ಆತ್ಮೀಯ ಓದುಗರೇ ಇತಿಹಾಸದಲ್ಲಿ ಚಾಣಕ್ಯನ ಹೆಸರು ಶಾಶ್ವತವಾಗಿ ಉಳಿದಿರುವುದಕ್ಕೆ ಕಾರಣ ಆತನ ಬುದ್ಧಿವಂತಿಕೆ ಮತ್ತು ಇಂದಿಗೂ ಪ್ರಸ್ತುತ ಎನಿಸುವ ಆತನ ನೀತಿಗಳು ಅದರಲ್ಲಿಯೂ ಹೆಂಗಸರ ಬಗ್ಗೆ ಚಾಣಕ್ಯನ ನೀತಿ ಮಾತುಗಳು ಬಹಳವೇ ಕಟುವಾಗಿವೆ.
ಚಾಣಕ್ಯ ಸ್ತ್ರೀಯರ ಬಗ್ಗೆ ಹೇಳಿರುವ ಮಾತುಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಚಾಣಕ್ಯನೀತಿ ಒಂದು. ಸ್ತ್ರೀ ಒಬ್ಬನೊಡನೆ ಮಾತನಾಡುತ್ತಿದ್ದರೆ ಒಬ್ಬನನ್ನು ನೋಡುತ್ತಿರುತ್ತಾಳೆ ಮತ್ತೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಾಳೆ ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ. ಇದು ಚಾಣಕ್ಯ ಹೇಳಿದ ಮಾತು ಕೇಳುವುದಕ್ಕೆ ಕೊಂಚ ಕಟುವಾದರೂ ಇದು ಸತ್ಯ ಎಂದು ನಿಮಗೆಲ್ಲರಿಗೂ ತಿಳಿದಿರುತ್ತದೆ. ಇದಿಷ್ಟೇ ಅಲ್ಲ ಎಂತಹ ಹೆಣ್ಣನ್ನು ಮದುವೆಯಾಗಬೇಕು ಎಂಬುದನ್ನು ಚಾಣಕ್ಯ ಹೇಳಿದ್ದಾನೆ.
ಚಾಣಕ್ಯನೀತಿ ಎರಡು. ಬುದ್ಧಿಶಾಲಿ ಯಾದವನು ಅಷ್ಟೇನೂ ರೂಪಸಿ ಅಲ್ಲದಿದ್ದರೂ ಅಂಗವಿಕಲೆಯಾದರೂ ಉತ್ತಮ ಮನೆತನದ ಕನ್ಯೆಯನ್ನು ವಿವಾಹವಾಗಬೇಕು ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಸುಂದರಿಯಾದರೂ ಸಹ ವಿವಾಹವಾಗಬಾರದು. ಸಾಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು. ಹೌದು ಸೌಂದರ್ಯವನ್ನು ನೋಡುವುದಕ್ಕಿಂತ ಉತ್ತಮ ಮನೆತನದ ಸ್ತ್ರೀಯನ್ನು ವಿವಾಹವಾಗುವುದು ಒಳ್ಳೆಯದು ಎಂದು ಚಾಣಕ್ಯನೀತಿ ಮಾತಿನಲ್ಲಿ ಹೇಳಿದ್ದಾನೆ. ಇನ್ನು ಪತ್ನಿಯಾದವಳು ಹೇಗಿರಬೇಕು ಎನ್ನುವುದನ್ನು ಕೂಡ ಚಾಣಕ್ಯ ತಿಳಿಸಿದ್ದಾರೆ.
ಚಾಣಕ್ಯನೀತಿ ಮೂರು. ದುಷ್ಟಳಾದ ಹೆಂಡತಿ ತೋರಿಕೆಯ ಸ್ನೇಹಿತ ವಾಚಾಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಮಾಡುವುದು ಇವು ಸಾವಿಗೆ ಸಮಾನ. ದುಷ್ಟಳಾದ ಹೆಂಡತಿಯನ್ನು ಕಟ್ಟಿಕೊಂಡು ಮನೆಯಲ್ಲಿರುವುದು ಒಂದೇ ಹಾವಿರುವ ಮನೆಯಲ್ಲಿರುವುದು ಒಂದೇ ಎಂದು ಚಾಣಕ್ಯ ಹೇಳಿದ್ದಾನೆ.
ಚಾಣಕ್ಯನೀತಿ ನಾಲ್ಕರಲ್ಲಿ ಹೆಂಡತಿಯಾದವಳು ಹೇಗಿರಬೇಕು ಎನ್ನುವುದನ್ನು ಚಾಣಕ್ಯ ಹೇಳಿದ್ದಾರೆ ಪವಿತ್ರಳು ಪತಿವ್ರತೆಯೂ ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವವಳೆ ಸತಿ. ಇದನ್ನೆಲ್ಲಾ ಗಮನಿಸಿದರೆ ನೀವು ಚಾಣಕ್ಯನನ್ನು ಸ್ತ್ರೀ ದ್ವೇಷಿ ಎಂದು ತಿಳಿಯಬಹುದು ಆದರೆ ಹಾಗೇನೂ ಇಲ್ಲ ಸ್ತ್ರೀಯರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಪುರುಷರಿಗೂ ಚಾಣಕ್ಯ ತಿಳಿ ಹೇಳಿದ್ದಾನೆ.
ಚಾಣಕ್ಯನೀತಿ ಐದು. ಪತ್ನಿಯ ಮನಸ್ಸು ನೋಯಿಸದೆ ಆಕೆಯಿಂದ ಪಡೆಯುವ ಸುಖವೇ ನಿಜವಾದ ಸುಖ ಆಕೆ ನೀಡುವ ಊಟವೆ ಮೃಷ್ಟಾನ್ನ ಅತಿಯಾಗಿ ಆಕೆಯಿಂದ ಸುಖವನ್ನು ಅಪೇಕ್ಷಿಸುವುದು ಅಪಾಯಕಾರಿ ಇದೇ ರೀತಿ ಅಧ್ಯಯನ ಜಪ ದಾನ ಈ ವಿಷಯಗಳ ಬಗ್ಗೆ ಸಾಕು ಸಾಕೆನ್ನುವ ಭಾವನೆಯನ್ನು ಬಯಸುವ ಮನುಷ್ಯ ಎಂದಿಗೂ ಉನ್ನತಿಯನ್ನು ಹೊಂದಲಾರ ಎಂದು ಚಾಣಕ್ಯ ಅವರು ತಮ್ಮ ನೀತಿಗಳಲ್ಲಿ ತಿಳಿಸಿದ್ದಾರೆ.ಈ ರೀತಿಯಾಗಿ ಚಾಣಕ್ಯ ತಿಳಿಸಿರುವ ಮಾತುಗಳು ತುಂಬಾ ಅರ್ಥಪೂರ್ಣವಾಗಿದೆ ಅವುಗಳನ್ನು ಅರ್ಥಮಾಡಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.