀಡಿದರು ಅದನ್ನು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಇಷ್ಟಪಡುವವರು ಚಿಕನ್ ನೊಂದಿಗೆ ಪ್ರಯತ್ನಿಸಬಹುದಾದ ಎಲ್ಲಾ ರೀತಿಯ ಪಾಕವಿಧಾನವನ್ನು ಮಾಡಿರುತ್ತಾರೆ. ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ವಸ್ತುವಾಗಿದ್ದು, ಪ್ರೋಟೀನ್ ನಿಂದ ತುಂಬಿರುತ್ತದೆ. ಇದನ್ನು ಸೇವಿಸುವುದರಿಂದ ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಅದೇ ಮಾಂಸಾಹಾರಿಗಳಿಗೆ ಅತಿಯಾಗಿ ಚಿಕನ್ ತಿನ್ನುವುದು ಸಹ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಬಹುದು ಅದನ್ನು ಇಲ್ಲಿ ನೋಡೋಣ.

ಚಿಕನ್ ಪ್ರೋಟೀನ ಒಂದು ಅತ್ಯುತ್ತಮ ಮೂಲವಾಗಿರುವುದು ಎಷ್ಟು ಸತ್ಯವೋ ದಿನನಿತ್ಯದಲ್ಲಿ ಸೇವಿಸುವುದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಆದರೆ ಇದನ್ನು ನೀವು ಹೇಗೆ ಸೇವಿಸುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಯಾವಾಗಲೂ ಡೀಪ್ ಫ್ರೈಡ್ ಮಾಡಿರುವ ಚಿಕನ್ನ ಸೇರಿಸುತ್ತಿದ್ದರೆ, ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅಂದರೆ ಈ ರೀತಿಯ ಚಿಕನ್ ತಯಾರಿಸಲು ಹೆಚ್ಚಿನ ಆರೋಗ್ಯಕ್ಕೆ ಹಾನಿಯಾಗುವಂತಹ ವಸ್ತುಗಳನ್ನು ಬಳಸಿರುತ್ತಾರೆ.ಅಲ್ಲದೆ ಈ ರೀತಿಯ ಚಿಕನ್ ತಯಾರಿಸಲು ಹೆಚ್ಚಿನ ತಾಪಮಾನವನ್ನು ಬಳಸುವ ಕಾರಣ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವಾಸ್ತವವಾಗಿ, ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕೆಂಪು ಮಾಂಸದಂತೆಯೇ ಬಿಳಿ ಕೋಳಿ ಮಾಂಸವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. 
ಚಿಕನನ್ನು ಹೆಚ್ಚಿನ ಶಾಖದ ಆಹಾರವೆಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದ ಒಟ್ಟಾರೆ ತಾಪಮಾನವನ್ನು ಹೆಚ್ಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ದೇಹದಲ್ಲಿ ಶಾಖವನ್ನು ಉಂಟು ಮಾಡಬಹುದು. ಈ ಕಾರಣದಿಂದಾಗಿ ಕೆಲವರು ಇದನ್ನು ಸೇವಿಸಲು ಇಷ್ಟಪಡುವುದಿಲ್ಲ. ಇದರಿಂದ ಕೆಲವು ಜನರಿಗೆ ಮೂಗು ಸ್ರವಿಸುವ ಅನುಭವವಾಗಬಹುದು. ಈ ರೀತಿಯ ಅನುಭವವಾಗಲು ಪ್ರಮುಖ ಕಾರಣವೆಂದರೆ ಕೋಳಿಮಾಂಸ ಹೊಂದಿರುವ ಹೆಚ್ಚಿನ ಶಾಖ.

ವಿಶೇಷವಾಗಿ ಕೆಲವು ಜನರಿಗೆ ಬೇಸಿಗೆಯ ಸಮಯದಲ್ಲಿ ಕೋಳಿಮಾಂಸವನ್ನು ಸೇವಿಸಿದರೆ ಈ ರೀತಿಯ ಅನುಭವವಾಗುತ್ತದೆ. ಇದರ ಜೊತೆಗೆ ದೈನಂದಿನ ಕೋಳಿಮಾಂಸದ ಸೇವನೆಯಿಂದಾಗಿ ಈ ಪರಿಸ್ಥಿತಿಯು ಸಂಭವಿಸಬಹುದು. ನಿಯಮಿತವಾಗಿ ಚಿಕನ್ ತಿನ್ನುವುದರಿಂದ ಆಗುವ ಮತ್ತೊಂದು ಅಡ್ಡಪರಿಣಾಮವೆಂದರೆ ನಿಮ್ಮ ತೂಕ ಹೆಚ್ಚಾಗುವುದು.

ಚಿಕನ್ ಬಿರಿಯಾನಿ, ಬಟರ್ ಚಿಕನ್,ಫ್ರೈಡ್ ಚಿಕನ್ ಮತ್ತು ಇನ್ನೂ ಅನೇಕ ಆಹಾರ ಪದಾರ್ಥಗಳು ಹೆಚ್ಚಿನ ಕ್ಯಾಲೊರಿ ಹೊಂದಿರುವ ಆಹಾರ ಪದಾರ್ಥಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಕೇವಲ ಒಂದು ಬಾರಿ ಸೇರಿಸುವುದಾದರೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಆದರೆ ಇದೇ ರೀತಿಯ ಆಹಾರ ಪದಾರ್ಥಗಳ ನಿಯಮಿತ ಸೇವನೆಯು ಖಂಡಿತವಾಗಿಯೂ ನಿಮ್ಮ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಹೆಚ್ಚಿನ ಜನರು ಪ್ರತಿನಿತ್ಯದಲ್ಲಿ ಮಾಂಸಾಹಾರ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಪ್ರತಿನಿತ್ಯ ಮಾಂಸಾಹಾರ ಸೇವನೆಯು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.ಪ್ರತಿದಿನ ಈ ರೀತಿಯ ಮಾಂಸಾಹಾರ ಸೇವನೆ ಮಾಡುವುದರಿಂದ ನಿಮ್ಮ ತೂಕ ಹೆಚ್ಚಳವಾಗುತ್ತದೆ ಮತ್ತು ಇದರ ಜೊತೆಗೆ ಕೊಲೆಸ್ಟ್ರಾಲ್ ಪ್ರಮಾಣವೂ ಸಹ ಹೆಚ್ಚಳವಾಗುವ ಕಾರಣ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ಈ ರೀತಿಯ ಮಾಂಸಹಾರ ಸೇವನೆ ಮಾಡಿದರೂ ಸಹ ನೀವು ದೈನಂದಿನ ದೈಹಿಕ ಚಟುವಟಿಕೆ ಮಾಡುವುದನ್ನು ಮರೆಯಬೇಡಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.