ಕೆಲವು ಘಟನೆಗಳು ಅಚಾನಕ್ ಆಗಿ ನಡೆಯುತ್ತವೆ ಆದರೆ ಅದನ್ನು ನಾವು ನಂಬುವುದಿಲ್ಲ. ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದನ್ನು ನೋಡಿದಾಗ ನಂಬಲೇ ಬೇಕು. ಅಂತಹ ಕೆಲವು ಆಶ್ಚರ್ಯಕರ ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ನಾವು ಸಂತೋಷವಾಗಿರಲು ಸೈನಿಕರು ಕಾರಣ. ಕಠಿಣ ಪರಿಸ್ಥಿಯಲ್ಲೂ ನಮ್ಮ ದೇಶವನ್ನು ಕಾಯುತ್ತಾರೆ. ಎಷ್ಟೋ ಕುತಂತ್ರವನ್ನು ತಡೆಯಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸೈನಿಕರು ಕೇವಲ ದೇಶದ ಗಡಿಗಳಲ್ಲಿ ಮಾತ್ರ ಇರದೆ ದೇಶದ ಒಳಗೆ ಸಮಸ್ಯೆ ಬಂದರೂ ಅವರು ಇರುತ್ತಾರೆ. ಒಮ್ಮೆ ಸ್ಟೇಷನ್ ಗೆ ರೈಲು ಬರುತ್ತದೆ ಅದರ ಪಕ್ಕ ಸೈನಿಕನೊಬ್ಬ ಕುಳಿತು ಕೊಂಡಿರುತ್ತಾನೆ ಸ್ವಲ್ಪ ಸಮಯದ ನಂತರ ರೈಲು ಮೂವ್ ಆಗುತ್ತದೆ ಆಗ ಒಬ್ಬ ತಾಯಿ ತನ್ನ ಮಗಳೊಂದಿಗೆ ಓಡೋಡಿ ಹೋಗಿ ರೈಲನ್ನು ಹತ್ತುವಾಗ ಮಗಳ ಕಾಲು ರೈಲಿನ ಕೆಳಗೆ ಸಿಕ್ಕಿ ಹಾಕಿಕೊಳ್ಳುತ್ತದೆ ಅದನ್ನು ನೋಡಿದ ಸೈನಿಕ ವೇಗವಾಗಿ ಹೋಗಿ ಮಗುವನ್ನು ಕಾಪಾಡಿದ್ದಾರೆ. ಮೂರು ಜನ ಹೆಣ್ಣುಮಕ್ಕಳು ಖಾಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಬೈಕ್ ನಲ್ಲಿ ಇರುವ ಒಬ್ಬ ವ್ಯಕ್ತಿ ಒಂದು ಕಾರು ಅವರನ್ನು ಫಾಲೋ ಮಾಡುತ್ತಿರುವುದನ್ನು ನೋಡುತ್ತಾನೆ. ಅವನು ಹೆಣ್ಣುಮಕ್ಕಳ ಹತ್ತಿರ ಹೋಗಿ ನಿಮ್ಮನ್ನು ಯಾರು ಫಾಲೋ ಮಾಡುತ್ತಿದ್ದಾರೆ ಎಂದು ಹೇಳಿ ಅವರು ಸೇಫ್ ಆದ ಜಾಗಕ್ಕೆ ಹೋಗುವವರೆಗೂ ಅವರ ಜೊತೆ ಇರುತ್ತಾನೆ.

ಜಪಾನಿನಲ್ಲಿ ಜೂನಿಯರ್ ಬಾಸ್ಕೆಟ್ ಬಾಲ್ ಆಟದಲ್ಲಿ ವೈಟ್ ಟೀಮ್ ಗೆ ಗೆಲ್ಲುವ ಅವಕಾಶವಿರುತ್ತದೆ ಆಟ ಮುಗಿಯಲು 2 ಸೆಕೆಂಡ್ ಬಾಕಿ ಇರುತ್ತದೆ ಆಗ ವೈಟ್ ಟೀಮ್ ಗೆ 2 ಫ್ರೀ ಥ್ರೋ ಸಿಗುತ್ತದೆ. ವೈಟ್ ಟೀಮ್ ಒಂದು ಥ್ರೋ ಸರಿಯಾಗಿ ಹಾಕಿ ನಾವು ಗೆದ್ದಿದ್ದೇವೆ ಎಂದು ತಿಳಿದು ಸೆಲೆಬ್ರೇಟ್ ಮಾಡುತ್ತಾರೆ ಆಗ ಬ್ಲ್ಯೂ ಟೀಮ್ ನಲ್ಲಿದ್ದ ಹುಡುಗ ಒಂದು ಕೈಯಿಂದ ಬಾಲ್ ನ್ನು ಎಸೆಯುತ್ತಾನೆ, ಅದು ಸರಿಯಾಗಿ ಕೋರ್ಟ್ ಒಳಗಡೆ ಬೀಳುತ್ತದೆ ಇದರಿಂದ ವೈಟ್ ಟೀಮ್ ಆಕಸ್ಮಿಕವಾಗಿ ಸೋಲುತ್ತದೆ. ಒಬ್ಬರು ಕಾರನ್ನು ಪಾರ್ಕ್ ಮಾಡಿ ಅರ್ಜೆಂಟಾಗಿ ಅವರ ಸ್ನೇಹಿತರನ್ನು ಮೀಟ್ ಮಾಡಲು ಹೋಗುತ್ತಾರೆ ಆದರೆ ಅವರು ಅವಸರದಲ್ಲಿ ಕಾರಿಗೆ ಹಾಂಡ್ ಬ್ರೇಕ್ ಹಾಕುವುದನ್ನು ಮರೆತು ಹೋಗಿದ್ದರು. ಆಗ ಕಾರು ಹಿಂದಕ್ಕೆ ಬಂದು ನೀರಿನೊಳಗೆ ಬಿದ್ದುಹೋಗುತ್ತದೆ. ಒಬ್ಬ ವ್ಯಕ್ತಿ ಮನೆಹೊರಗೆ ನಾಯಿಜೊತೆ ಆಟವಾಡುತ್ತಾ ವೇಗವಾಗಿ ಮನೆಯ ಒಳಗೆ ಬರುತ್ತಾನೆ ಆಗ ನಾಯಿ ಸೋಫಾಮೇಲೆ ಜಂಪ್ ಮಾಡಲು ಹೋಗಿ ಗ್ಲಾಸ್ ಟೇಬಲ್ ಮೇಲೆ ಬೀಳುತ್ತದೆ ಇದರಿಂದ ಗ್ಲಾಸ್ ಟೇಬಲ್ ಒಡೆದು ಹೋಗುತ್ತದೆ. ಹೀಗೆ ಇನ್ನು ಅನೇಕ ಈ ರೀತಿಯ ಸ್ವಾರಸ್ಯಕರ ಘಟನೆಗಳನ್ನು ನೋಡಬಹುದು.

Leave a Reply

Your email address will not be published. Required fields are marked *