ನಾವಿಂದು ನಿಮಗೆ ನಮ್ಮ ರಾಜ್ಯದ ಬಲು ಅಪರೂಪದ ಸಾಧಕರನ್ನ ಪರಿಚಯ ಮಾಡಿಕೊಡುತ್ತೇವೆ ಇವರು ಜೀವನದಲ್ಲಿ ಕನಸನ್ನು ಕಂಡವರು ಕಂಡ ಕನಸನ್ನು ನನಸು ಮಾಡುವುದಕ್ಕಾಗಿ ಗುರಿಯನ್ನು ಬೆನ್ನಟ್ಟಿ ಸಾಗಿದವರು. ಇವರು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ನಮ್ಮ ದೇಶಕ್ಕೆ ಮಾದರಿಯಾಗಿರುವವರು ಇವರ ಹೆಸರು ಗೋವಿಂದರಾಜು ಪೂಜಾರಿ ಇವರ ಯಶಸ್ಸಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ತಿಳಿಸಿಕೊಡುತ್ತೇವೆ.

ಗೋವಿಂದ್ ರಾಜು ಪೂಜಾರಿ ಅವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನ ಬಿಜ್ಜುರಿನವರು ಇವರು ಹುಟ್ಟಿದ್ದು ಬಡಕುಟುಂಬದಲ್ಲಿ ಇವರ ತಂದೆ ತಾಯಿ ಕೃಷಿಕೂಲಿಯನ್ನು ಮಾಡುವಂಥವರು ಇವರು ಕೇವಲ ಏಳನೇ ತರಗತಿಯವರೆಗೆ ತಮ್ಮ ಶಿಕ್ಷಣವನ್ನು ಮುಗಿಸಿದ್ದಾರೆ. ಇವರು ಚಿಕ್ಕವಯಸ್ಸಿನಲ್ಲೇ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು ಜೊತೆಗೆ ಜನರಿಗೆ ಕೆಲಸವನ್ನು ಕೊಡುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆಯಿತ್ತು ಆ ಕಾರಣಕ್ಕಾಗಿ ಅವರು ಏಳನೇ ತರಗತಿಯವರೆಗೆ ಶಿಕ್ಷಣ ಮುಗಿಸಿ ಮುಂದೆ ಮುಂಬೈಗೆ ತೆರಳುತ್ತಾರೆ. ಇವರದೇ ಊರಿನ ಶಿವಮ್ಮ ಪೂಜಾರ್ತಿ ಅವರ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಮೊದಲು ಇವರು ಕೆಲಸ ಮಾಡಿದ್ದು ಹೋಟೆಲ್ ನಲ್ಲಿ ಪ್ಲೇಟ್ ತೊಳೆಯುವ ಮತ್ತೆ ಟಿ ಮೇಕರ್ ಆಗಿ ತಮ್ಮ ಕೆಲಸವನ್ನು ಆರಂಭಿಸುತ್ತಾರೆ ಟೀ ಮೇಕರ್ ಆಗಿ ಹೊರಗಡೆಗಳಲ್ಲಿ ಚಾ ಸರ್ವಿಸ್ ನೀಡುತ್ತಿದ್ದರು ಹೀಗೆ ಮೂರು ವರ್ಷಗಳ ಕಾಲ ಇದೆ ಕೆಲಸ ಮಾಡುತ್ತಿರುತ್ತಾರೆ ಈ ಸಮಯದಲ್ಲಿ ಊರಿನಲ್ಲಿ ಇವರ ತಮ್ಮ ಮರದಿಂದ ಬಿದ್ದು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಾರೆ.

