ನಿಮ್ಮಲ್ಲಿ ಈ 4 ಗುಣ ಇದ್ರೆ ಖಂಡಿತ ನೀವು ಯಾವತ್ತು ಶ್ರೀಮಂತ ವ್ಯಕ್ತಿ ಆಗುವುದಿಲ್ಲ ಅಂತಾರೆ ಚಾಣಿಕ್ಯ

0 8

ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ದುಡ್ಡು ಸಂಪಾದನೆ ಮಾಡಬೇಕು ಶ್ರೀಮಂತ ವ್ಯಕ್ತಿ ಆಗಬೇಕು ಎಂದು ಕನಸು ಕಾಣುತ್ತಾನೆ. ಆದರೆ ಶ್ರೀಮಂತ ವ್ಯಕ್ತಿ ಆಗುವುದಕ್ಕೆ ಕೆಲವು ನಿಯಮಗಳಿವೆ ಮತ್ತು ಮನುಷ್ಯನಲ್ಲಿ ಒಳ್ಳೆಯ ಗುಣಗಳು ಕೂಡ ಇರಬೇಕು. ನಾವಿಂದು ನಿಮಗೆ ಆಚಾರ್ಯ ಚಾಣಕ್ಯರು ಹೇಳಿರುವ ಮನುಷ್ಯನಲ್ಲಿರುವ ನಾಲ್ಕು ಕೆಟ್ಟ ಗುಣಗಳು ಯಾವುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.

ಮನುಷ್ಯನಲ್ಲಿರುವ ಆ ನಾಲ್ಕು ಕೆಟ್ಟ ಗುಣಗಳು ಆತನನ್ನ ಶ್ರೀಮಂತನಾಗುವುದಕ್ಕೆ ಬಿಡುವುದಿಲ್ಲ. ಹಾಗಾದರೆ ಆ ನಾಲ್ಕು ಕೆಟ್ಟ ಗುಣಗಳು ಯಾವುದು ಎಂಬುದನ್ನು ನೋಡುವುದಾದರೆ ಮೊದಲನೆಯದು ಸೂರ್ಯೋದಯದ ನಂತರ ಮಲಗುವುದು. ಯಾವ ವ್ಯಕ್ತಿ ಸೂರ್ಯೋದಯವಾದ ನಂತರ ತುಂಬಾ ಹೊತ್ತಿನವರೆಗೆ ಮಲಗಿರುತ್ತಾನೆ ಮಧ್ಯಾಹ್ನ ಊಟದ ನಂತರ ಮಲಗುತ್ತಾನೆ ಅಂತಹ ವ್ಯಕ್ತಿಗೆ ನಿದ್ದೆ ತುಂಬಾ ಮುಖ್ಯವಾಗಿರುತ್ತದೆ.

ಅಂತವರು ತಮ್ಮ ಕೆಲಸದ ಕಡೆ ತುಂಬಾ ಹೊತ್ತು ಗಮನಹರಿಸುವುದಿಲ್ಲ ಅದರ ಕಾರಣದಿಂದಾಗಿ ಅವರ ಕೆಲಸ ಸರಿಯಾಗಿ ಆಗುವುದಿಲ್ಲ. ಯಾರು ಯಶಸ್ಸನ್ನು ಸಾಧಿಸಿರುತ್ತಾರೆ ಅವರು ಸೂರ್ಯೋದಯಕ್ಕಿಂತ ಮೊದಲೇ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸಿರುತ್ತಾರೆ. ದಿನ ಪೂರ್ತಿ ಕೆಲಸ ಮಾಡುತ್ತಾರೆ ಕಠಿಣ ಪರಿಶ್ರಮವನ್ನು ಹಾಕುತ್ತಾರೆ ತಮ್ಮ ಕೆಲಸಕ್ಕೆ ಎಷ್ಟು ಬೇಕು ಅಷ್ಟು ನಿದ್ದೆ ಮಾಡುತ್ತಾರೆ.

ಎರಡನೆಯದಾಗಿ ಅಸ್ವಚ್ಛತೆ ಯಾವ ವ್ಯಕ್ತಿ ಕೊಳಕು ಬಟ್ಟೆಯನ್ನು ಹಾಕುತ್ತಾನೆ ಮತ್ತು ತನ್ನ ಶರೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ ಆತನ ಹತ್ತಿರ ಲಕ್ಷ್ಮಿ ಎಂದು ವಾಸಿಸುವುದಿಲ್ಲ. ಅದಕ್ಕಾಗಿ ನಾವು ಪ್ರತಿದಿನ ಸ್ನಾನ ಮಾಡಿ ಸ್ವಚ್ಛವಾಗಿರುವ ಬಟ್ಟೆಯನ್ನು ಹಾಕಿಕೊಳ್ಳಬೇಕು. ಎಲ್ಲಿ ಸ್ವಚ್ಛವಾಗಿರುತ್ತದೆ ಅಲ್ಲಿ ಲಕ್ಷ್ಮಿ ವಾಸಿಸುತ್ತಾಳೆ ಮತ್ತು ಮನುಷ್ಯನಲ್ಲಿ ಸ್ವಚ್ಛತೆಯು ತುಂಬಾ ಮುಖ್ಯವಾದದ್ದು ಯಾಕೆಂದರೆ ನಾವು ಯಾವುದೇ ಕೆಲಸವನ್ನು ಮಾಡುವಾಗ ಶುದ್ಧವಾಗಿ ಮಾಡಿದರೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.

