ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು.ವಿಷ್ಣುಗುಪ್ತ ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ರಾಜನೀತಿಯನ್ನು ಹೊರತುಪಡಿಸಿ, ಜೀವನ ದರ್ಶನದ ಬಗ್ಗೆಯೂ ಆಚಾರ್ಯ ಚಾಣಕ್ಯ ಸಾಕಶ್ಟು ಜ್ಞಾನದ ಮಾತುಗಳನ್ನು ಆಡಿದ್ದಾರೆ. ಅವರ ಶಿಕ್ಷಣದ ನೀತಿಗಳು ಬಹುತೇಕರಿಗೆ ಸುಖಿ ಜೀವನದ ಮಂತ್ರ ಕಲಿಸಿಕೊಟ್ಟಿದೆ. ವ್ಯಕ್ತಿಯೋರ್ವ ತನ್ನ ಜೀವನದಲ್ಲಿ ಎಷ್ಟು ಸುಖಿಯಾಗಿರುತ್ತಾನೆ ಎನ್ನುವದನ್ನು ಸಹ ಚಾಣಕ್ಯ ಚನ್ನಾಗಿ ವಿವರಿಸಿದ್ದಾರೆ. ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತೆ ಚಾಣಕ್ಯನು ಅನೇಕ ವಿಷಯಗಳನ್ನು ತನ್ನ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾನೆ. ಹಾಗೇ ಮಹಿಳೆಯರ ಮತ್ತು ಪುರುಷರ ಗುಣಗಳ ಬಗ್ಗೆಯೂ ವಿವರಿಸಿದ್ದಾನೆ. ಚಾಣಕ್ಯನ ಪ್ರಕಾರ, ಮಹಿಳೆಯರು ಈ ವಿಷಯಗಳಲ್ಲಿ ಪುರುಷರಿಗಿಂತ ಮುಂದಿರುತ್ತಾರಂತೆ. ಹಾಗಾದರೆ ಮಹಿಳೆಯರು ಯಾವ ವಿಷಯಗಳಲ್ಲಿ ಪುರುಷರಿಗಿಂತ ಮುಂದಿರುತ್ತಾರೆ? ಆ ವಿಷಯಗಳು ಯಾವುದು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಆಚಾರ್ಯ ಚಾಣಕ್ಯ ಅವರು ಮಾನವರ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಮ್ಮ ನೀತಿ ಗ್ರಂಥದಲ್ಲಿ ಅಂದರೆ , ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಸಂತೋಷ, ಸಮೃದ್ಧಿ, ಸಂಪತ್ತು, ಸ್ನೇಹಿತ-ಶತ್ರು, ಕುಟುಂಬ ಜೀವನ, ಸಾಮಾಜಿಕ ಜೀವನ ಸೇರಿದಂತೆ ಎಲ್ಲಾ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿದ ನಂತರ ಚಾಣಕ್ಯ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ನೀಡಿದ್ದಾರೆ. ಚಾಣಕ್ಯ ನೀತಿಯು ಮಹಿಳೆಯರು ಮತ್ತು ಪುರುಷರ ಗುಣಗಳ ಬಗ್ಗೆಯೂ ಮಾತನಾಡುತ್ತದೆ. ಒಂದು ಶ್ಲೋಕದ ಮೂಲಕ, ನಾಲ್ಕು ಪ್ರಕರಣಗಳಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿರುತ್ತಾರೆಂದು ಚಾನಕ್ಯ ತನ್ನ ನೀತಿಯಲ್ಲಿ ಹೇಳಿದ್ದಾನೆ. ಹಾಗಾದರೆ ಮಹಿಳೆಯರು ಯಾವ ವಿಷಯಗಳಲ್ಲಿ ಪುರುಷರಿಗಿಂತ ಮುಂದಿರುತ್ತಾರೆ..? ಆ ವಿಷಯಗಳಾವುವು..?
ಆಹಾರದ ಅಂದರೆ ಭೋಜನದ ವಿಷಯದಲ್ಲಿ.ಚಾಣಕ್ಯ ನೀತಿಯಲ್ಲಿ ಆಹಾರ ಮತ್ತು ಭೋಜನದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿರುತ್ತಾರೆ ಎಂದಿದ್ದಾನೆ. ಒಂದು ಶ್ಲೋಕದಲ್ಲಿ, ಸ್ತ್ರೀಣಾಂ ದಿವಗುಣ ಆಹಾರೋ ಎಂಬ ಪದವು ಮಹಿಳೆಯರ ಹಸಿವಿಗೆ ಸಂಬಂಧಿಸಿದೆ. ಚಾಣಕ್ಯನ ಪ್ರಕಾರ, ಪುರುಷರಿಗಿಂತ ಮಹಿಳೆಯರು ಹೆಚ್ಚು ಹಸಿವಿನಿಂದ ಬಳಲುತ್ತಾರೆ. ವಾಸ್ತವವಾಗಿ, ಮಹಿಳೆಯರಿಗೆ ಅವರ ದೈಹಿಕ ರಚನೆಗೆ ಅನುಗುಣವಾಗಿ ಹೆಚ್ಚಿನ ಕ್ಯಾಲೊರಿಗಳು ಬೇಕಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪುರುಷರಿಗಿಂತ ಮಹಿಳೆಯರು ಹೆಚ್ಚು ಹಸಿವು ಮತ್ತು ಆಹಾರವನ್ನು ಅನುಭವಿಸುವುದು ಸಹಜ. ಹಾಗಾಗಿ ಅವರು ಯಾವಾಗಲೂ ಪುರುಷರಿಗಿಂತ ಹೆಚ್ಚು ಅಹಾರವನ್ನು ಸೇವಿಸುತ್ತಾರೆ.