ಇವರು ಮುಂಬೈನಲ್ಲಿ ಇದ್ದುಕೊಂಡು ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಾರೆ ಅವರಿಗೆ ಯಾವುದೇ ರೀತಿಯ ಕೊರತೆ ಆಗದಹಾಗೆ ಮನೋಡಿಕೊಳ್ಳುತ್ತಾರೆ ಅವರು ಹೇಳುವ ಪ್ರಕಾರ ತಂದೆ-ತಾಯಿಗಳು ಎಲ್ಲರಿಗೂ ಮೊದಲ ದೇವರಾಗಿರುತ್ತಾರೆ ಅವರಿಗೆ ಯಾವುದೇ ರೀತಿ ಕೊರತೆ ಬಾರದಂತೆ ನೋಡಿಕೊಂಡರೆ ದೇವರು ಖುಷಿಯಾಗುತ್ತಾನೆ. ತಮ್ಮನ ಮರಣದ ನಂತರ ಮತ್ತೆ ಮುಂಬೈಗೆ ಹಿಂದಿರುಗಿ ಬಿ ಎಸ್ ಟಿ ಕ್ಯಾಂಟೀನ್ನಲ್ಲಿ ಚಾ ಮತ್ತು ಕುಕಿಂಗ್ ನಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ನಂತರ ಮುಂಬೈನಲ್ಲಿ ಎರಡು ಮೂರು ಬಿ ಎಸ್ ಟಿ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಾರೆ. ನಂತರ ಬಿರ್ಲಾದ ಸನ್ನಿ ಬಾರ್ನಲ್ಲಿ ಕುಕ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ನಂತರ ಜೂ ಒರಿಜನ್ ಹೋಟೆಲ್ ಎದುರುಗಡೆ ತಮ್ಮದೇ ಆದ ಜನರಲ್ ಸ್ಟೋರ್ ಅನ್ನು ಮಾಡುತ್ತಾರೆ ಅವರು ನಾಲ್ಕೈದು ವರ್ಷಗಳಿಂದ ಕಷ್ಟಪಟ್ಟು ದುಡಿದ ಮೂರು ನಾಲ್ಕು ಲಕ್ಷದಿಂದ ಅಂಗಡಿಯನ್ನು ಪ್ರಾರಂಭ ಮಾಡುತ್ತಾರೆ ಆದರೆ ಅಲ್ಲಿ ಇವರಿಗೆ ತುಂಬಾ ನಷ್ಟ ಉಂಟಾಗುತ್ತದೆ. ನಾಲ್ಕೈದು ವರ್ಷದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣ ಪೂರ್ತಿ ಕೈತಪ್ಪಿ ಹೋಗುತ್ತದೆ ಚಿಂತೆಗೊಳಗಾದ ಇವರು ತಮ್ಮ ಹುಟ್ಟೂರಿಗೆ ಹಿಂತಿರುಗುತ್ತಾರೆ ಆದರೆ ತಾನು ಜೀವನದಲ್ಲಿ ಅಂದುಕೊಂಡ ಗುರಿಯನ್ನು ತಲುಪಲೇ ಬೇಕು ಎಂಬ ಹಠ ಇವರಲ್ಲಿ ಮತ್ತೆ ಎಚ್ಚೆತ್ತುಕೊಂಡಾಗ ಮತ್ತೆ ಮುಂಬೈಗೆ ಹಿಂತಿರುಗುತ್ತಾರೆ.