ಮೂರನೆಯದಾಗಿ ಊಟದ ಮೇಲೆ ನಿಯಂತ್ರಣ ಇಲ್ಲದಿರುವುದು. ಯಾವ ವ್ಯಕ್ತಿ ತನ್ನ ಊಟದ ಮೇಲೆ ಅಂದರೆ ನಾಲಿಗೆಯ ಮೇಲೆ ನಿಯಂತ್ರಣ ಮಾಡುವುದಿಲ್ಲ ಅಂತಹ ವ್ಯಕ್ತಿ ತುಂಬಾ ಸುಸ್ತಾಗಿರುತ್ತಾನೆ ತನ್ನ ಕೆಲಸದ ಮೇಲೆ ಸರಿಯಾಗಿ ಗಮನ ವಹಿಸುವುದಿಲ್ಲ. ಅದರ ಕಾರಣದಿಂದ ಅವರ ಪ್ರಗತಿ ಆಗುವುದಿಲ್ಲ ಒಬ್ಬ ಯಶಸ್ವಿ ವ್ಯಕ್ತಿ ತನ್ನ ಕೆಲಸವನ್ನು ಯಾವಾಗಲೂ ಆಸಕ್ತಿಯಿಂದ ಮಾಡುತ್ತಾನೆ. ದಿನಪೂರ್ತಿ ಚಟುವಟಿಕೆಯಿಂದ ಇರುವುದಕ್ಕೆ ಅವರು ಒಳ್ಳೆಯ ಪ್ರಮಾಣದ ಆಹಾರವನ್ನು ಸೇವಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ವ್ಯಾಯಾಮವನ್ನು ಕೂಡ ಮಾಡುತ್ತಾರೆ.

ನಾಲ್ಕನೆಯದು ಕೆಟ್ಟದಾಗಿ ಮಾತನಾಡುವುದು. ಯಾವ ವ್ಯಕ್ತಿ ಇನ್ನೊಬ್ಬರ ಜೊತೆ ಹೀನವಾಗಿ ಮಾತನಾಡುತ್ತಾನೆ ಮತ್ತು ಅಹಂಕಾರ ಮಾಡುತ್ತಾನೆ ಅಂತಹ ವ್ಯಕ್ತಿಯ ಹತ್ತಿರ ಲಕ್ಷ್ಮಿ ಎಂದಿಗೂ ವಾಸಿಸುವುದಿಲ್ಲ. ಯಾಕೆಂದರೆ ಅಹಂಕಾರದಿಂದ ಆ ವ್ಯಕ್ತಿ ತನ್ನ ಸ್ನೇಹಿತರನ್ನು ಸಂಬಂಧಿಕರನ್ನು ಕಳೆದುಕೊಳ್ಳುತ್ತಾರೆ ಮತ್ತು ಯಾವಾಗ ಅವರಿಗೆ ಕಷ್ಟ ಬರುತ್ತದೆ ಆಗ ಸಹಾಯ ಮಾಡುವುದಕ್ಕೆ ಯಾರೂ ಬರುವುದಿಲ್ಲ. ಅಂಥವರನ್ನ ಯಾರು ಗೌರವಿಸುವುದಿಲ್ಲ ಮತ್ತು ಯಾರು ಯಶಸ್ಸನ್ನು ಕಂಡಿರುತ್ತಾರೆ ಅವರು ಎಲ್ಲರ ಬಳಿ ಸಿಹಿಯಾಗಿ ಮಾತನಾಡುತ್ತಾರೆ ಜನರನ್ನ ಗಳಿಸುತ್ತಾರೆ.

ಈ ರೀತಿಯಾಗಿ ಆಚಾರ್ಯ ಚಾಣಕ್ಯ ಅವರ ಮಾತುಗಳು ನಮ್ಮ ಜೀವನ ಯಶಸ್ವಿ ಹಾಗೂ ಸಮೃದ್ಧಿ ಆಗುವುದಕ್ಕೆ ಸಹಾಯಕವಾಗುತ್ತದೆ. ಚಾಣಕ್ಯರು ಹಲವಾರು ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡಿ ಈ ವಿಚಾರಗಳನ್ನು ಕಂಡುಕೊಂಡಿದ್ದಾರೆ ನಿಮ್ಮಲ್ಲಿ ಈ ರೀತಿಯ ಕೆಟ್ಟ ಗುಣಗಳು ಇದ್ದರೆ ಅವುಗಳನ್ನು ದೂರ ಮಾಡಿಕೊಂಡು ಉತ್ತಮವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

Leave A Reply

Your email address will not be published.