ಆಚಾರ್ಯ ಚಾಣಕ್ಯರ ವಚನಗಳ ಪ್ರಕಾರ ಮಹಿಳೆಯರಿಗೆ ಬುದ್ಧಿವಂತಿಕೆಯ ಗುಣಗಳಿವೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತಿಕೆಯಿಂದ ಮತ್ತು ಚಾಣಾಕ್ಷತನದಿಂದ ಕುಟುಂಬ ಜೀವನವನ್ನು ನಡೆಸುತ್ತಾರೆ. ಬುದ್ಧಿವಂತಿಕೆಯಿಂದ, ಮಹಿಳೆಯರಿಗೆ ಕುಟುಂಬದ ಜವಾಬ್ದಾರಿಗಳನ್ನು ಮತ್ತು ಕಾರ್ಯಗಳನ್ನು ಬಹಳ ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ. ಮಹಿಳೆಯರು ಪುರುಷರಿಗಿಂತ ಬುದ್ಧಿವಂತರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಆಚಾರ್ಯ ಚಾಣಕ್ಯ ಹೇಳಿದ್ದಾನೆ. ಚಾಣಕ್ಯನು ತನ್ನ ನೀತಿಯಲ್ಲಿ ಮಹಿಳೆಯರನ್ನು ಧೈರ್ಯಶಾಲಿ ಎಂದು ಬಣ್ಣಿಸಿದ್ದಾನೆ. ಹೇಗಾದರೂ, ನಮ್ಮ ಸಮಾಜದಲ್ಲಿ, ಪುರುಷರನ್ನು ಸಾಮಾನ್ಯವಾಗಿ ಮಹಿಳೆಯರಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಧೈರ್ಯಶಾಲಿ ಎಂದು ಪರಿಗಣಿಸಲಾಗುತ್ತದೆ. ಚಾಣಕ್ಯರ ಪ್ರಕಾರ, ಪ್ರತಿಕೂಲ ಸಂದರ್ಭಗಳಲ್ಲೂ ಮಹಿಳೆಯರು ಧೈರ್ಯದಿಂದ ಎದ್ದು ನಿಲ್ಲುತ್ತಾರೆ, ಆದ್ದರಿಂದ ಮಹಿಳೆಯರು ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳು ಎಂದು ಹೇಳಿದ್ದಾನೆ.
ಚಾಣಕ್ಯನು ತನ್ನ ನೀತಿಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಮುಕ ಸ್ವಭಾವವನ್ನು ಹೊಂದಿರುತ್ತಾರೆಂದು ಹೇಳಿದ್ದಾನೆ. ಚಾಣಕ್ಯನ ಈ ಪದ್ಯದ ಪ್ರಕಾರ, ಪುರುಷರಿಗಿಂತ ಮಹಿಳೆಯರಿಗೆ ಲೈಂಗಿ ಕತೆಯ ಭಾವನೆ ಹೆಚ್ಚು ಎಂದು ಪ್ರಸ್ತುತಪಡಿಸುತ್ತದೆ. ವಿಜ್ಞಾನವು ಕೂಡ ಇದನ್ನೇ ಹೇಳುತ್ತದೆ. ಚಾಣಕ್ಯನ ಪ್ರಕಾರ, ಈ ಮೇಲಿನ ಎಲ್ಲಾ ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿರುತ್ತಾರೆ ಮತ್ತು ವೇಗವಾಗಿರುತ್ತಾರೆ ಎಂದು ಹೇಳಿದ್ದಾನೆ. ಕೆಲವರಿಗೆ ಇದು ಸರಿಯೆನಿಸಬಹುದು ಮತ್ತು ಕೆಲವರಿಗೆ ಇದು ತಪ್ಪೆನಿಸಬಹುದು ಆದರೆ ಇದು ತಜ್ಞ ಅರ್ಥಶಾಸ್ತ್ರಜ್ಞನಾದ ಚಾಣಕ್ಯನ ದೃಷ್ಟಿಕೋನವಾಗಿರುತ್ತದೆ.