ಇವರ ಅಂಗಡಿಗೆ ಪಾನ್ ತೆಗೆದುಕೊಳ್ಳುವುದಕ್ಕೆ ಫ್ರಾನ್ಸಿಸ್ ಎನ್ನುವವರು ಬರುತ್ತಿದ್ದರು ಅವರು ಒಂದು ಫೈ ಸ್ಟಾರ್ ಹೋಟೆಲ್ ನ ಯೂನಿಯನ್ ಲೀಡರ್ ಆಗಿದ್ದರು ಅವರು ಬಂದು ಇವರ ಕಷ್ಟವನ್ನು ಕೇಳಿ ಗೋವಿಂದ್ ರಾಜು ಪೂಜಾರಿ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಜ್ಯೂ ಅಲ್ಲಿ ರೆಮೆಡಾ ಫಾರ್ಮ್ ಗುರು ಎಂಬ ಫೈ ಸ್ಟಾರ್ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಸುತ್ತಾರೆ ಗೋವಿಂದರಾಜು ಅವರಿಗೆ ಅಡುಗೆ ಕೆಲಸದಲ್ಲಿ ಆಸಕ್ತಿ ಇದ್ದರೂ ಇವರಿಗೆ ಮೊದಲು ಪ್ಲೇಟ್ ತೊಳೆಯುವ ಕೆಲಸ ಮಾಡುವಂತೆ ತಿಳಿಸುತ್ತಾರೆ ಪಾತ್ರೆ ತೊಳೆಯುವ ಕೆಲಸದ ಜೊತೆಗೆ ಬಿಡುವಿನಲ್ಲಿ ಇವರು ಅಡುಗೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಇದರಿಂದಾಗಿ ಹೋಟೆಲ್ ಅವರು ಮೂರು ತಿಂಗಳಿನಲ್ಲಿ ಕುಕ್ಕಿಂಗ್ ಡಿಪಾರ್ಟ್ಮೆಂಟ್ ಗೆ ಸೇರಿಸಿಕೊಳ್ಳುತ್ತಾರೆ ನಂತರ ಇವರ ಜೊತೆ ಇರುವ ಶೇಪ್ ಅಮಿತ್ ಎನ್ನುವವರು ನೀವು ಇನ್ನೂ ಮುಂದಿನ ಹಂತಕ್ಕೆ ಹೋಗಬೇಕೆಂದರೆ ನೀವು ಇನ್ನೂ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಬೇಕು ಎಂದು ಹೇಳುತ್ತಾರೆ ಆಗ ಇವರು ಇಲ್ಲ ತಾನು ತನ್ನ ಸ್ವಂತ ಉದ್ಯೋಗವನ್ನು ಮಾಡಬೇಕು ಎಂದುಕೊಂಡಿದ್ದೇನೆ ಎಂದು ಹೇಳಿ ಅಲ್ಲಿಂದ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಮಾಡುತ್ತಾರೆ.

ಗೋವಿಂದರಾಜು ಅವರು ತಮ್ಮ ಇಪ್ಪತ್ತೆಲಳನೇ ವಯಸ್ಸಿನಲ್ಲಿ ಚೆಪ್ ಟಾಕ್ ಎಂಬ ತಮ್ಮದೇ ಆದ ಸ್ವಂತ ಕ್ಯಾಟರಿಂಗ್ ಮಾಡುತ್ತಾರೆ ಮೊದಲು ಇವರು ಇಂಡಿಯಾ ಇನ್ ಪುಲೀಯನ್ ಎಂಬ ಸಣ್ಣ ಕಂಪೆನಿ ಆರಂಭಿಸುತ್ತಾರೆ ಪ್ರಾರಂಭದಲ್ಲಿ ಒಂದು ಚಿಕ್ಕ ಅಡುಗೆ ಮನೆಯಲ್ಲಿ ಐದು ಜನರಿಂದ ಕೆಲಸ ಆರಂಭವಾಗುತ್ತದೆ ನಂತರ ಇದು ಬೆಳೆದು ದೊಡ್ಡದಾಗಿ ಮುಂಬೈನಲ್ಲಿ ಸುಮಾರು ಇವರದೇ ಮುವತ್ತು ಕಂಪನಿಗಳು ಪ್ರಾರಂಭವಾಗುತ್ತದೆ ಇವರು ಮಾಡುವ ಅಡುಗೆಯ ಕ್ವಾಲಿಟಿ ಮತ್ತು ಸ್ಟ್ಯಾಂಡರ್ಡ್ ಗಳನ್ನ ಗಮನಿಸಿ ಇವರಿಗೆ ತುಂಬಾ ಆಫರ್ ಗಳು ಬರುತ್ತವೆ. ಇವರು ಒಂದು ದಿನಕ್ಕೆ ಐದು ರಾಜ್ಯಗಳಲ್ಲಿ ಒಂದು.ಐದು ಲಕ್ಷ ಜನರಿಗೆ ಆಹಾರವನ್ನು ಒದಗಿಸುತ್ತಾರೆ. ಪ್ರಾರಂಭದಲ್ಲಿ ಕ್ಲೀನಿಂಗ್ ಮಾಡುವ ಕೆಲಸವನ್ನು ಮಾಡುತ್ತಿದ್ದ ಇವರು ಇಂದು ದೊಡ್ಡಮಟ್ಟದ ಉದ್ಯಮಿಯಾಗಿ ಬೆಳೆದಿದ್ದಾರೆ.

ಗೋವಿಂದರಾಜು ಅವರು ತುಂಬಾ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾರೆ ಸಲಾಡ್ ಒಂದರಲ್ಲಿಯೆ ಸುಮಾರು ಮುನ್ನೂರು ವಿಧವಾದ ಸಲಾಡುಗಳನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಇವರ ಕಿಚನ್ ಸೆಂಟರ್ ಇದೆ ಬೆಂಗಳೂರಿನಲ್ಲಿ ವೈಟ್ಫೀಲ್ಡ್ ನಿಂದ ಹಿಡಿದು ಎಲೆಕ್ಟ್ರಿಕ್ ಸಿಟಿಯವರೆಗೆ ಎಲ್ಲ ಕೋಪರೇಟಿವ್ ಕಂಪನಿಗಳಿಗೆ ಊಟವನ್ನು ಡಿಸ್ಟ್ರಿಬ್ಯೂಟ್ ಮಾಡುತ್ತಾರೆ. ಒಂದು ಕಾಲದಲ್ಲಿ ಕೆಲಸವನ್ನರಸಿ ಮುಂಬೈಗೆ ಹೋದ ಇವರು ಇಂದು ತಮ್ಮ ಕಂಪನಿಯಲ್ಲಿ ಐದೂವರೆ ಸಾವಿರ ಜನರಿಗೆ ಉದ್ಯೋಗವನ್ನು ನೀಡಿದ್ದಾರೆ.

ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ವೈದ್ಯಕೀಯ ಸೌಲಭ್ಯಗಳನ್ನು ನೀಡಿದ್ದಾರೆ ಅಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯವನ್ನು ಮಾಡುತ್ತಾರೆ ಕೆಲಸ ಮಾಡುವವರಿಗೆ ಯಾವುದೇ ರೀತಿಯ ಕಷ್ಟಗಳು ಬಂದಾಗ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇವರು ಒಂದು ವರ್ಷಕ್ಕೆ ಸುಮಾರು ನೂರಾ ಮೂವತ್ತರಿಂದ ನೂರಾ ಐವತ್ತು ಕೋಟಿಯವರೆಗೆ ಟರ್ನಓವರ್ ಗಳನ್ನು ಮಾಡುತ್ತಾರೆ.

ಇಂದಿರಾ ಕ್ಯಾಂಟೀನ್ ಸರ್ಕಾರದ ಮೇಜರ್ ಸ್ಕೀಮ್ ಅಂತನೇ ಹೇಳಬಹುದು ಇದರ ಟೆಂಡರ್ ಕರೆದಂತಹ ಸಂದರ್ಭದಲ್ಲಿ ಸಾಕಷ್ಟು ಜನರು ಇದಕ್ಕೆ ಅರ್ಜಿಯನ್ನು ಹಾಕಿರುತ್ತಾರೆ ಗೋವಿಂದರಾಜು ಅವರಿಗೆ ಇದರ ಟೆಂಡರ್ ಸಿಗುತ್ತದೆ ಅವರು ತಯಾರಿಸುವ ಆಹಾರ ಕ್ವಾಲಿಟಿ ಮತ್ತು ಸ್ಟ್ಯಾಂಡರ್ಡ್ ಆಧಾರದ ಮೇಲೆ ಅವರಿಗೆ ಟೆಂಡರ್ ಸಿಗುತ್ತದೆ ಸುಮಾರು ನೂರು ಕ್ಯಾಂಟೀನ್ ಗಳನ್ನು ಚಾಲೆಂಜ್ ಆಗಿ ತೆಗೆದುಕೊಂಡು ಆಹಾರ ವಿತರಿಸುವ ಮೂಲಕ ಯಶಸ್ಸನ್ನ ಸಾಧಿಸುತ್ತಾರೆ.

ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಕಂಪನಿಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಅದಕ್ಕೆ ಕಾರಣ ಇವರಿಗಿರುವ ತಿಳುವಳಿಕೆ ಅವರಲ್ಲಿರುವ ಛಲ ಮತ್ತು ಆರಂಭದಲ್ಲಿ ಇದರ ಜೊತೆ ಕೆಲಸ ಮಾಡಿದವರ ಶ್ರಮ ಈ ಮೂರು ಒಟ್ಟಾಗಿ ಇಂದು ಅವರು ಅಷ್ಟು ಎತ್ತರದ ಮಟ್ಟಕ್ಕೆ ಬೆಳೆದಿದ್ದಾರೆ. ಚೆಫ್ ಟಾಕ್ ಮೂಲಕ ಈಗಾಗಲೇ ಐದು ರಾಜ್ಯಗಳಲ್ಲಿ ತಮ್ಮ ಸರ್ವಿಸನ್ನು ಕೊಡುತ್ತಿದ್ದಾರೆ ಇದರ ಜೊತೆಗೆ ಇನ್ನೂ ಎರಡು ಮೂರು ರಾಜ್ಯಗಳಲ್ಲಿ ತಮ್ಮ ಸರ್ವಿಸ್ ಕೊಡಬೇಕೆಂಬ ಗುರಿಯನ್ನಿತ್ತುಕೊಂಡಿದ್ದಾರೆ.ಇದರ ಜೊತೆಗೆ ತಮ್ಮ ಚೆಫ್ ಟಾಕ್ ನಲ್ಲಿ ಏಳರಿಂದ ಎಂಟು ಸಾವಿರ ಜನರಿಗೆ ಉದ್ಯೋಗವನ್ನು ಒದಗಿಸಬೇಕು ಎಂದುಕೊಂಡಿದ್ದಾರೆ. ಇದರ ಜೊತೆಗೆ ಇವರದೇ ಆದ ಪ್ರಜ್ಞಾ ಸಾಗರ ಎಂಬ ಹೋಟೆಲ್ ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಹೋಟೆಲ್ ಗಳಿವೆ.

ಇವರ ಮುಖ್ಯ ಉದ್ದೇಶ ತನ್ನ ಉದ್ಯಮದಲ್ಲಿ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗವನ್ನು ಒದಗಿಸಬೇಕು ಎನ್ನುವುದು ಇವರ ಮುಖ್ಯ ಉದ್ದೇಶ. ಇವರು ಭಾರತದಲ್ಲಿಯೇ ಮೊದಲ ಬಾರಿಗೆ ಫಿಶ್ ಚಿಪ್ಸ್ ಗಳನ್ನು ಮಾರುಕಟ್ಟೆಗೆ ತಂದಿದ್ದಾರೆ ಈಗಾಗಲೇ ಹೆಬ್ಬಾಳದಲ್ಲಿ ಸಣ್ಣ ಮಟ್ಟದಲ್ಲಿ ಇವರ ಉದ್ಯಮ ನಡೆಯುತ್ತಿದ್ದು ಅದನ್ನ ದೊಡ್ಡಮಟ್ಟದಲ್ಲಿ ಉಡುಪಿ ಬೈಂದೂರು ಸೈಡಿನ ಹಳ್ಳಿ ಭಾಗದ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಒಂದು ಉದ್ಯಮವನ್ನು ಪ್ರಾರಂಭಿಸುವ ಯೋಜನೆಯನ್ನು ನಡೆಸುತ್ತಿದ್ದಾರೆ.

ಸಾಧನೆಯನ್ನು ಮಾಡುವವರಿಗೆ ಛಲ ಹೆಚ್ಚಿರಬೇಕು ಹಠ ಹೆಚ್ಚಿರಬಾರದು ಛಲ ಇರುವವರು ನೂರರಲ್ಲಿ ಶೇಕಡಾ ಮೂವತ್ತರಷ್ಟು ಯಶಸ್ಸನ್ನು ಸಾಧಿಸಬಹುದು. ಇವರ ಇಷ್ಟು ದೊಡ್ಡ ಮಟ್ಟದ ಯಶಸ್ಸು ಇವರ ತಂದೆ ತಾಯಿಗೂ ಕೂಡ ತುಂಬಾ ಖುಷಿಯನ್ನು ತಂದುಕೊಟ್ಟಿದೆ. ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅನೇಕ ಜನರಿಗೆ ಮನೆಯನ್ನು ಕಟ್ಟಿಸಿ ಕೊಟ್ಟಿದ್ದಾರೆ ವೈದ್ಯಕೀಯ ಸಹಾಯವನ್ನು ಮಾಡಿದ್ದಾರೆ ಶಿಕ್ಷಣಕ್ಕೆ ಸಹಾಯವನ್ನು ಮಾಡಿದ್ದಾರೆ ಅನೇಕ ಜನರಿಗೆ ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದಾರೆ.

ಇವರದೇ ಆದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟನ್ನು ನಿರ್ಮಿಸಿ ಅದರಿಂದ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಶಿಕ್ಷಣವನ್ನು ಒದಗಿಸುತ್ತಿದ್ದಾರೆ ಜೊತೆಗೆ ತಮ್ಮ ಬೈಂದೂರು ಭಾಗದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವಂತಹ ಜನರಿಗೆ ಎರಡು ವರ್ಷಗಳಿಂದ ನೀರಿನ ಪೂರೈಕೆಯನ್ನು ಮಾಡುತ್ತಿದ್ದಾರೆ. ಈ ರೀತಿಯಾಗಿ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ ಇಂಡಿಯನ್ ಲೀಡರ್ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಬೆಸ್ಟ್ ಹೈಜೆನಿಕ್ ಕ್ವಾಲಿಟಿ ಫುಡ್ಸ್ ಸರ್ವಿಸ್ ಅವಾರ್ಡ್ ಇನ್ನೂ ಅನೇಕ ಪ್ರಶಸ್ತಿ ಗಳನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ.

ಸಾಧಿಸಬೇಕು ಎಂಬ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಗೋವಿಂದ್ ರಾಜು ಪೂಜಾರಿ ಅವರ ಕಥೆಯನ್ನು ನೋಡಿದಾಗ ತಿಳಿಯುತ್ತದೆ ಇಷ್ಟು ದೊಡ್ಡ ಸಾಧನೆಯನ್ನು ಮಾಡುವ ಮೂಲಕ ಗೋವಿಂದ ಪೂಜಾರಿಯವರು ಇಂದಿನ ಯುವ ಪೀಳಿಗೆಯವರಿಗೆ ಆದರ್ಶಪ್ರಾಯರಾಗಿದ್ದಾರೆ ಅವರ ಈ ಯಶಸ್ಸು ಇನ್ನು ಎತ್ತರಕ್ಕೆ ಹೋಗಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಕೀರ್ತಿ ಪಸರಿಸಲಿ ಎಂದು ನಾವೆಲ್ಲರೂ ಆಶಿಸೋಣ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!